Showing posts with label ಅಲ್ಲಿಂದಲ್ಲೆದೆಮಾ ಅಲ್ಲಿಂದಲ್ಲೆದೆ ಘನಗುರುಮಹಿಮೆ mahipati. Show all posts
Showing posts with label ಅಲ್ಲಿಂದಲ್ಲೆದೆಮಾ ಅಲ್ಲಿಂದಲ್ಲೆದೆ ಘನಗುರುಮಹಿಮೆ mahipati. Show all posts

Wednesday, 1 September 2021

ಅಲ್ಲಿಂದಲ್ಲೆದೆಮಾ ಅಲ್ಲಿಂದಲ್ಲೆದೆ ಘನಗುರುಮಹಿಮೆ ankita mahipati

 

ಕಾಖಂಡಕಿ ಶ್ರೀ ಮಹಿಪತಿರಾಯರು

ಅಲ್ಲಿಂದಲ್ಲೆದೆಮಾ ಅಲ್ಲಿಂದಲ್ಲೆದೆ ಘನಗುರುಮಹಿಮೆ P

ಅಲ್ಲಿಂದಲ್ಲಿದ್ದು ತಿಳಿಯದು ಲೋಕಾ 1 ಅಲ್ಯಾವನಾದರ ಅಲ್ಲೆವೇ ತಿಳಿದಾ 2 ಬಲ್ಲಮಹಿಮರ ಬಲಗೊಂಡು ಕೇಳಿ 3 ಒಳಗಲ್ಲ ಹೊರಗಲ್ಲ ಒಳಿತಾಗಿ ಕೇಳಿ4 ಕೆಳಗಲ್ಲ ಮ್ಯಾಲಲ್ಲ ತಿಳಿದುಕೊಂಡು ನೋಡಿ 5 ಹಿಂದಲ್ಲ ಮುಂದಲ್ಲ ಸಂಧಿಸಿ ನೋಡಿ 6 ಎಡಕಲ್ಲ ಬಲಕಲ್ಲ ಪಡಕೊಂಡು ನೋಡಿ 7 ದೂರಲ್ಲ ಸಾರ್ಯಲ್ಲ ಅರಿತಿನ್ನು ನೋಡಿ 8 ಬೆಡಗಿನ ಮಾತಲ್ಲ ಕಡಗಂಡು ನೋಡಿ 9 ಸ್ಥೂಲಲ್ಲ ಸೂಕ್ಷ್ಮಲ್ಲ ಭೇದಿಸಿ ನೋಡಿ 10 ಮನದಿರಗಿ ಉನ್ಮನವಾಗಲಿಕ್ಕೆ 11 ಕಣ್ಣದಿರಗಿ ಕಣ್ಣ ನೋಡಲಿಕ್ಕೆ 12 ಎಚ್ಚತ್ತು ಅಲ್ಲಿವೆ ಯೋಚಿಸಲಿಕ್ಕೆ 13 ಅರವಿನ ಮುಂದ ಮರವಿನ ಹಿಂದ 14 ಜಾಗ್ರ ನಿದ್ರಿ ಮಧ್ಯ ಅರುವಾಗಲಿಕ್ಕೆ 15 ಗುರುಕೃಪೆಯಿಂದಲಿ ಗುರುತಿಟ್ಟು ನೋಡಿ16 ಸಾಧಕನಾದರ ಸಾಧಿಸಬಹುದಿದು 17 ಭೇದಿಸೇನೆಂದರೆ ಭೇದಿಸಬಹುದಿದು 18 ಸೂರ್ಯಾಡೇನಂದರ ಸೂರ್ಯಾಡಬಹುದಿದು 19 ಖೂನಹೇಳಿದ ಮ್ಯಾಲ ಙÁ್ಞನೇನಬಹುದು 20 ಹೆಜ್ಜೆ ಹೇಳಿದ ಮ್ಯಾಲ ಸಜ್ಜನ ಅವನೀಗ 21 ಚೆನ್ನಾಗ್ಹೇಳಿದ ಮ್ಯಾಲ ಮನ್ನಿಸಬಹುದಿದು 22 ಗುರುತಹೇಳಿದ ಮ್ಯಾಲ ಗುರುಸ್ವರೂಪ ತಾಂ 23 ಸರಗಹೇಳಿದ ಮ್ಯಾಲ ಶರಣೆಂಬುದಾತಗ 24 ಅಲ್ಲಿಂದಲ್ಲೆಂಬುದನುಭವಾಗಬೇಕು 25 ಅನುಭವದೋರಿದ ಘನಗುರು ನಮ್ಮಯ್ಯ 26 ಲೇಸು ಲೇಸು ನಮ್ಮ ಭಾಸ್ಕರ ಗುರುದಯ 27 ಭಾಸುತ ಭಾಸ್ಕರಕೋಟಿ ತೇಜಾದನು 28 ದಾಸಮಹಿಪತಿಗೆ ಲೇಸು ಲೇಸಾಯಿತು 29

****