Showing posts with label ಹರಿಹರರು ಸರಿಯೆಂಬ ಅರಿಯದ purandara vittala. Show all posts
Showing posts with label ಹರಿಹರರು ಸರಿಯೆಂಬ ಅರಿಯದ purandara vittala. Show all posts

Saturday, 7 December 2019

ಹರಿಹರರು ಸರಿಯೆಂಬ ಅರಿಯದ purandara vittala

ಪುರಂದರದಾಸರು
ಹರಿ ಹರರು ಸರಿಯೆಂಬ ಅರಿಯದ ಜ್ಞಾನಿಗಳು |ಹರನ ಹೃದಯದೊಳಿರುವ ಹರಿಯ ತಾವರಿಯರು ಪ.

ಶರಧಿ ಮಥನದಲಂದುಸಿಂಧುಸುತೆ ಬಂದಾಗ |ಹರಿ - ಹರ -ವಿರಂಚಿ ಮೊದಲಾದ ಸುರರ ||ನೆರೆ ಒರೆದು ನೋಡಿ ಶಂಕೆಯ ಬಿಟ್ಟು ಸಿರಿದೇವೀಹರಿಸರ್ವಪರನೆಂದು ಮಾಲೆ ಹಾಕಿದಳು1

ಹರಿನಾಮ ಕ್ಷೀರವದು ಹರನಾಮ ನೀರು ಅದು |ಕ್ಷೀರ ನೀರೊಂದಾದುದಂತೆ ಇಹುದು ||ಒರೆದಾಡಿ ಪರತತ್ತ್ವವರಿಯದಾನರ ತಾನು |ಹರಿ- ಹರರು ಸರಿಯೆಂದು ನರಕಕೆಳಸುವನು2

ಕ್ಷೋಣಿಯೊಳು ಬಾಣನ - ತೋಳುಗಳ ಕಡಿವಾಗ |ಏಣಾಂಕಧರ ಬಾಗಿಲೊಳಗೆ ಇರಲು |ಕಾಣರೇ ಜನರೆಲ್ಲಹರಿ ಪರನು ತಾನೆಂದು |ಪೂರ್ಣಗುಣ ಪುರಂದರವಿಠಲನೇ ಪರನು 3
********