ನೀನೇ ಅನಾಥಬಂಧು ಕಾರುಣ್ಯಸಿಂಧು ||ಪ||
ಮದಗಜವೆಲ್ಲ ಕೂಡಿದರೇನು
ಅದರ ಸಮಯಕೊದಗಲಿಲ್ಲ
ಮದನಯ್ಯ ಮಧುಸೂದನನೆಂದರೆ
ಮುದದಿಂದಲಿ ಬಂದೊದಗಿದೆ ಕೃಷ್ಣ ||
ಪತಿಗಳೈವರಿದ್ದರೇನು
ಸತಿಯ ಭಂಗಕೊದಗಲಿಲ್ಲ
ಗತಿ ನೀನೇ ಮುಕುಂದನೆಂದರೆ
ಅತಿವೇಗದಿ ಅಕ್ಷಯವಿತ್ತೆ ಕೃಷ್ಣ ||
ಶಿಲೆಯ ಮೆಟ್ಟಿ ಕುಲಕೆ ತಂದೆ
ಬಲಿಯ ಬೇಡಿ ಸತ್ಪದವಿಯನಿತ್ತೆ
ಸುಲಬಧಿ ಭಕ್ತರ ಸಲಹುವ ನಮ್ಮ
ಚೆಲುವ ಪುರಂದರವಿಠಲರಾಯ ||
***
ಮದಗಜವೆಲ್ಲ ಕೂಡಿದರೇನು
ಅದರ ಸಮಯಕೊದಗಲಿಲ್ಲ
ಮದನಯ್ಯ ಮಧುಸೂದನನೆಂದರೆ
ಮುದದಿಂದಲಿ ಬಂದೊದಗಿದೆ ಕೃಷ್ಣ ||
ಪತಿಗಳೈವರಿದ್ದರೇನು
ಸತಿಯ ಭಂಗಕೊದಗಲಿಲ್ಲ
ಗತಿ ನೀನೇ ಮುಕುಂದನೆಂದರೆ
ಅತಿವೇಗದಿ ಅಕ್ಷಯವಿತ್ತೆ ಕೃಷ್ಣ ||
ಶಿಲೆಯ ಮೆಟ್ಟಿ ಕುಲಕೆ ತಂದೆ
ಬಲಿಯ ಬೇಡಿ ಸತ್ಪದವಿಯನಿತ್ತೆ
ಸುಲಬಧಿ ಭಕ್ತರ ಸಲಹುವ ನಮ್ಮ
ಚೆಲುವ ಪುರಂದರವಿಠಲರಾಯ ||
***
ರಾಗ ನಾದನಾಮಕ್ರಿಯಾ ಛಾಪುತಾಳ
(ರಾಗ ತೋಡಿ ಅಟತಾಳ)
Nine anathabandhu karunyasimdhu||pa||
Madagajavella kudidarenu adara vyalyake odagalilla
Madananayya madhusudana ennalu
Mudadindali bamdodagide krushna||1||
Patigalaivariddarenu satiya Banga bidisalilla
Gati nine mukunda ennalu
Ativegadi akshayavitte krushna||2||
Sileya rakshisi kulake tamde balige olidu padaviyitte
Sulabadi Baktara saluhuva namma
Celuva purandaravitthalaraya||3||
****
pallavi
nInE anAtha bandhu kAruNya sindhu
caraNam 1
patigaiLiddarEnu satiya bhangakodagalilla
gati nInE mukundanendareativEgadi akSayavitte krSNa
caraNam 2
matagajavella kUDidarEnu adara samayakodagalilla
madanayya madhusUdananendare mundindali bandodagide krSNa
caraNam 3
shileya meTTi kulake tande baliya bEDi satpadaviyanitte
sulabadhi bhajisuva bhaktara salahuva celuva purandara viTTalarAya
***
ನೀನೆ ಅನಾಥಬಂಧು ಕಾರುಣ್ಯಸಿಂಧು||pa||
ಮದಗಜವೆಲ್ಲ ಕೂಡಿದರೇನು ಅದರ ವ್ಯಾಳ್ಯಕೆ ಒದಗಲಿಲ್ಲ
ಮದನನಯ್ಯ ಮಧುಸೂದನ ಎನ್ನಲು
ಮುದದಿಂದಲಿ ಬಂದೊದಗಿದೆ ಕೃಷ್ಣಾ||1||
ಪತಿಗಳೈವರಿದ್ದರೇನು ಸತಿಯ ಭಂಗ ಬಿಡಿಸಲಿಲ್ಲ
ಗತಿ ನೀನೇ ಮುಕುಂದ ಎನ್ನಲು
ಅತಿವೇಗದಿ ಅಕ್ಷಯವಿತ್ತೆ ಕೃಷ್ಣಾ||2||
ಶಿಲೆಯ ರಕ್ಷಿಸಿ ಕುಲಕೆ ತಂದೆ ಬಲಿಗೆ ಒಲಿದು ಪದವಿಯಿತ್ತೆ
ಸುಲಭದಿ ಭಕ್ತರ ಸಲುಹುವ ನಮ್ಮ
ಚೆಲುವ ಪುರಂದರವಿಟ್ಠಲರಾಯ||3||
*****