ಮೋಸ ಹೋದೆನಲ್ಲೋ ನಾನು ಮೋಸ ಹೋದೆನಲ್ಲೋ ।p।
ಶೇಷಶಯನನಿಗೆ ಸೇವಕನಾಗದೆ ವಾಸುದೇವನಿಗೆ ದಾಸನಾಗದೆ
ಮಲ್ಲಿಗೆ ಮೊಲ್ಲೆ ಮರುಗ ದವನ ತಂದು ಪುಲ್ಲಜಾಕ್ಷನ ಪೂಜೆಯ ಮಾಡದೆ
ಯವ್ವನದಲ್ಲಿ ಶ್ರೀ ಹರಿಪದ ನಂಬದೆ ಮೂವತ್ತು ವರುಷ ಮೋಹಾಗ್ನಿಯಲ್ಲಿ ಬಿದ್ದು
ಸತ್ಯಭಾಮೆ ಸರಸನ ಕೊಂಡಾಡದೆ ಮೃತ್ಯು ಭಟರ ಕೈ ಕತ್ತಿಗೆ ಗುರಿಯಾಗಿ
ಲಜ್ಜೆ ಬಿಟ್ಟು ನಾ ಗೆಜ್ಜೆ ಕಟ್ಟಿಕೊಂಡು ಸಜ್ಜನರೊಂದಿಗೆ ಸರ್ವದ ಕುಣಿಯದೆ
ಸರವರ ತರುವಾಗಿ ಸುಸ್ತಿರವಾದಂತ ಪುರಂದರ ವಿಠಲನ ಚರಣಾವ ಪಿಡಿಯದೆ
***
pallavi
mOsa hOdenallO nAnu nOsa hOdenallO
caraNam 1
shESa shayananige sEvakanAgade vAsudEvanige dAsanAgade
caraNam 2
mallige mulle maruga davana tandu pullAbjAkSana pUjeya mADade
caraNam 3
yauvanadalli shrI haripada nambade mUvattu varuSa mOhAbdiyalli biddu
caraNam 4
lajje biTTu nA gajje kaTTi koNDu sajjarondige sarvadA kuNiyADe
caraNam 5
suravara taruvAgi su-sthiravara vAdanta purandara viTTalana caraNava piDiyade
***