Showing posts with label ಕೌತುಕ ಲಕುಮಿನಾಥನು ಒಲಿದದ್ದು ramesha. Show all posts
Showing posts with label ಕೌತುಕ ಲಕುಮಿನಾಥನು ಒಲಿದದ್ದು ramesha. Show all posts

Monday, 11 November 2019

ಕೌತುಕ ಲಕುಮಿನಾಥನು ಒಲಿದದ್ದು ankita ramesha

by ಗಲಗಲಿಅವ್ವನವರು
ಕೌತುಕಲಕುಮಿನಾಥನು ಒಲಿದದ್ದು ಭೂತಳದೊಳಗÀಂಜೋದ್ಯಾತರ ಮಾತಿದು ಪ.

ವೇದ ತಂದಾತನ ಪಾದವ ನೋಡಿ ನೋಡಿಮೋದಬಟ್ಟನುಬೊಮ್ಮಮಾಧವಅಂಜಿದ್ದು1

ಮಂದಾರಗಿರಿಎತ್ತಿ ತಂದ ಅಮೃತವನ್ನುಆನಂದ ಬಟ್ಟನುಬೊಮ್ಮಇಂದೈವರು ಅಂಜಿದ್ದು2

ಧರಣಿ ತಂದಾತನ ವರಹಾ ಸುರರರಿಗೆ ಸುಖವಿತ್ತುದೊರೆ ಧರ್ಮನ ಕಂಡುಪರಮಭೀತನಾದ3

ನರಸಿಂಹ ದೈತ್ಯನ ವಧಿಸಿಬಿಟ್ಟನೆಂದುಹರುಷವಾದನುಬೊಮ್ಮಅರಸ ಅಂಜಿದ್ದು4

ವಾಮನ ರೂಪಕ್ಕೆ ಕಾಮ ಮೋಹಿತರಾಗಿಶಾಮ ವರ್ಣನ ಕಂಡು ಭೀಮ ಭೀತನಾದ 5

ಜ್ಞಾನಿಗಳು ಭಾರ್ಗವನ ಧೇನಿಸಿ ನಮಿಸೋರು ಏನೆಂಬೆಪಾರ್ಥನು ತಾ ನೋಡಿ ಅಂಜಿದ್ದು 6

ಚಲ್ವರಾಯನಗುಣಎಲ್ಲ ಮೋಹಿಸಬೇಕುನಲ್ಲಿ ದ್ರೌಪತಿದೇವಿಯ ವಲ್ಲಭರಂಜಿದ್ದು 7

ಕೃಷ್ಣಾವತಾರಗೆ ಎಷ್ಟು ಮೋಹಿಸುವವರುಧಿಟ್ಟ ನಕುಲರಾಯ ಇಷ್ಟೊಂದು ಅಂಜಿದ್ದು 8

ಬೌದ್ಧನ್ನ ಧೇನಿಸಿ ಸಿದ್ಧಿ ಪಡೆದವರೆಷ್ಟುರುದ್ರಾದಿ ವಂದ್ಯಗೆ ಬುದ್ದಿವಂತರು ಬೆದರ 9

ಚಲುವ ರಂಗಯ್ಯನು ಕುದುರೆ ಏರಿ ಬರಲುಬುದ್ಧರು ನಮಿಸುವರು ಹೆದರ ಸಹದೇವನು 10

ತಂದೆ ರಾಮೇಶನ ಕೊಂಡಾಡೊ ಗುಣವಿಲ್ಲಪುಂಡರಿಕಾಕ್ಷಗೆ ಪಾಂಡವ ರಂಜಿಸಿದ್ದು 11
*******