Showing posts with label ಆರುತಿ ಬೆಳಗುವೆ ನಾ ಸದ್ಗುರುವಿಗೆ ಭಾವದ ಪೊಂಬ್ಹರಿವಾಣ mahipati. Show all posts
Showing posts with label ಆರುತಿ ಬೆಳಗುವೆ ನಾ ಸದ್ಗುರುವಿಗೆ ಭಾವದ ಪೊಂಬ್ಹರಿವಾಣ mahipati. Show all posts

Wednesday, 1 September 2021

ಆರುತಿ ಬೆಳಗುವೆ ನಾ ಸದ್ಗುರುವಿಗೆ ಭಾವದ ಪೊಂಬ್ಹರಿವಾಣ ankita mahipati

 ಆರತಿ ಬೆಳಗುವೆ ನಾ ಸದ್ಗುರುವಿಗೆ ಪ 

ಭಾವದ ಪೊಂಬ್ಹರಿವಾಣ ಭಕುತಿಯಾ ತೀವಿದ್ಯಾರತಿಜ್ಞಾನ ಜ್ಯೋತಿಯಲಿತ್ತಿ1 

ಮುಖದಲಿ ನುಡಿಯುತ ನಾಮಾವಳಿಯೂ ಸಕಲರು ಪ್ರೇಮದಿ ಹಾಕಿ ಚಪ್ಪಾಳಿಯಾ2 

ನಯನದಿನೋಡಿ ಶರಣವ ಮಾಡೀ ಭಯವನೀಡಾಡಿ ಸ್ತುತಿಗಳ ಪಾಡಿ3 

ಇಂದಿನ ದಿನದಾನಂದವು ನಮಗ ಹಿಂದಿನ ಪುಣ್ಣ್ಯಿದಿರಿಟ್ಟಿತು ಈಗ 4 

ಒಡಲ್ಹೊಕ್ಕು ಮಹಿಪತಿನಂದನೊಡಿಯನಾ ಪಡೆಯ ಬನ್ನಿರೀಬ್ಯಾಗ ಮುಕುತಿಯ ಸಾಧನಾ5

***