RSS song
ತಾಯಿ ಭಾರತಿಯ ಪಾದಪದ್ಮಗಳ ಪೂಜಿಸೋಣ ಬನ್ನಿ |
ಹಿಂದು ಸಾಗರದ ಬಿಂದುಬಿಂದುಗಳೆ ಒಂದುಗೂಡಿ ಬನ್ನಿ || || ಪ ||
ಧ್ಯೇಯಭಾಸ್ಕರನ ದಿವ್ಯಕಿರಣಗಳ ನವ್ಯರಮ್ಯಲಾಸ್ಯ
ತರುಣರಂಗದೊಳು ಅರುಣಗೈಯುತಿಹ ನವೋದಯದ ನಾಟ್ಯ
ಬಾಹುಬಾಹುಗಳ ಸ್ಫುರಣಗೊಳಿಸುತಲಿ ನಲಿಯುತೀಗ ಬನ್ನಿ || || 1 ||
ಶಕ್ತಿಯಿಂದ ಅಭಿವ್ಯಕ್ತಗೊಳಿಸಿರೈ ದೇಶಭಕ್ತಿಯನ್ನು
ತಪ್ತಮನಗಳಲಿ ಸುಪ್ತವಾಗಿರುವ ಧ್ಯೇಯದೀಪ್ತಿಯನ್ನು
ತ್ಯಾಗ ಸಾಹಸದ ಪುಷ್ಪಮಾಲೆಯನು ತಾಯ್‍ಗೆ ತೊಡಿಸಬನ್ನಿ || || 2 ||
ಮಾತೃಭೂಮಿಯ ವಿಚ್ಛಿದ್ರಗೊಳಿಸುತಿರೆ ಕ್ಷುದ್ರ ಅರಿಯ ಸಂಚು
ಪ್ರಲಯರುದ್ರನುರಿಗಣ್ಣ ತೆರೆಸಿರೈ ಹರಿಸಿ ಪ್ರಖರ ಮಿಂಚು
ಶಸ್ತ್ರಶಾಸ್ತ್ರಗಳ ಅಸ್ತ್ರಚಾಲನೆಗೆ ಸಿದ್ಧರಾಗಿ ಬನ್ನಿ || || 3 ||
ಭರತಭೂಮಿಯಲಿ ಭರದಿ ಭೋರಿಡಲಿ ದಿವ್ಯ ಪಾಂಚಜನ್ಯ
ಯೋಗಯಾಗಗಳ ತ್ಯಾಗಭೂಮಿಯಲಿ ಜನಿಸಿದವರೆ ಧನ್ಯ
ನಾಡರಕ್ಷಣೆಗೆ ಬಾಳಕ್ಷಣಕ್ಷಣವ ಮುಡಿಪು ನೀಡಬನ್ನಿ || || 4 ||
***