Showing posts with label ಇದ್ದರಿರಬೇಕು ಅನುದಿನಾ ಒಳ್ಳೆವರ ಸಹವಾಸಾ gurumahipati. Show all posts
Showing posts with label ಇದ್ದರಿರಬೇಕು ಅನುದಿನಾ ಒಳ್ಳೆವರ ಸಹವಾಸಾ gurumahipati. Show all posts

Thursday, 2 September 2021

ಇದ್ದರಿರಬೇಕು ಅನುದಿನಾ ಒಳ್ಳೆವರ ಸಹವಾಸಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಇದ್ದರಿರಬೇಕು ಅನುದಿನಾ | ಒಳ್ಳೆವರ ಸಹವಾಸಾ ಪ 

ಅಂಗಸಂಗಗಳಿಂದ | ಮಂಗಳೋತ್ಸಾಹವಾಗಿ | ಕಂಗಳಿಗಿದಿರಿಡುವದು ಉಲ್ಹಾಸಾ1 
ಸಾರಿ ಬೀರಿ ಬೋಧವಾ | ದಾರಿದೋರಿ ಭಕ್ತಿಯಾ | ದೂರ ಮಾಡುವರು | ಭವಭಯ ಕ್ಲೇಶಾ 2 
 ಮಹಿಪತಿಸುತಪ್ರಭು ಸ್ಮರಣೆಯಾ | ಮರಹು ಮರೆಸುವರದರುದ್ದೇಶಾ 3
***