ಶ್ರೀ ಪುರಂದರದಾಸಾರ್ಯ ವಿರಚಿತ
ಶ್ರೀಹರಿ ಮಹಿಮಾ ಸುಳಾದಿ
ರಾಗ : ಹಂಸಾನಂದಿ
ಧೃವತಾಳ
ಅಣುವಾಗಬಲ್ಲ ಮಹತ್ತಾಗಬಲ್ಲಾ
ಅಣುಮಹತ್ತೆರಡು ಒಂದಾಗಬಲ್ಲಾ
ರೂಪಾಗಬಲ್ಲ ಅಪರೂಪನಾಗಬಲ್ಲಾ
ರೂಪಅಪರೂಪವೆರಡೊಂದಾಗಬಲ್ಲಾ
ಸಗುಣನಾಗಲಿಬಲ್ಲ ನಿರ್ಗುಣನಾಗಲಿಬಲ್ಲಾ
ಸಗುಣ ನಿರ್ಗುಣ ಎರಡೊಂದಾಗಬಲ್ಲಾ
ವ್ಯಕ್ತನಾಗಲಿ ಬಲ್ಲಾ ಅವ್ಯಕ್ತನಾಗಲಿ ಬಲ್ಲಾ
ವ್ಯಕ್ತಾ ವ್ಯಕ್ತವು ಎರಡೊಂದಾಗ ಬಲ್ಲಾ
ಅಘಟಿತ ಘಟಿಕಾ ಅಚಿಂತ್ಯಾದ್ಭುತ ಮಹಿಮಾ
ಸ್ವಗತ ಭೇದ ವರ್ಜಿತ ಪುರಂದರವಿಠ್ಠಲಾ
ಅಣುವಾಗ ಬಲ್ಲಾ॥೧॥
ಮಟ್ಟತಾಳ
ಕಣ್ಣಿಲಿ ಕೇಳುವ ಕಾಣುವ ನಲಿವಾ
ಆಘ್ರಾಣಿಸುವ ಆಸ್ವಾದಿಸುವ
ರಸನದಿ ಕೇಳುವ ಕಾಂಬನರಿವ
ಸ್ಪರುಶದಿ ಕೇಳುವ ಕಾಂಬನರಿವಾ
ಆಘ್ರಾಣಿಸುವ ಆಸ್ವಾದಿಸುವಾ
ಲೋಕ ವಿಲಕ್ಷಣ ದಿವ್ಯ ಕರ್ಮ
ಲೋಕಕಾಶ್ಚರ್ಯ ನಮ್ಮ ಪುರಂದರವಿಠ್ಠಲ
ಇದು ಏನಾಶ್ಚರ್ಯ ಲೋಕ ವಿಲಕ್ಷಣ ಪುರುಷ॥೩॥
ತ್ರಿವಿಡಿತಾಳ
ಆವಾವ ಯುಗದಲ್ಲಿ ವಿಷ್ಣು ವ್ಯಾಪಕನಾಗಿ
ಶ್ರೀವಿಷ್ಣು ಇದ್ದಲ್ಲಿ ವಿಷ್ಣುಲೋಕ ತಾ ನಿಪ್ಪದಾಗಿ
ಸಾಲೋಕ್ಯ ಸಾಮಿಪ್ಯ ಸಾರೂಪ್ಯ ಸಾಯುಜ್ಯ
ಸಾರಿಷ್ಣ ಎಂಬುದು ವಿಷ್ಣು ಇದ್ದಲ್ಲೆ ಇಪ್ಪದು
ಪುರಂದರವಿಠ್ಠಲ ನೊಬ್ಬನೆ ಬೊಮ್ಮ ಭರಿತಾ
ಪಂಚ ವಿಧ ಮುಕ್ತಿದಾಯಕನೇ॥೪॥
ಅಟ್ಟತಾಳ
ಮೋದ ದಕ್ಷಿಣ ಪಕ್ಷ ಪ್ರಮೇಯ ಉತ್ತರ ಪಕ್ಷ
ಆನಂದಾತುಮ ಆಪಾದ ಆನಖ ಆನಂದ
ಅಪ್ರಾಕೃತ ವಿಗ್ರಹ ನಮ್ಮ ಪುರಂದರವಿಠ್ಠಲ
ರೇಯಾ ಆನಂದ ಆತೂಮ॥೫॥
ಆದಿತಾಳ
ನಾರಾಯಣ ಪರ ಬೊಮ್ಮಗಡಾ
ಶ್ವೇತ ತನುರೂಹ ಈತಗಡಾ
ಬಲಭದ್ರ ಕೃಷ್ಣ ತನುರೂಹ ಕೃಷ್ಣಗಡಾ
ಕೃಷ್ಣ ವಾಸುದೇವ ಪುರಂದರವಿಠ್ಠಲ
ಶ್ವೇತ ತನುರೂಹ ಈತಗಡಾ॥೫॥
ಜತೆ
ನಮೊ ನಮೊ ವಾಗೀಶ ಈಶ ಸರ್ವೇಶ
ನಮೊ ನಮೊ ಪುರಂದರವಿಠ್ಠಲ ನಮೊ॥೬॥
***