ಅಷ್ಟ ಮದ ಗರ್ವದಲಿ ಹರಿಸ್ಮರಣೆಯನು ಮರೆತು
ಮಡದಿ ಮಾತನು ಕೇಳಿ ನಡೆದುಕೊಂಬನು ಭ್ರಷ್ಟ
ಪಡೆದ ಜನನಿಯನು ಬೈಯುವನು ಭ್ರಷ್ಟ
ಕಡವ ಕೊಟ್ಟವರೊಡನೆ ಧಡಿತನ ಮಾಡುವ ಭ್ರಷ್ಟ
ಬಡವರಿಗೆ ಕೊಟ್ಟ ನುಡಿ ನಡೆಸದವ ಭ್ರಷ್ಟ
ಬಾರದೊಡವೆಗಳನ್ನು ಬಯಸುವನು ತಾ ಭ್ರಷ್ಟ
ಸೇರದವರೊಡನೆ ಸ್ನೇಹಿಸುವ ಭ್ರಷ್ಟ
ಶೌರಿದಿನ ವ್ರತವನಾಚರಿಸದವನತಿ ಭ್ರಷ್ಟ
ನಾರಿಯರ ನೆಚ್ಚಿದಾ ನರನು ಕಡು ಭ್ರಷ್ಟ
ತಂತ್ರವನು ಅರಿಯದೆ ಮಂತ್ರ ಮಾಡುವ ಭ್ರಷ್ಟ
ಮಂತ್ರವಿಲ್ಲದ ವಿಪ್ರನತಿ ಭ್ರಷ್ಟನು
ಅಂತರವನರಿಯದೆ ನುಡಿದವನು ಭ್ರಷ್ಟ ಸ್ವ-
ತಂತ್ರವಿಲ್ಲದೆ ಕಾರ್ಯ ನಡೆಸುವನು ಭ್ರಷ್ಟ
ಹರಿಚರಿತ್ರೆಗಳನ್ನು ಜರಿದಾಡುವವ ಭ್ರಷ್ಟ
ಹರಿಯ ಶರಣರ ನೋಡಿ ನಿಂದಿಸುವ ಭ್ರಷ್ಟ
ಗುರುಹಿರಿಯರ ಪಾದಕ್ಕೆರಗದವ ಭ್ರಷ್ಟ
ನೆರೆಹೊರೆಯರನು ನೋಡಿ ಕುರುಬುವನು ಭ್ರಷ್ಟ
ಹರಿನಾಮವನು ದಿನದಿ ಸ್ಮರಿಸದಾತನು ಭ್ರಷ್ಟ
ಕರುಣವಿಲ್ಲದ ವಿಪ್ರನವ ಭ್ರಷ್ಟನು
ಕರುಣಾಳು ನಮ್ಮ ಸಿರಿ ಪುರಂದರವಿಠಲನ
ಚರಣಕಮಲವ ಸ್ಮರಿಸದವ ಭ್ರಷ್ಟನಯ್ಯ
***
pallavi
bhraSTAdaru manujaru
anupallavi
aSTa mada garvadali hri smaraNeyanu maredu
caraNam 1
maDadi mAtanu kELi naDedu kombanu bhraSTa paDeda jananiyanu baiyuvanu bhraSTa
kaDana koTTavaroDane dhaDigatana mADuva bhraSTa baDavarige koTTa naDesadava bhraSTa
caraNam 2
bAradoDavegaLannu bayasuvanu tA bhraSTa sEradavaroDane snEhisuva bhraSTa
shauridina vrata vanAcarisadavanati bhraSTa nAriyara neccidA naranu bhraSTa
caraNam 3
tantravanu ariyade mantra mADuva bhraSTa mantravillada vipranadi bhraSTanu
antaravanariyade nuDiyuvanu bhraSTa svatantravillade kArya naDesuvanu bhraSTa
caraNam 4
hari caritregaLannu jaredoDuva bhraSTa hariya sharaNara nODi nindisuva bhraSTa
guru hariyara pAdakkeragadavana bhraSTa nere horeyaranu nODi karubuvanu bhraSTa
caraNam 5
hari nAmavanu dinadi smarisadAtanu bhraSTa karuNavillada vipranava bhraSTanu
karuNALu namma siri purandara viTTalanna caraNa kamalava smaridava bhraSTanayya
***
ರಾಗ ಕಾಂಭೋಜ ಝಂಪೆ ತಾಳ
ಭ್ರಷ್ಟರಾದರು ಮನುಜರು ||ಪ||
ಅಷ್ಟಮದ ಗರ್ವದಲಿ ಹರಿಸ್ಮರಣೆಯನು ಮರೆತು ||ಅ||
ಮಡದಿಮಾತನು ಕೇಳಿ ನಡೆದುಕೊಂಬನು ಭ್ರಷ್ಟ
ಪಡೆದ ಜನನಿಯನು ಬೈಯುವನು ಭ್ರಷ್ಟ
ಕಡನ ಕೊಟ್ಟವರೊಡನೆ ಧಡಿಗತನ ಮಾಡುವ ಭ್ರಷ್ಟ
ಬಡವರಿಗೆ ಕೊಟ್ಟ ನುಡಿ ನಡೆಸದವ ಭ್ರಷ್ಟ ||
ಬಾರದೊಡವೆಗಳನ್ನು ಬಯಸುವನು ತಾ ಭ್ರಷ್ಟ
ಸೇರದವರೊಡನೆ ಸ್ನೇಹಿಸುವ ಭ್ರಷ್ಟ
ಶೌರಿದಿನ ವ್ರತವನಾಚರಿಸದವನತಿ ಭ್ರಷ್ಟ
ನಾರಿಯರ ನೆಚ್ಚಿದಾ ನರನು ಕಡುಭ್ರಷ್ಟ||
ತಂತ್ರವನು ಅರಿಯದೆ ಮಂತ್ರ ಮಾಡುವ ಭ್ರಷ್ಟ
ಮಂತ್ರವಿಲ್ಲದ ವಿಪ್ರನತಿ ಭ್ರಷ್ಟನು
ಅಂತರವನರಿಯದೆ ನುಡಿಯುವನು ಭ್ರಷ್ಟ ಸ್ವ-
ತಂತ್ರವಿಲ್ಲದೆ ಕಾರ್ಯ ನಡೆಸುವನು ಭ್ರಷ್ಟ||
ಹರಿ ಚರಿತ್ರೆಗಳನ್ನು ಜರೆದಾಡುವ ಭ್ರಷ್ಟ
ಹರಿಯ ಶರಣರ ನೋಡಿ ನಿಂದಿಸುವ ಭ್ರಷ್ಟ
ಗುರು ಹರಿಯರ ಪಾದಕ್ಕೆರಗದವನವ ಭ್ರಷ್ಟ
ನೆರೆಹೊರೆಯರನು ನೋಡಿ ಕರುಬುವನು ಭ್ರಷ್ಟ||
ಹರಿನಾಮವನುದಿನದಿ ಸ್ಮರಿಸದಾತನು ಭ್ರಷ್ಟ
ಕರುಣವಿಲ್ಲದ ವಿಪ್ರನವ ಭ್ರಷ್ಟನು
ಕರುಣಾಳು ನಮ್ಮ ಸಿರಿಪುರಂದರವಿಠಲನ್ನ
ಚರಣಕಮಲವ ಸ್ಮರಿದವ ಭ್ರಷ್ಟನಯ್ಯ
*******
ರಾಗ ಕಾಂಭೋಜ ಝಂಪೆ ತಾಳ
ಭ್ರಷ್ಟರಾದರು ಮನುಜರು ||ಪ||
ಅಷ್ಟಮದ ಗರ್ವದಲಿ ಹರಿಸ್ಮರಣೆಯನು ಮರೆತು ||ಅ||
ಮಡದಿಮಾತನು ಕೇಳಿ ನಡೆದುಕೊಂಬನು ಭ್ರಷ್ಟ
ಪಡೆದ ಜನನಿಯನು ಬೈಯುವನು ಭ್ರಷ್ಟ
ಕಡನ ಕೊಟ್ಟವರೊಡನೆ ಧಡಿಗತನ ಮಾಡುವ ಭ್ರಷ್ಟ
ಬಡವರಿಗೆ ಕೊಟ್ಟ ನುಡಿ ನಡೆಸದವ ಭ್ರಷ್ಟ ||
ಬಾರದೊಡವೆಗಳನ್ನು ಬಯಸುವನು ತಾ ಭ್ರಷ್ಟ
ಸೇರದವರೊಡನೆ ಸ್ನೇಹಿಸುವ ಭ್ರಷ್ಟ
ಶೌರಿದಿನ ವ್ರತವನಾಚರಿಸದವನತಿ ಭ್ರಷ್ಟ
ನಾರಿಯರ ನೆಚ್ಚಿದಾ ನರನು ಕಡುಭ್ರಷ್ಟ||
ತಂತ್ರವನು ಅರಿಯದೆ ಮಂತ್ರ ಮಾಡುವ ಭ್ರಷ್ಟ
ಮಂತ್ರವಿಲ್ಲದ ವಿಪ್ರನತಿ ಭ್ರಷ್ಟನು
ಅಂತರವನರಿಯದೆ ನುಡಿಯುವನು ಭ್ರಷ್ಟ ಸ್ವ-
ತಂತ್ರವಿಲ್ಲದೆ ಕಾರ್ಯ ನಡೆಸುವನು ಭ್ರಷ್ಟ||
ಹರಿ ಚರಿತ್ರೆಗಳನ್ನು ಜರೆದಾಡುವ ಭ್ರಷ್ಟ
ಹರಿಯ ಶರಣರ ನೋಡಿ ನಿಂದಿಸುವ ಭ್ರಷ್ಟ
ಗುರು ಹರಿಯರ ಪಾದಕ್ಕೆರಗದವನವ ಭ್ರಷ್ಟ
ನೆರೆಹೊರೆಯರನು ನೋಡಿ ಕರುಬುವನು ಭ್ರಷ್ಟ||
ಹರಿನಾಮವನುದಿನದಿ ಸ್ಮರಿಸದಾತನು ಭ್ರಷ್ಟ
ಕರುಣವಿಲ್ಲದ ವಿಪ್ರನವ ಭ್ರಷ್ಟನು
ಕರುಣಾಳು ನಮ್ಮ ಸಿರಿಪುರಂದರವಿಠಲನ್ನ
ಚರಣಕಮಲವ ಸ್ಮರಿದವ ಭ್ರಷ್ಟನಯ್ಯ
*******