ಷಟ್ಪದಿ
ಶ್ರೀ ರಮೇಶ ಪದಾಬ್ಜ ಭೃಂಗ ಸಮೀರ ಮತಕುಲ ದೀಪ ಶಾಸ್ತೋದ್ದಾರ ದಿವಿಜ ಲಲಾಮ ಶುಭಗುಣ ಸಾಂದ್ರ ಗುರುವರನೇಸೇರಿಹೆನು ತವಶಿಷ್ಯ ಕೋಟಿಲಿ ಬೀರಿ ಕರುಣಾ ದೃಷ್ಟಿ ಶ್ರುತಿ ಭಂಡಾರ ಸೂರೆಯ ಮಾಡ್ವ ಹಾ ಹಾ ಕಾರದಿಂ ತಪಿಪ 1
ಬಾಲ ನೆನ್ನಯ ಶಿರವ ನಿಮ್ಮಯ ಶೀಲಕರದಿಂ ಭೂಷಿಸುತ ಕವಿತಾ ಲತಾಂಗಿಯ ತಾಂಡವಾಡಿಸಿ ಚಂದ್ರಮೌಳಿನುತಕಾಳಿಮನಕುಮುದೇಂದು ಜಗಸಂ ಚಾಲಕ ಪ್ರಭು ಮುಖ್ಯ ಪ್ರಾಣಗುಪಾಲಿಸುತ ಸತ್ತಾದಿ ಸಕಲವ ಪೊರೆದು ಮೆರವಂಥಾ 2
ವೇದ ವೇದ್ಯ ವಿನಾಂತ ತದ್ವನ ಸಾಧು ಪೂರ್ಣಾನಂದ ಚಿನ್ಮಯಗಾಧ ವರ್ಜಿತ ಮಹಿಮ ಸೃಷ್ಠ್ಯಾ ದ್ಯಷ್ಠ ಕರ್ತ ವಿಭುಸಾಧು ವಾಚದಕಾರ ಪತಿ ಮಾ ವಂದ್ಯ ನಿರುಪಮ ನಾರಸಿಂಹನುಅಂದು ನಿಮ್ಮನು ಕಾಯ್ದ ತೆರಪೊರೆ ಶ್ರೀ ಸುಧೀಂದ್ರ ಸುತ 3
ಏನಿದೇನಿದು ನಿಮ್ಮ ಮಹಿಮೆಯಮಾನವರಿಯಲು ಸುರರಿಗಾಗದುಮಾನವರ ಪಾಡೇನು ಶಿರತೂ ಗುತಿಹ ಫಣಿರಾಜಮಾನ್ಯ ಸುರ ಋಷಿ ಕರುಣ ಬಲವೋಮೇಣ್ಪರಿಸರನ ಕೃಪೆಯೊ ಕಾಣೆನುದಾನಿ ನರಹರಿ ವರದ ಫಲವೋ ಮೊತ್ತವೇ ಯೆಂಬೆ 4
ಬಾಲ ವೃದ್ಥರು ಹಾಗೆ ವನಿತಾ ಸಾಲುಗಳು ಮತ್ತಿತರ ಜನತಾವೆಲ್ಲ ಕೂಡುತ ನಿಮ್ಮ ಭಜಿಸುವ ಬಗೆಯ ನೇ ನೆಂಬೆಭೂಲಲನೆಯನಲಂಕರಿಸಿದನೆ ಪಾಲಿಸುತ ಜಂಭಾರಿ ಮೇಣಾಬಾಲ ಸುಬ್ರಹ್ಮಣ್ಯನೋ ಶಂಕಿಪುದು ಸುರನೀಕಾ 5ಸೂಕ್ಷ್ಮಮತಿಗಳೆ ಪೇಳಿ ಸರ್ವಾಧ್ಯಕ್ಷನವತಾರವನು ಯಾವ ಸುಲಕ್ಷಣ ಭಕುತಗೇನೆ ಮಾಡಿಹ ನಮ್ಮಗುರುವ ಬಿಡೆಪಕ್ಷ ವಹಿಸದೆ ಪೇಳಿ ಯಾವನು ಲಕ್ಷ್ಯ ಮಾಡದೆ ಕಷ್ಟ ಮಾತೆಯಕುಷಿಯಂ ಬಂದಿಹನು ಮುಮ್ಮುಡಿ ನಮ್ಮ ನುದ್ಧರಿಸೆ 6
ಹಂತ ನಿಮ್ಮಯ ಶಾಂತ ಗುಣ ನಾ ನೆಂತು ಬಣ್ಣಿಪೆ ನೂಕಿದ ಖಳಗಣಾಂತದಲಿವಿಧಿ ಶಂಖು ಕರ್ಣನ ವ್ಯಾಜ ವಿಲ್ಲದಲೆದೈತ್ಯ ಪಿತತಾನಿತ್ತ ಬಾಧೆಗೆ ನಾಥ ನರಹರಿ ಬಂದುದಚ್ಚರಿಯಂತೆ ಭಾವಿಸೆ ಭಕ್ತವತ್ಸಲ ಬಿರುದು ಪೊಳ್ಳೆಬಿಡೆ 7
ಕುಂತಿಕಂದನ ಯುಗದಿ ಕರಕರೆ ಕಂತೆ ಕುರುಕುಲಕಾಟೆಕ್ಕಲಿ ಬರೆಅಂತೆಯೇ ಸರಿ ವ್ಯಾಸರಾಜಗೆ ತಾಳಲೀ ಜನ್ಮಸ್ವಂತ ಸತಿ ಸಂಹಾರ ಕಾಟವು ಮತ್ತೆ ಯತಿ ಯಂತಾಗೆ ಹಾಗೆಯೆನಿಂತಿರಲು ವೃಂದಾವನದಿ ಕಾಡುವರು ಶಿಷ್ಯಗಣಾ 8
ಸತಿಯ ಬೇಕೆಂದೊಬ್ಬ ನೀಡೈ ಸುತನ ದಂಪತಿ ವ್ಯಾಜ್ಯ ಹರಿಸಿರಿಜತನ ಮಾಡಿಸಿ ವೇತನವ ಹರಿಸಿನ್ನು ವ್ಯಾಧಿಗಳಪಥನ ವಾಯಿತು ಕೂಳುಕೊಡಿಸೈ ಸತತ ವೀತೆರ ಬಯಕೆ ವ್ರಾತದಿಸುತಪ ನೀನೆಂತಾಗೆ ಕುಪಿತನು ಬಲ್ಲ ಬತ ಹರಿಯೇ 9
ನೀನು ನಿಂತಿಹೆ ಎಂದು ನಾಸ್ತಿಕರಿನ್ನು
ತಿರುಗುತಲಿಹರು ತಮ್ಮಯ
ಹೀನ ನಡತೆಗಳಿಂದ ಸ್ತ್ರೀಯರು ವಿಧಿಯ ನಡೆಸುವರು
ಚೆನ್ನ ಔಷಧ ವಿಹುದು ನಿನ್ನಲಿ ಹಣ್ಣಿನಾಶಯ ತೋರಿನೀ ಭವ
ಹುಣ್ಣುವಳಿಯುವೆ ಎಷ್ಟು ಕರುಣಿಯೊ ಗುರುವೆ ಶರಣೆಂಬೆ 1
ಮೃತ್ತಿಕೆಯೆ ತಾ ನಿತ್ತು ಸಲಹಿತು ವಿತ್ತಪುತ್ರ ಕಳತ್ರ ವೆಲ್ಲವನೆಂತೆನಲು ಬಲು ಹುಚ್ಚುತನವ ರ್ಣಿಸಲು ಮಿಕ್ಕುದುದಾಉಕ್ತಿ ಭಜಿಸುವಗೇನು ಪೇಳ್ವುದು ಮುಕ್ತಿಕರಗತ ವೇಕೆ ಸಂಶಯ ಶಾಸ್ತ್ರ ಭಾಗ್ಯವೆ ಸಾಕು ಕರುಣಿಸಿ ನಮಿಪೆ ಭೂಯಿಷ್ಠ 11
ಇಂತು ಸಿದ್ಧವು ಇಲ್ಲ ಜಗದಲಿ ಪಂಥ ಒಡ್ಡವೆ ನಿಮ್ಮ ತೆರಗುರುವೆಂತ ರಾಮ ಪದಾಬ್ಜ ಮಧುಕರ ಮಧ್ವ ಮುನಿಕಂದಗೀತೆ ಸ್ಮøತಿ ಶೃತಿ ಸೂತ್ರ ಮರ್ಮವ ಕಿತ್ತು ಕೊಟ್ಟೆಯೊ ಶಿಷ್ಯ ಸಂಘಕೆಸುತ್ತಿ ಕಲಿಯುತ ಮುಕ್ತಿ ಸೂರೆಯ ಮಾಡಲೆಂದು ಖರೆ 12
ಪ್ರೀತಿತಮ ಇವನಂಥ ದಾತನ ಗ್ರಂಧ ನಿಚಯವ ಭೋಜ್ಯ ಕಿಡುತಲಿ
ಸುತ್ತಿಗೆದ್ದಲು ಹುಳಕೆ ಮೆಚ್ಚುವ ನೇನು ಪಯ ಸುರಿಯೆಪುತ್ರರಿಗೆ ಮದ್ದಿಕ್ಕಿ ಪಿತನಿಗೆ ಮತ್ತೆ ಭೋಜನ ವಿಕ್ಕೆ ಬಹುಸುಪ್ರೀತಿ ಯಾದಂತಾಯ್ತು ಹರಿಹರೀ ಪಾಹಿಮಾಂ ಪಾಹೀ 13
ಶುಂಠನಾದರು ಪಠಿಸೆ ನಮ್ಮಯ ಕಂಠದಿಂ ಬಂದಂಧ ನುಡಿವೈಕುಂಠ ರಮಣನ ಕಾಂಬ ಪಂಡಿತ ನೆನೆಸಿ ಧರೆಯೊಳಗೆಕಂಟಕವ ನಿರಿದು ಭವದಲಿ ವಿಷ ಕಂಠ ಗಾತಪ್ರಿಯ ತನ್ನಯಭಂಟನನು ಮಾಡಿಕೊಳಲೆಂತೆಂದೆನ್ನ ಹರಿಸಿ ಪೊರೆ 14
ಏಳಿರೇಳಿರಿ ಸಂತ ಮಿತ್ರರೆ ಕೇಳಿ ಕೇಳಿದುದೆಲ್ಲ ನೀಡುವಪಾಲಕನು ಶ್ರೀ ರಾಘವೇಂದ್ರನು ಇಲ್ಲ ಮೆರೆಯುತಿರೆಕೇಳಿ ಭವಸುಖ ಮತ್ತೆ ಭವದಲಿ ಬೀಳುವರೆ ವಿe್ಞÁನ ಯಾಚಿಸಿಕೊಲ್ಲಿರೀ ಸಂಸಾರ ಬೀಜವ ಕಲಿಯು ಎಷ್ಠರವ15ನಾಲ್ಕುಶತ ಐವತ್ತು ವರುಷವೆ ವೋಲಗವ ಕೈಕೊಂಬ ಮುಂದಿವಅಲಸವ ಮಾಡಿದೆಡೆ ಸುರತರು ಬಿಟ್ಟತೆರವೇನೆಜಾಲ ಮಾತುಗಳೇಕೆ ಮುಂದಿನ ಶೀಲ ಮಾರ್ಗವ ನೋಡ್ವ ಜಾಣನುಪಾಲಿಸೈಧೋರೆ ಕೆಟ್ಟೆ ಕೆಟ್ಟೆನು ಎನ್ನ ಕೈ ಕೊಡುವ 16
ಏಕೆ ಭಯ ನಮಗಿನ್ನು ನರಕದ ಏಕೆ ಕಳವಳ ಅಶನ ವಸನÀಕೆಏಕೆ ಸಂಶಯ e್ಞÁನ ವಿಶಯದಿ ಪಿಡಿಯೆ ಗುರುವರನೆನೂಕಿ ವಿಷಯದಿ ಬಯಕೆ ಬೇಗನೆ ಬೇಕು ಎನ್ನುತ e್ಞÁನ ನಿಧಿಗಳಹಾಕಿ ದಂಡವ ಪಾಹಿ ಗುರುವರ ಪಾಹಿ ಯೆಂತೆನ್ನ 17
ಶತ್ರುವೀತನನನ್ಯರಿಗೆ ನಿಜ ಮಿತ್ರ ಮತಿಮತ ಸಂತತಿಗೆ ಸಂಶಪ್ತ ಸುಜನಗೆ ಕಾಮಧೇನುವು e್ಞÁನ ಭಾಸ್ಕರನುಮತ್ತೆ ಹರಿಗುರು ದೂತ ನಿವ ಬಹು ಶಕ್ತ ನೀಡುವ ಭುಕ್ತಿ ಹಾಗೆ ವಿರಕ್ತ ಭಕ್ತಿಯು ಭಕ್ತ ವೃಂದಕೆ ಭ್ರಷ್ಟ ಬಿಟ್ಟವನು 18
ಜಯ ಜಯವು ಗುರುಸಾರ್ವಭೌಮಗೆಜಯ ಜಯವು ಮಂತ್ರಾಲಯಸ್ಥಗೆಜಯ ಜಯವು ವಿಜಯೀಂದ್ರ ಪೌತ್ರಗೆ ವ್ಯಾಸರಾಜನಿಗೆಜಯ ಜಯ ಪರಿಮಳಾ ಪ್ರದಾತಗೆ ಜಯಜಯವು ಖಂಡಾರ್ಥ ನೀಡ್ದಗೆಜಯ ಜಯವು ಸಶರೀರ ಬೃಂದಾ ವನದಿ ಸೇರ್ದವಗೇ 19
ಜಯ ಜಯವು ಬಾಹ್ಲೀಕ ರಾಯಗೆ ಜಯ ಜಯವು ಶ್ರೀ ಸತ್ಯಸಂಧಗೆಜಯ ಜಯವು ಪ್ರಹ್ಲಾದರಾಜಗೆ ಶಿಷ್ಯ ವತ್ಸಲ್ಯಗೆಜಯ ಜಯವು ಶ್ರೀ ರಾಘವೇಂದ್ರಗೆಜಯ ಜಯವು ಮಂಗಳವ ಸುರಿಪಗೆಜಯ ಜಯವು ಜಯ ಮುನಿಯ ಪ್ರೀಯಗೆ ನಮ್ಮ ಗುರುವರಗೆ 20
ಮಾನನಿಧಿ ಜಯತೀರ್ಥ ರಾಯರಘನ್ನ ಹೃದಯಗ ವಾಯು ವಂತರಶ್ರೀ ನಿಲಯ ಶ್ರೀ ಕೃಷ್ಣವಿಠಲ ಪ್ರೀಯ ಗುರುರಾಜನಾನು ಪಾಮರ ಬಾಲ ನುಡಿಗಳ ನೀನೆ ತಿದ್ದುತ ಮನ್ನಿಪುದು ನಾನಿನ್ನ ದಾಸರ ದಾಸನೆಂದು ಸ್ವೀಕರಿಸು ಶರಣು 21
****