Showing posts with label ನೋಡಿದೆ ಗುರುರಾಯರನ್ನ ಈ ರೂಢಿಯೊಳಗೆ ಮೆರೆವೊ ಸಾರ್ವಭೌಮನ್ನ gurujagannatha vittala. Show all posts
Showing posts with label ನೋಡಿದೆ ಗುರುರಾಯರನ್ನ ಈ ರೂಢಿಯೊಳಗೆ ಮೆರೆವೊ ಸಾರ್ವಭೌಮನ್ನ gurujagannatha vittala. Show all posts

Wednesday, 1 September 2021

ನೋಡಿದೆ ಗುರುರಾಯರನ್ನ ಈ ರೂಢಿಯೊಳಗೆ ಮೆರೆವೊ ಸಾರ್ವಭೌಮನ್ನ ankita gurujagannatha vittala

 ..

ನೋಡಿದೆ ಗುರುರಾಯರನ್ನ ಈ

ರೂಢಿಯೊಳಗೆ ಮೆರೆವೊ ಸಾರ್ವಭೌಮನ್ನ ಪ


ಥಳಥಳಿಸುವ ಬೃಂದಾವನದಿ - ತಾನು

ಕುಳಿತು ಭಕ್ತರಿಗೀವ ವರವನು ತ್ವರದಿ

ನಳಿನನಾಭನ ಕೃಪಾಬಲದಿ - ಇದೆ

ನಳಿನಜಾಂಡದಿ ಸರಿಗಾಣೆ ಮಹಿಮಾದಿ1


ಪೊಳೆವೊ ವಕ್ಷಸ್ಥಳದವನ - ಎಳೆ

ತುಳಸಿ ಮಾಲಾಂಕಿತ ಕಂಧರಯುತನಾ

ನಳಿನಾಕ್ಷಮಾಲೆ ಶೋಭಿತನ - ಉರ

ಚಲುವ ದ್ವಾದಶಪುಂಢ್ರ -ಮುದ್ರಚಿಹ್ನಿತನಾ 2


ಕೃಷ್ಣವರ್ಣದಿ ಶೋಭೀತನಾ - ಮಹಾ

ವೈಷ್ಣವ ಕುಮುದ - ನಿಕರಕೆ ಚಂದಿರನಾ

ವಿಷ್ಣು ಭಕ್ತಾಗ್ರೇಸರನಾ - ಬಾಲ

ಕೃಷ್ಣಮೂರುತಿ ಪದಯುಗ ಸರೋಜ ಇನಾ 3


ದಿನನಾಥ - ದೀಪ್ತಿ - ಭಾಸಕನ - ಭವ

ವನಧಿ - ಸಂತರಣ - ಸುಪೋತಕೋಪÀಮನಾ

ಮುನಿಜನ ಕುಲದಿ ಶೋಭಿಪನ - ಸ್ವೀಯ

ಜನರ ಪಾಲಕ ಮಹಾರಾಯನೆನಿಪನಾ 4


ಗುರುಜಗನ್ನಾಥ ವಿಠಲನ - ಪಾದ

ಸರಸಿಜ ಯುಗಳಕಾರಡಿ ಎನಿಪÀನಾ

ಪೆರಿವೋನು ತನ್ನ ಜನರನಾ - ಎಂದು

ಶಿರಸದಿ ನಮಿಸಿ ಬೇಡಿದೆ ಗುರುವರನಾ 5

***