Showing posts with label ಕೃಷ್ಣಾರ್ಯಾಷ್ಟಕಮ್ ಅಪ್ಪವರು ಇಭರಾಮಪುರ ಗುರು ಸ್ತುತಿ others KRISHNARYASHTAKAM APPAVARA STUTIH. Show all posts
Showing posts with label ಕೃಷ್ಣಾರ್ಯಾಷ್ಟಕಮ್ ಅಪ್ಪವರು ಇಭರಾಮಪುರ ಗುರು ಸ್ತುತಿ others KRISHNARYASHTAKAM APPAVARA STUTIH. Show all posts

Wednesday 17 November 2021

ಕೃಷ್ಣಾರ್ಯಾಷ್ಟಕಮ್ ಅಪ್ಪವರು ಇಭರಾಮಪುರ ಗುರು ಸ್ತುತಿ others KRISHNARYASHTAKAM APPAVARA STUTIH



|| ಶ್ರೀಮದ್ ಇಭರಾಮಪುರ ಕೃಷ್ಣಾರ್ಯಾಷ್ಟಕಮ್ ||


ಕೃಷ್ಣೋತ್ಕøಷ್ಟ ದಯಾಪುಷ್ಟ ಕೃಷ್ಣಾಪತಿ ಸುಹೃತ್‍ಪ್ರಿಯಂ |
ದೃಷ್ಟಾದೃಷ್ಟಪ್ರವಕ್ತಾರಮ್ ಕೃಷ್ಣಾಚಾರ್ಯ ಗುರುಂ ಭಜೇ ||

ಶುಭದಂ ಸೇವಮಾನಾನಾಂ ಅಭಯಪ್ರದಮಥಿನಾಂ |
ಇಭರಾಮಪುರಾಗಾರಂ ಕೃಷ್ಣಾಚಾರ್ಯ ಗುರುಂ ಭಜೇ ||

ರೋಗಾದ್ಯುಪದ್ರವಾರ್ತಾನಾಂ  ಭೋಗಾಯತನ ಸೌಖ್ಯದಂ |
ಯೋಗಾಯೋಗಸಮಂ ಶಾಂತಂ ಕೃಷ್ಣಾಚಾರ್ಯ ಗುರುಂ ಭಜೇ||

ಭೂತಪ್ರೇತ ಗ್ರಹಶ್ವೇತ ವಾತ ಪಿತ್ತ ವ್ರಣಾದಯ: |
ಭೀತಾಗಚ್ಛಂತಿ ಯಸ್ಮಾತ್ತಂ ಕೃಷ್ಣಾಚಾರ್ಯ ಗುರುಂ ಭಜೇ ||

ಶ್ರೀಭೂದೇವಗಣೈ: ಪೂಜ್ಯಂ ಶ್ರೀ ಭೂಮಾಧಿಷಾಯುತಂ |
ಭೂಮೀಶಾದೃಷ್ಟವಿಭವಂ ಕೃಷ್ಣಾಚಾರ್ಯ ಗುರುಂ ಭಜೇ ||

ಭರತೀಶಪದದ್ವಂದ್ವ ಸಾರಸ ಭ್ರಮರಾಯಿತಂ |
ಸುರವತ್ಕಾಂತಿಸಂಪನ್ನಂ ಕೃಷ್ಣಾಚಾರ್ಯ ಗುರುಂ ಭಜೇ ||

ಶ್ರೀರಾಘವೇಂದ್ರಚಿತ್ತಜ್ಞಂ ಸಾರಮಾತ್ತವದಾವದಂ |
ದೂರೀಕೃತದುರಾಚಾರಂ ಕೃಷ್ಣಾಚಾರ್ಯ ಗುರುಂ ಭಜೇ ||

ಶಿಷ್ಟೇಷ್ಟಜನಸಂತುಷ್ಟಂ ವೃಷ್ಣೀಶಾಂಘ್ರಿಸಮಾಶ್ರಿತಂ |
ಕಷ್ಟನಾಶಂ ಸ್ವಭಕ್ತಾನಾಂ ಕೃಷ್ಣಾಚಾರ್ಯ ಗುರುಂ ಭಜೇ ||

ಅಷ್ಟಶ್ಲೋಕಮಯೀಂಮಾಲಾಂ ಕೃಷ್ಣಾಚಾರ್ಯ ಸ್ತವಾಭಿದಾಂ |
ಇಷ್ಟಸಿದ್ಧಿಲಬೇತ್ಸದ್ಯೋ ನಿಷ್ಠಯಾಜಪಕೃನ್ನರ ||

ಬಾಲಿಶೇನಕೃತಾಮಾಲಾ ಕಾಲೀನಾಥಪದಾಂಬುಜೇ |
ಲೋಲಷಟ್ಪದವದ್ಭೂಷಾಸ್ಯಾತ್ ಸತಾಂ ಭಜತಾಂ ಮುದೇ ||

|| ಶ್ರೀ ಕೃಷ್ಣಾರ್ಪಣಮಸ್ತು ||
**********


ಶ್ರೀ ಇಭರಾಮಪುರ ಅಪ್ಪಾವರ ಅಷ್ಟಕ ಅರ್ಥ ಸಹಿತವಾಗಿ ಬರೆದು ಹಾಕುವ ಪುಟ್ಟ ಪ್ರಯತ್ನ ಶ್ರೀ ಅಪ್ಪಾವರ ದಯೆಇಂದ.
🙏🙏🙏🙏
|| ಶ್ರೀಮದ್ ಇಭರಾಮಪುರ ಕೃಷ್ಣಾರ್ಯಾಷ್ಟಕಮ್ ||
🙇‍♂🙇‍♂🙇‍♂🙇‍♂
ಕೃಷ್ಣೋತ್ಕಷ್ಟ ದಯಾಪುಷ್ಟ ಕೃಷ್ಣಾಪತಿ ಸುಹೃತ್‍ಪ್ರಿಯಂ |
ದೃಷ್ಟಾದೃಷ್ಟಪ್ರವಕ್ತಾರಮ್ ಕೃಷ್ಣಾಚಾರ್ಯ ಗುರುಂ ಭಜೇ|| |1||
ಶ್ರೀ ಕೃಷ್ಣನ ಶ್ರೇಷ್ಠ ವಾದ ದಯೆ ಇಂದ ಪುಷ್ಟರಾದ, ದ್ರೌಪದಿ ಪತಿಯಾದ ಭೀಮಸೇನ ದೇವರ ಪ್ರೀತಿ ಪಾತ್ರರಾದ, ಭೂತ, ವರ್ತಮಾನ, ಭವಿಷ್ಯತ್, ಗಳನ್ನು ಚೆನ್ನಾಗಿ ತಿಳಿದಿರುವ ಶ್ರೀ ಕೃಷ್ಣಾಚಾರ್ಯ ಗುರುಗಳನ್ನು ಭಜಿಸುತ್ತೇನೆ.
🙏🙏🙏🙏
ಶುಭದಂ ಸೇವಮಾನಾನಾಂ ಅಭಯಪ್ರದಮಥಿನಾಂ |
ಇಭರಾಮಪುರಾಗಾರಂ ಕೃಷ್ಣಾಚಾರ್ಯ ಗುರುಂ ಭಜೇ| ||2||
ಸೇವಿಸುವವರಿಗೆ ಶುಭವನ್ನು ನೀಡುವ,ಬೇಡುವವರಿಗೆ ಅಭಯವನ್ನು ಕೊಡುವ ಇಭರಾಮಪುರ ದಲ್ಲಿ ಇರುವಂತಹ ಶ್ರೀ ಕೃಷ್ಣಾಚಾರ್ಯ ಗುರುಗಳನ್ನು ಭಜಿಸುತ್ತೇನೆ.
🙏🙏🙏🙏🙏🙏
ರೋಗಾದ್ಯುಪದ್ರವಾರ್ತಾನಾಂ  ಭೋಗಾಯತನ ಸೌಖ್ಯದಂ |
ಯೋಗಾಯೋಗಸಮಂ ಶಾಂತಂ ಕೃಷ್ಣಾ ಕೃಷ್ಣಾಚಾರ್ಯ ಗುರುಂ ಭಜೇ|| ||3||
ರೋಗವೇ ಮೊದಲಾದ ಉಪದ್ರವ ಗಳಿಂದ ಪೀಡಿತರಾದವರಿಗೆ, ಹೆಚ್ಚಿನ ಸುಖವುಂಟು ಮಾಡುವ ಸುಖದುಃಖಗಳಲ್ಲಿ ಸ್ಥಿತಪ್ರಜ್ಞರಾದ ಶ್ರೀ ಕೃಷ್ಣಾಚಾರ್ಯ ಗುರುಗಳನ್ನು ಭಜಿಸುತ್ತೇನೆ.
🙏🙏🙏🙏🙏🙏
ಭೂತಪ್ರೇತ ಗ್ರಹಶ್ವೇತ ವಾತ 
 ಪಿತ್ತ ವ್ರಣಾದಯ: |
ಭೀತಾಗಚ್ಛಂತಿ ಯಸ್ಮಾತ್ತಂ ಕೃಷ್ಣಾಚಾರ್ಯ ಗುರುಂ ಭಜೇ|| ||4||
ಭೂತ, ಪ್ರೇತ,ಗ್ರಹ,ತೊನ್ನು, ವಾತ,ಪಿತ್ತ, ವೃಣ, ಮೊದಲಾದವು ಯಾರ ಸ್ಮರಣೆ ಮಾತ್ರದಿಂದ ಹೆದರಿ ಓಡುತ್ತವೆಯೋ ಅಂತಹ ಶ್ರೀ ಕೃಷ್ಣಾಚಾರ್ಯ ಗುರುಗಳನ್ನು ಭಜಿಸುತ್ತೇನೆ.
🙏🙏🙏🙏🙏🙏
ಶ್ರೀಭೂದೇವಗಣೈ: ಪೂಜ್ಯಂ ಶ್ರೀ ಭೂಮಾಧಿಷಣಾಯುತಂ |
ಭೂಮೀಶಾದೃಷ್ಟವಿಭವಂ ಕೃಷ್ಣಾಚಾರ್ಯ ಗುರುಂ ಭಜೇ|| |||5||
 ಬ್ರಾಹ್ಮಣರ ಗುಂಪಿನಿಂದ ಪೂಜಿಸಲ್ಪಡುವ, ಅತಿಶಯವಾದ ಪ್ರಜ್ಞೆ ಯುಳ್ಳ ಎಂದರೆ ಬೃಹಸ್ಪತ್ಯಾಚಾರ್ಯರಂತಿರುವ ,ರಾಜ ವೈಭವದಿಂದ ಕೂಡಿರುವ ಶ್ರೀ ಕೃಷ್ಣಾಚಾರ್ಯ ಗುರುಗಳನ್ನು ಭಜಿಸುತ್ತೇನೆ.
🙏🙏🙏🙏
ಭಾರತೀಶಪದದ್ವಂದ್ವ ಸಾರಸ ಭ್ರಮರಾಯಿತಂ |
ಸುರವತ್ಕಾಂತಿಸಂಪನ್ನಂ ಕೃಷ್ಣಾಚಾರ್ಯ ಗುರುಂ ಭಜೇ| |||6||
   ಭಾರತೀ ಪತಿಯಾದ ಮುಖ್ಯ ಪ್ರಾಣನ ಪಾದ ಕಮಲಗಳೆರಡರಲ್ಲಿ ದುಂಬಿಯಂತಿರುವ ದೇವತೆಗಳಂತೆ ಪ್ರಕಾಶಮಾನರಾದ ಶ್ರೀ ಕೃಷ್ಣಾಚಾರ್ಯ ಗುರುಗಳನ್ನು ಭಜಿಸುತ್ತೇನೆ.
🙏🙏🙏🙏🙏
ಶ್ರೀರಾಘವೇಂದ್ರಚಿತ್ತಜ್ಞಂ ಸಾರಮಾತ್ರವದಾವದಂ |
ದೂರೀಕೃತದುರಾಚಾರಂ ಕೃಷ್ಣಾಚಾರ್ಯ ಗುರುಂ ಭಜೇ|| ||7|
ಶ್ರೀ ರಾಘವೇಂದ್ರರ ಮನಸ್ಸು ಅರಿತಿರುವ, ಯಥಾರ್ಥ ವಾದುದನ್ನು ಉಪದೇಶಿಸುವ, ದುರಾಚಾರಗಳನ್ನು ದೂರ ಮಾಡುವಂತಹ ಶ್ರೀ ಕೃಷ್ಣಾಚಾರ್ಯ ಗುರುಗಳನ್ನು ಭಜಿಸುತ್ತೇನೆ.
🙏🙏🙏🙏
ಶಿಷ್ಟೇಷ್ಟಜನಸಂತುಷ್ಟಂ ವೃಷ್ಣೀಶಾಂಘ್ರಿಸಮಾಶ್ರಿತಂ |
ಕಷ್ಟನಾಶಂ ಸ್ವಭಕ್ತಾನಾಂ ಕೃಷ್ಣಾಚಾರ್ಯ ಗುರುಂ ಭಜೇ||8||
ಶ್ರೀ ಕೃಷ್ಣನ ಪಾದಗಳನ್ನು ಚೆನ್ನಾಗಿ ಆಶ್ರಯಿಸಿ, ಯೋಗ್ಯರಾದ, ಮತ್ತು ಪ್ರೀತಿ ಪಾತ್ರರಾದ ತಮ್ಮ ಭಕ್ತರ ಕಷ್ಟವನ್ನು ನಾಶಮಾಡಿ,  ಸಂತೋಷ ಕೊಡುವ ಶ್ರೀ ಕೃಷ್ಣಾಚಾರ್ಯ ಗುರುಗಳನ್ನು ಭಜಿಸುತ್ತೇನೆ.
🙏🙏🙏🙏🙏🙏
ಅಷ್ಟಶ್ಲೋಕಮಯೀಂಮಾಲಾಂ ಕೃಷ್ಣಾಚಾರ್ಯ ಸ್ತವಾಭಿದಾಂ |
ಇಷ್ಟಸಿದ್ಧಿಲಭೇತ್ಸದ್ಯೋ ನಿಷ್ಠಯಾಜಪಕೃನ್ನರಃ ||
||9||
ಶ್ರೀ ಕೃಷ್ಣಾಚಾರ್ಯರ ಸ್ತೋತ್ರ ವೆನಿಸಿಕೊಂಡ ಎಂಟು ಶ್ಲೋಕ ವುಳ್ಳ ಈ ಮಾಲೆಯನ್ನು ನಿಷ್ಠೆ ಇಂದ ಜಪಿಸುವ ನರನು ಅಲ್ಪಕಾಲದಲ್ಲಿಯೇ ಇಷ್ಟಾರ್ಥ ವನ್ನು ಹೊಂದುತ್ತಾನೆ.
🙏🙏🙏🙏🙏
ಬಾಲಿಶೇನಕೃತಾಮಾಲಾ ಕಾಲೀನಾಥಪದಾಂಬುಜೇ |
ಲೋಲಷಟ್ಪದವದ್ಭೂಷಾಸ್ಯಾತ್ ಸತಾಂ ಭಜತಾಂಮುದೇ ||
||10||
ಬಾಲ ಬುದ್ದಿಯಿಂದ ಮಾಡಲ್ಪಟ್ಟ ಈ ಮಾಲೆಯು,ಕಾಲಿಂದಾದೇವಿಯ ಒಡೆಯನಾದ ಶ್ರೀ ಕೃಷ್ಣನ ಪಾದ ಕಮಲದಲ್ಲಿ ಆಸಕ್ತವಾದ ದುಂಬಿಯಂತೆ,ಸಜ್ಜನರಿಂದ ಧರಿಸಲ್ಪಟ್ಟು ಭಜಿಸುವವರಿಗೆ ಸಂತೋಷವನ್ನು ಉಂಟು ಮಾಡುತ್ತದೆ.
🙏ಶ್ರೀ ಕೃಷ್ಣಾರ್ಪಣಮಸ್ತು🙏

(received in WhatsApp)

***


ಶ್ರೀಮದಿಭರಾಮಪುರ ಕೃಷ್ಣಾರ್ಯಾಷ್ಟಕಮ್‌ ಚಿಂತನೆ-೧

ಶ್ರೀ ರಾಮ ಚರಣ ದ್ವಂದ್ವವಾರ್ಧಿ ಚಂದ್ರೋದಯೋಪಮಃ।
ಶ್ರೀ ಕೃಷ್ಣ ಪೂಜಾನಿರತಃ ಕೃಷ್ಣೋ ಮಾಂ ಸರ್ವದಾವತು॥

ಶ್ರೀರಾಮನ ಚರಣ ದ್ವಂದ್ವವೆ೦ಬ ಸಮುದ್ರದಲ್ಲಿ ಚಂದ್ರೋದಯವಾದಂತೆ, ಶ್ರೀಕೃಷ್ಣನ ಪೂಜೆಯಲ್ಲಿ ನಿರತರಾದ ಶ್ರೀ ಕೃಷ್ಣಾಚಾರ್ಯರು: ನನ್ನನ್ನು ಸರ್ವಕಾಲದಲ್ಲಿ ರಕ್ಷಿಸಲಿ.

ಕೃಷ್ಣೋತ್ಕೃಷ್ಟ ದಯಾಪುಷ್ಟ ಕೃಷ್ಣಾಪತಿ ಸುಹೃತ್ ಪ್ರಿಯಂ।
ದೃಷ್ಟಾದೃಷ್ಟ ಪ್ರವಕ್ತಾರಂ ಕೃಷ್ಣಾಚಾರ್ಯ ಗುರುಂ ಭಜೇ ||೧॥

ಶ್ರೀ ಕೃಷ್ಣನ ಶ್ರೇಷ್ಠವಾದ ದಯೆಯಿಂದ ಪುಷ್ಪರಾದ, ದ್ರೌಪತಿ ಪತಿಯಾದ ಭೀಮಸೇನ ದೇವರ ಪ್ರೀತಿಪಾತ್ರರಾದ, ಭೂತ ವರ್ತಮಾನ ಭವಿಷ್ಯತ್‌ಗಳನ್ನು ಚೆನ್ನಾಗಿ ತಿಳಿದಿರುವ ಕೃಷ್ಣಾಚಾರ್ಯ ಗುರುಗಳನ್ನು ಭಜಿಸುತ್ತೇನೆ.
**

ಶ್ರೀಮದಿರಾಭಮಪುರ ಕೃಷ್ಣಾಯಾ೯ಷ್ಟಕಮ್ ಚಿಂತನೆ-೨

ಶುಭದಂ ಸೇವಮಾನಾನಾಂ ಅಭಯಪ್ರದಮರ್ಥಿನಾಂ।
ಇಭರಾಮಪುರಾಗಾರಂ ಕೃಷ್ಣಾಚಾರ್ಯ ಗುರುಂ ಭಜೇ ll

ಸೇವಿಸುವವರಿಗೆ ಶುಭವನ್ನು ನೀಡುವ, ಬೇಡುವವರಿಗೆ ಅಭಯವನ್ನು ಕೊಡುವ, ಇಭರಾಮಪುರದಲ್ಲಿರುವಂತಹ ಶ್ರೀಕೃಷ್ಣಾಚಾರ್ಯ ಗುರುಗಳನ್ನು ಭಜಿಸುತ್ತೇನೆ.

ರೋಗಾದ್ಯುಪದ್ರವಾರ್ತಾನಾಂ ಭೋಗಾಯತನ ಸೌಖ್ಯದಂ |
ಯೋಗಾಯೋಗ ಸಮಂ ಶಾಂತಂ ಕೃಷ್ಣಾಚಾರ್ಯ ಗುರುಂ ಭಜೇ ॥

ರೋಗವೇ ಮೊದಲಾದ ಉಪದ್ರವಗಳಿಂದ ಪೀಡಿತರಾದವರಿಗೆ, ಹೆಚ್ಚಿನ
ಸುಖವುಂಟುಮಾಡುವ, ಸುಖದುಃಖಗಳಲ್ಲಿ ಸ್ಥಿತಪ್ರಜ್ಞರಾದ ಶ್ರೀಕೃಷ್ಣಾಚಾರ್ಯ ಗುರುಗಳನ್ನು ಭಜಿಸುತ್ತೇನೆ.
**

ಶ್ರೀಮದಿರಾಭಮಪುರ ಕೃಷ್ಣಾಯಾ೯ಷ್ಟಕಮ್ ಚಿಂತನೆ-೩         
                                            
 ಶ್ರೀ ಭೂದೇವ ಗಣೈಃ ಪೂಜ್ಯಂ ಶ್ರೀ ಭೂಮಾಧಿಷಣಾಯುತಂ।
ಭೂಮೀಶಾದೃಷ್ಟ ವಿಭವಂ ಕೃಷ್ಣಾಚಾರ್ಯ ಗುರುಂ ಭಜೇ 

ಬ್ರಾಹ್ಮಣರ ಗುಂಪಿನಿಂದ ಪೂಜಿಸಲ್ಪಡುವ, ಅತಿಶಯವಾದ ಪ್ರಜ್ಞೆಯುಳ್ಳ ಎಂದರೆ ಬೃಹಸ್ಪತ್ಯಾಚಾರ್ಯರಂತಿರುವ, ರಾಜವೈಭವದಿಂದ ಕೂಡಿರುವ
ಶ್ರೀಕೃಷ್ಣಾಚಾರ್ಯ ಗುರುಗಳನ್ನು ಭಜಿಸುತ್ತೇನೆ.

ಭಾರತೀಶ ಪದದ್ವಂದ್ವ ಸಾರಸ ಭ್ರಮರಾಯಿತಂ।
ಸುರವತ್ಕಾಂತಿ ಸಂಪನ್ನಂ ಕೃಷ್ಣಾಚಾರ್ಯ ಗುರುಂ ಭಜೇ ll

ಭಾರತೀಪತಿಯಾದ ಮುಖ್ಯಪ್ರಾಣನ ಪಾದ ಕಮಲದಲ್ಲಿ
ದುಂಬಿಯಂತಿರುವ, ದೇವತೆಗಳಂತೆ ಪ್ರಕಾಶಮಾನರಾದ ಶ್ರೀ ಕೃಷ್ಣಾಚಾರ್ಯ ಗುರುಗಳನ್ನು ಭಜಿಸುತ್ತೇನೆ.
**

ಶ್ರೀಮದಿರಾಭಮಪುರ ಕೃಷ್ಣಾಯಾ೯ಷ್ಟಕಮ್ ಚಿಂತನೆ - ೪ 

ಭಾರತೀಶ ಪದದ್ವಂದ್ವ ಸಾರಸ ಭ್ರಮರಾಯಿತಂ।
ಸುರವತ್ಕಾಂತಿ ಸಂಪನ್ನಂ ಕೃಷ್ಣಾಚಾರ್ಯ ಗುರುಂ ಭಜೇ ll ೬ ll

ಭಾರತೀಪತಿಯಾದ ಪಾದ ಕಮಲದಲ್ಲಿ
ದುಂಬಿಯಂತಿರುವ, ದೇವತೆಗಳಂತೆ ಪ್ರಕಾಶಮಾನರಾದ ಶ್ರೀ ಕೃಷ್ಣಾಚಾರ್ಯ ಗುರುಗಳನ್ನು ಭಜಿಸುತ್ತೇನೆ.

ಶ್ರೀ ರಾಘವೇಂದ್ರ ಚಿತ್ತಜ್ಞಂ ಸಾರಮಾತ್ರ ವದಾವದಂ |
ದೂರೀಕೃತ ದುರಾಚಾರಂ ಕೃಷ್ಣಾಚಾರ್ಯ ಗುರುಂ ಭಜೇ ॥೭॥

ಶ್ರೀ ರಾಘವೇಂದ್ರರ ಮನಸ್ಸನ್ನರಿತಿರುವ ಯಥಾರ್ಥವಾದುದನ್ನು
ಉಪದೇಶಿಸುವ, ದುರಾಚಾರಗಳನ್ನು ದೂರಮಾಡುವಂತಹ ಶ್ರೀಕೃಷ್ಣಾಚಾರ್ಯ
ಗುರುಗಳನ್ನು ಭಜಿಸುತ್ತೇನೆ.
**

ಶ್ರೀಮದಿಭರಾಮಪುರ ಕೃಷ್ಣಾಚಾಯಾ೯ಷ್ಟಕಮ್ ಚಿಂತನೆ -೫

ಶಿಷ್ಟೇಷ್ಟ ಜನಸಂತುಷ್ಟಂ ವೃಷ್ಣೀ ಶಾಂಘ್ರೀ ಸಮಾಶ್ರಿತಂ।
ಕಷ್ಟನಾಶಂ ಸ್ವಭಕ್ತಾನಾಂ ಕೃಷ್ಣಾಚಾರ್ಯ ಗುರುಂ ಭಜೇ ॥೮॥

ಶ್ರೀ ಕೃಷ್ಣನ ಪಾದಗಳನ್ನು ಚೆನ್ನಾಗಿ ಆಶ್ರಯಿಸಿ, ಯೋಗ್ಯರಾದ ಮತ್ತು ಪ್ರೀತಿಪಾತ್ರರಾದ ತಮ್ಮ ಭಕ್ತರ ಕಷ್ಟವನ್ನು ನಾಶ ಮಾಡಿ ಸಂತೋಷ ಕೊಡುವ
ಶ್ರೀಕೃಷ್ಣಾಚಾರ್ಯ ಗುರುಗಳನ್ನು ಭಜಿಸುತ್ತೇನೆ.

ಅಪಷ್ಟಶ್ಲೋಕ ಮಯೀಂ ಮಾಲಾಂ ಕೃಷ್ಣಾಚಾರ್ಯಸ್ತವಾಭಿದಾಂ |
ಇಷ್ಟಸಿದ್ಧಿ ಲಭೇತ್ಸದ್ಯೋ ನಿಷ್ಠಯಾ ಜಪಕೃನ್ನರಃ ll೯॥

ಎ೦ಟು ಶ್ಲೋಕವುಳ್ಳ ಈ ಮಾಲೆಯು ಶ್ರೀಕೃಷ್ಣಾಚಾರ್ಯ ಸ್ತೋತ್ರ ರೂಪದಲ್ಲಿದೆ.
ಇದನ್ನು ನಿಷ್ಠೆಯಿಂದ ಜಪಿಸುವ ನರನು ಅಲ್ಪಕಾಲದಲ್ಲಿಯೇ ಇಷ್ಟಾರ್ಥಹೊಂದುತ್ತಾನೆ.

ಬಾಲೀಶೇನ ಕೃತಾಮಾಲಾ ಕಾಲೀನಾಥ ಪಾದಾಂಬುಜೆ।
ಲೋಲಷಟ್ಪದ ವದ್ಧೂಷಾಸ್ಯಾತ್ಸತಾಂ ಭಜತಾಂ ಮುದೇ ॥೧೦॥

ಬಾಲ ಬುದ್ಧಿಯಿಂದ ಮಾಡಲ್ಪಟ್ಟ ಈ ಮಾಲೆಯು, ಕಾಲಿಂದಾದೇವಿಯ ಒಡೆಯನಾದ ಶ್ರೀ ಕೃಷ್ಣನ  ಪಾದಕಮಲದಲ್ಲಿ ಆಸಕ್ತವಾದ ದುಂಬಿಯಂತೆ ಸಜ್ಜನರಿಂದ ಧರಿಸಲ್ಪಟ್ಟು ಭಜಿಸುವವರಿಗೆ ಸಂತೋಷವನ್ನುಂಟು ಮಾಡುತ್ತದೆ.

 ‌(received in WhatsApp)

***