Showing posts with label ಪಾಲಿಸೆನ್ನನು ಶ್ರೀ ಹರಿಯೆ ಸಿರಿದೇವಿ ಧೊರೆಯೇ prasannashreenivasa. Show all posts
Showing posts with label ಪಾಲಿಸೆನ್ನನು ಶ್ರೀ ಹರಿಯೆ ಸಿರಿದೇವಿ ಧೊರೆಯೇ prasannashreenivasa. Show all posts

Thursday, 5 August 2021

ಪಾಲಿಸೆನ್ನನು ಶ್ರೀ ಹರಿಯೆ ಸಿರಿದೇವಿ ಧೊರೆಯೇ ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru


ಪಾಲಿಸೆನ್ನನು ಶ್ರೀ ಹರಿಯೆ ಸಿರಿದೇವಿ ಧೊರೆಯೇ |

ಸರಸಿಜಾಸನ ಪಿತನೇ|| ಪ


ಪಾರ್ಥಸೂತ ಪನ್ನಗಗಿರಿ ನಿಲಯ ಪವಮಾನ ವಂದ್ಯ |

ಶ್ರೀ ಭೂರಮಣನೇ ಸೃಷ್ಟಿಗೊಡೆಯನೆ |

ಆದಿ ಕಾರಣ ಅತುಳ ಮಹಿಮನೇ

ಭಜಿಪ ಭಕ್ತರ ಕ್ಲೇಶ ಕಳೆಯುವ

ಕೈಟಭಾರಿ ಕರುಣ ಶರಧಿಯೆ ಅ.ಪ


ಬ್ರಹ್ಮಾದಿ ಮನುಜಾಂತ ಶ್ರವಣ ಮನನ ಧ್ಯಾನ

ದಿಂದಲೇ ಕಾಂಬೋರು ನಿನ್ನ ರೂಪ ಯೋಗ್ಯತಾನುಸಾರ |

ನಿಯಮ ಭಂದ ಮೋಕ್ಷ ಕರ್ತನೆ |

ಶಾಂತಿ ಕೈತಿ ಜಯಾ ರಮಣನೀನೇ

ಮೋಕ್ಷದಾಯಕ ಮಾಯಾಪತಿಯೇ

ಸರ್ವ ಆಶ್ರಯ ಲಕ್ಷ್ಮೀ ರಮಣನೇ

ಸಮರು ಅಧಿಕರು ಇಲ್ಲದಂಥಾ |

ಸಾರ್ವಭೌಮನೇ ಆದಿಮೂಲನೆ ಅಪ್ರಮೇಯನೆ

ಅನಿಮಿಷೇಶನೇ ಅನಿರುದ್ಧ ಮಾರುತಿ |

ಎನ್ನ ಅಪವಳಿಗಳನೆ ತಂದು

ಚÉನ್ನವಾಗಿ ನಿನ್ನ ತೋರಿಸಿದ 1

ಸದೋಷಿ ನಾನಹುದೋ ಸಂಕರ್ಷಣ

ಮದ್ದೋಷ ಪರಿಹರಿಸೋ

ನಿತ್ಯ ನಿರ್ಮಲ ನೀನು ನಿಗಮ ವೇದ್ಯನೆ ನಿನ್ನಧೀನವು ಎಲ್ಲಾ |

ವಿಶ್ವ ತೇಜಸ ಪ್ರಾಜ್ಞರೂಪನೇ

ಮೂರು ಸ್ಥಿತಿಯಲ್ಲಿ ಮುಖ್ಯ ಪ್ರವರ್ತಕ |

ಅನ್ನ ಅಂಡ ಪಿಂಡ ಬ್ರಹ್ಮಾಂಡದಲ್ಲಿ ಒಳ ಹೊರಗೆ ವ್ಯಾಪ್ತನೆ

ವಿಶ್ವತೋಮುಖ ವಿಧಿಭವ ನುತ ವಿಚಿತ್ರ ಮಹಿಮ ವಿಭೂತಿರೂಪನೇ

ವಾಸುದೇವನೇ ವಾರಿಜಾಸನ ವಂದ್ಯ ವರಾಹನೆ

ಕುಮತಿ ಕಡಿಯೋ ಕುಬ್ಜ ವರದನೇ ತಗಲಿ

ಇರುವ ತಾ¥ಟಿÀ ಹರಿದು 2

ನಿರ್ಗುಣ ಗುಣ ಭರಿತಾ ನಿನ್ನ ಪರೋಕ್ಷ ಬೇಡುವೆ ಬಹುವಿಧದಿ

ಭವದ ಕ್ಲೇಶಗಳ ಬಿಡಿಸೋ ಭಕ್ತವತ್ಸಲ |

ಭವಾನಿ ಪತಿ ಸನ್ನುತ |

ಪರಮ ಹಂಸೋಪಸ್ಯ ತುರ್ಯನೆ ಆತ್ಮ ಅಂತರಾತ್ಮ |

ಪರಮ ಆತ್ಮ ಜ್ಞಾನಾತ್ಮ ನೀನೆ |

ಮೀನ ಕೂರ್ಮ ಕ್ರೋಢ ನರಹರಿ ಮಾಣವಕ |

ಭೃಗುರಾಮ ಕೃಷ್ಣನೇ ಮೋದ ಕೊಡುವ ಮುದ್ದು ಬುದ್ಧನೆ |

ಕಠಿಣ ಖಳರ ಕಡಿವ ಕಲ್ಕಿಯೆ

ಅನಂತ ಗುಣ ಕ್ರಿಯಾ ರೂಪದಲಿ ನೀ

ಸ್ವಗತ ಭೇದ ವಿವರ್ಜಿತಾತ್ಮನೇ |

ನಿತ್ಯ ನಿರಂಜನ ನಾರಾಯಣನೇ |

ವಿದ್ಯುತ ಪತಿ ಪ್ರಭಂಜನ ಪ್ರಿಯ ರಾಗರಹಿತ

ರಾಘವೇಂದ್ರ ಸಂಸೇವ್ಯ ನರಹರಿಯೆ |

ಅಜನ ತಾತ ಪ್ರಸನ್ನ ಶ್ರೀನಿವಾಸ ಲಕ್ಷ್ಮೀ ಈಶ ಹರಿಯೆ |

ಪ್ರಣತಾರ್ತಿಹರ ಪ್ರಮೋದಿ ನೀನೇ 3

***