Showing posts with label ಜಯ ಜಯ ಶ್ರೀ ಸದ್ಗುರುನಾಥ ದಯಗುಣದಲಿ ನಿಸ್ಸೀಮ ನೀ ಪ್ರಖ್ಯಾತ mahipati. Show all posts
Showing posts with label ಜಯ ಜಯ ಶ್ರೀ ಸದ್ಗುರುನಾಥ ದಯಗುಣದಲಿ ನಿಸ್ಸೀಮ ನೀ ಪ್ರಖ್ಯಾತ mahipati. Show all posts

Wednesday, 1 September 2021

ಜಯ ಜಯ ಶ್ರೀ ಸದ್ಗುರುನಾಥ ದಯಗುಣದಲಿ ನಿಸ್ಸೀಮ ನೀ ಪ್ರಖ್ಯಾತ ankita mahipati

 ಜಯ ಜಯ ಶ್ರೀ ಸದ್ಗುರುನಾಥ ದಯಗುಣದಲಿ ನಿಸ್ಸೀಮ ನೀ ಪ್ರಖ್ಯಾತ ಪ 


ಸ್ವಯಂಭು ಸ್ವತಂತ್ರ ಸ್ವಪ್ರಕಾಶ ಸ್ವಯಂಜ್ಯೋತಿಸ್ವರೂಪ ಸ್ವವಿಕಾಸ ದ್ವೈತಾದ್ವೈತಕೆ ಸಹಿತ ಸ್ವವಿಲಾಸ ಶ್ರೇಯ ಸುಖದಾಯಕನಹುದೋ ನೀ ಪರೇಶ 1 

ಸ್ವಭಾವ ಸ್ವಸಿದ್ಧ ಸರ್ವಾಧಾರ ಸ್ವಭಾಸ ಸ್ವತೇಜ ಸಹಜ ನಿರ್ಧಾರ ಸ್ವಬೋಧ ಸ್ವಬ್ರಹ್ಮ ಸಾಕ್ಷಾತಾರ ಸ್ವಭಕ್ತಜನರಿಗೆ ನೀನೆ ಸಹಕಾರ 2 

ಸ್ವಾನಂದ ಸದೋದಿತ ಸ್ವಯಂ ಭಾನು ಸ್ವಾನಭವಲಾದಯ್ಯ ತಾನೆ ತಾನು ಅನುದಿನ ಭೋರ್ಗರೆವ ನೀ ಕಾಮಧೇನು ದೀನಮಹಿಪತಿ ಸ್ವಾಮಿ ನೀನೆ ನೀನು 3

****