..
kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu
ಬಾರೋ ಬಾರೋ ಪ್ರಾಣಕಾಂತ
ತೋರೊ ಮುಖವ ನೋಡುವೆ
ತೋರಿ ತೋರಿ ನಿನ್ನ ಪದವಾರಿಜವ ನಂಬಿದೆ ಪ
ಭಾರಿ ಭಾರಿಗು ಮಾರ ಎನ್ನ ಘೋರಿಸುತಿರುವನು
ಗಾರು ಮಾಡಬೇಡ ಎನ್ನ ಸೇರಿ ಆನಂದ ನೀಡೊ 1
ಪಂಥ ಮಾಡಬೇಡ ಎನ್ನ ಕಂತು ಜನಕ ಲಾಲಿಸೊ
ಅಂತರಂಗದ ಬಾಧಿಗೆ ನಾ ಚಿಂತೆ ಪಡುತಿರುವೆ 2
ವಾಸುದೇವವಿಠಲ ನಿನ್ನ ದಾಸಿಯಲ್ಲವೆ ನಾನು
ಆಶೆಯಿಂದ ಬಂದೆ ಪರಿಹಾಸ ಮಾಡಬೇಡ 3
***