Showing posts with label ಪೊರಿಯ ಬೇಕೆಲಾ ಮರಿ ನೀನು ಛಲಾ gurupranesha vittala. Show all posts
Showing posts with label ಪೊರಿಯ ಬೇಕೆಲಾ ಮರಿ ನೀನು ಛಲಾ gurupranesha vittala. Show all posts

Thursday, 5 August 2021

ಪೊರಿಯ ಬೇಕೆಲಾ ಮರಿ ನೀನು ಛಲಾ ankita gurupranesha vittala

 .. by ಗುರುಪ್ರಾಣೇಶ ವಿಠಲ

ಪೊರಿಯ ಬೇಕೆಲಾ |ಮರಿ ನೀನು ಛಲಾ ಪ

ಏಸು ಜನ್ಮದಿ ನಿನ್ನ ದಾಸನೆನಿಸಿದೆ | ಉ |ದಾಸ ಮಾಡದೆ ಮಹಿದಾಸ ಎನ್ನನು ನೀ 1

ನಿನ್ನನೆ ಮರೆವುದು ಎನ್ನ ಸ್ವಧರ್ಮವು |ನಿನ್ನ ಘನ್ನತಿಗಿದು ಸನ್ನು ಮತವೆ ಹರಿ 2

ಸರುವಜ್ಞ ನೀನೆಂದೂ ಒರೆದವು ಶೃತಿಗಳು |ಮರೆವುದುಚಿತವೇನೊ ಗುರು ಪ್ರಾಣೇಶ ವಿಠಲಾ 3

.. by ಗುರುಪ್ರಾಣೇಶ ವಿಠಲ

ಮಂಗಳಂ ಮಂಗಳಂ | ಜಯ | ಮಂಗಳಶ್ರೀ ಶ್ರೀನಿವಾಸನರ್ಧಾಂಗಿ ಪ


ಭೃಗುಕಾಲಿಲೊದಿಯಲು | ಅಗಲಿ ಬಂದಳು ಎಂಬೋ ||ಬಗೆ ತೋರಿ ಮೋಹಿಸಿ ಇಗಡ ಜನರ ನಾ || ಮಂಗಳಂ 1

ಪರಮ ಧಾರ್ಮಿಕನಾದ | ವರನಾರಾಯಣ ಋಷಿ ಗೊರವಿತ್ತು ನಡೆತಂದೆ | ಮೆರೆವ ಸನ್ನತಿಗೆ || ಮಂಗಳಂ2

ಕೋಲಾಸುರನ ಕೊಂದು | ಪಾಲಿಸಿ ಪುರವನ್ನು |ಶೀಲೆ ಚಂದ್ರಾದೇವಿ ಆಳಿದಗೊಲಿದೆ || ಮಂಗಳಂ 3

ಆತ ತಕ್ಷಣದಲಿ | ಶ್ವೇತುರಾಯನ ಕೊಂದು |ಮಾತು ಲಾಲಿಸಿ ಅವನ ಪಾತಕ ಕಳದೆ || ಮಂಗಳಂ 4

ಗುರುಪ್ರಾಣೇಶ ವಿಠಲಾ | ಇರುವ ನೀನಿದ್ದಲ್ಲಿಎರವಿಲ್ಲೀ ಮಾತಿಗೆ ಸುರರ ಸಮ್ಮತವೂ || ಮಂಗಳಂ 5

****