Showing posts with label ಬಾರೋ ನಮ್ಮ ಮನೆಗೆ ಶ್ರೀ ಗುರುವಾರ indiresha. Show all posts
Showing posts with label ಬಾರೋ ನಮ್ಮ ಮನೆಗೆ ಶ್ರೀ ಗುರುವಾರ indiresha. Show all posts

Friday, 27 December 2019

ಬಾರೋ ನಮ್ಮ ಮನೆಗೆ ಶ್ರೀ ಗುರುವಾರ ankita indiresha

ಶ್ರೀ ರಾಘವೇಂದ್ರ ಸ್ತುತಿ "
ರಚನೆ : ಶ್ರೀ ಹುಚ್ಚಾಚಾರ್ಯ ಪಾಂಡುರಂಗಿ ಅಂಕಿತ : ಶ್ರೀ ಇಂದಿರೇಶರು

ಬಾರೋ ನಮ್ಮ ಮನೆಗೆ ಶ್ರೀ ಗುರುವಾರ ।। ಪಲ್ಲವಿ ।।

ಬಾರೋ ನಮ್ಮನೆಗೀ ರಸಮಯ ವಿಚಾರ
ಪರ ಸಕಳಾರ್ಯ ಸೇವಿತ ।। ಅ ಪ ।।

ರಾಮ ಲಕ್ಷ್ಮಣ ಕಾಮಿನಿ ಶ್ರಿತ ಕಾಮ ।
ಮಳಾತ್ಮ ಸುಧಾಮ ರಾಜಿತ ।। ಚರಣ ।।

ಎಷ್ಟೋ ಮಾನವರೆಷ್ಟೋ ಸೇವಿಸು ।
ತುಷ್ಟ ಭೂತಿ ವಿಶಿಷ್ಟ ರಾದರೂ ।। ಚರಣ ।।

ಸೌಧ ಭಾವ ವಿಬೋಧ ಪರಿಮಳ ।
ಸಾದಿ ಭೂಪ ಪ್ರಸಾದ ಪೂರಿತ ।। ಚರಣ ।।

ನಿಮ್ಮ ದರ್ಶನ ಶರ್ಮ ಸಾಧನ ।
ಧರ್ಮ ಮಮ ಪ್ರತಿ ಜನ್ಮನಿಸ್ಯಾತ್ ।। ಚರಣ ।।

ಬಂದು ನೀ ನಮಾಗೆಂದು ಕೇಳಿದೆ ।
ಇಂದಿರೇಶನ ತಂದು ತೋರಿಸು ।। ಚರಣ ।।
*******