Friday, 27 December 2019

ಬಾರೋ ನಮ್ಮ ಮನೆಗೆ ಶ್ರೀ ಗುರುವಾರ ankita indiresha

ಶ್ರೀ ರಾಘವೇಂದ್ರ ಸ್ತುತಿ "
ರಚನೆ : ಶ್ರೀ ಹುಚ್ಚಾಚಾರ್ಯ ಪಾಂಡುರಂಗಿ ಅಂಕಿತ : ಶ್ರೀ ಇಂದಿರೇಶರು

ಬಾರೋ ನಮ್ಮ ಮನೆಗೆ ಶ್ರೀ ಗುರುವಾರ ।। ಪಲ್ಲವಿ ।।

ಬಾರೋ ನಮ್ಮನೆಗೀ ರಸಮಯ ವಿಚಾರ
ಪರ ಸಕಳಾರ್ಯ ಸೇವಿತ ।। ಅ ಪ ।।

ರಾಮ ಲಕ್ಷ್ಮಣ ಕಾಮಿನಿ ಶ್ರಿತ ಕಾಮ ।
ಮಳಾತ್ಮ ಸುಧಾಮ ರಾಜಿತ ।। ಚರಣ ।।

ಎಷ್ಟೋ ಮಾನವರೆಷ್ಟೋ ಸೇವಿಸು ।
ತುಷ್ಟ ಭೂತಿ ವಿಶಿಷ್ಟ ರಾದರೂ ।। ಚರಣ ।।

ಸೌಧ ಭಾವ ವಿಬೋಧ ಪರಿಮಳ ।
ಸಾದಿ ಭೂಪ ಪ್ರಸಾದ ಪೂರಿತ ।। ಚರಣ ।।

ನಿಮ್ಮ ದರ್ಶನ ಶರ್ಮ ಸಾಧನ ।
ಧರ್ಮ ಮಮ ಪ್ರತಿ ಜನ್ಮನಿಸ್ಯಾತ್ ।। ಚರಣ ।।

ಬಂದು ನೀ ನಮಾಗೆಂದು ಕೇಳಿದೆ ।
ಇಂದಿರೇಶನ ತಂದು ತೋರಿಸು ।। ಚರಣ ।।
*******

No comments:

Post a Comment