..
kruti by ವಿಶ್ವೇಂದ್ರತೀರ್ಥರು vishwendra teertharu sode mutt
ಭೂವರಾಹ ಪಾಲಿಸೆನ್ನ ಶ್ಯಾಮಲಾಂಗ ಕಾಮ ತಾತ
ಪಾವಮಾನ ಕರಗಳಿಂದ ಸೇವ್ಯಮಾನ ಚಾರು ಚರಣ ಪ
ಧರೆಯನ್ನೆತ್ತಿ ತೊಡೆಯೊಳಿಟ್ಟು
ಕರಗಳಿಂದಲಪ್ಪಿಕೊಂಬ
ಕರುಣದಿಂದ ಸುರರಿಗಭಯ
ವಿತ್ತ ದಿವ್ಯ ಕೋಲಮೂರ್ತಿ 1
ಎರಡನೆಯ ಹಿರಣ್ಯಾಕ್ಷ
ದೈತ್ಯನನ್ನು ಮಥಿಸಿದಂಥ
ಧರಣಿಯಲ್ಲಿ ನರಕವನ್ನು
ಜನಿಸಿದಂಥ ಮಂಗಲಾಂಗ 2
ದೇಶದೊಳ್ ಶ್ರೀಮುಷ್ಣವೆನಿಪ
ಕ್ಷೇತ್ರದೊಳಗೆ ನೆಲಸಿದಂಥ
ಶೇಷ ಶಿರದೊಳ್ ಚರಣವಿತ್ತ
ರಾಜನಾಥ ಹಯಮುಖಾತ್ಮ 3
***