ಕೋಲ ಕೋಲೆನ್ನಿ ಮುತ್ತಿನ ಕೋಲ ಕೋಲೆನ್ನಿಗೋಪಾಲರಾಯನ ನೋಡುವ ಬಾಲೆಯರೆÉ ಬನ್ನಿ ಪ.
ದಿಕ್ಕು ತುಂಬಿತು ಈ ದಿಕ್ಕು ತುಂಬಿತುಲೆಕ್ಕವಿಲ್ಲದ ಜನರು ರುಕ್ಮಿಣಿಯ ಮುಯ್ಯಕ್ಕೆ1
ಕಾಶ ತುಂಬಿತು ಎಲ್ಲ ಕೋಶ ತುಂಬಿತು ಆಶೆ ಬಡುತಲೆ ಜನರು ಸೋಸಿನ ಮುಯ್ಯಕ್ಕೆ 2
ಹಾದಿ ತುಂಬಿತು ಎಲ್ಲ ಬೀದಿ ತುಂಬಿತು ಆದರದಿಂದಲೆ ಜನರುಮೋದದಿ ಮುಯ್ಯಕ್ಕೆ 3
ಅಂಬರ ತುಂಬಿತು ಮ್ಯಾಲೆ ಮ್ಯಾಲೆ ಅಂಬರ ತುಂಬಿತುಸಂಭ್ರಮದಿಂದಲೆ ಜನರು ರಂಭೆಯರ ಮುಯ್ಯಕ್ಕೆ 4
ಪಟ್ಟಣ ತುಂಬಿತು ಒಂದಿಷ್ಟು ಬಿಡದಲೆ ಕೃಷ್ಣ ರಾಮೇಶನ ಜನರು ಶ್ರೇಷ್ಠದ ಮುಯ್ಯಕ್ಕೆ 5
****