ನೆನೆವೆ ನಾನುದಿನ ನಿಮ್ಮೀ ಮಹಿಮೆಯನು, ಮಧ್ವರಾಯ ||ಪ||
ಸನಕಾದಿವಂದ್ಯ ಸೇವಿತ ಪದಾಬ್ಜ ,ಮಧ್ವರಾಯ ||ಅ.ಪ||
ಕಲಿಮಲದಿಂ ಕಲುಷಿತವಾಗಲು ಜ್ಞಾನ, ಮಧ್ವರಾಯ
ನಳಿನಾಕ್ಷನಾಜ್ಞದಿ ಇಳೆಯೊಳಗುದಿಸಿದ್ಯೋ, ಮಧ್ವರಾಯ ||
ಗೋವಿತ್ತ ವಿಪ್ರಗೆ ನಿರುತ ಮೋಕ್ಷವನಿತ್ಯೋ, ಮಧ್ವರಾಯ
ಸಾವಿರ ಬೀಜರೂಪದಿ ಸಾಲದ ಹಣವಿತ್ತ್ಯೋ , ಮಧ್ವರಾಯ ||
ದಶ ಉಪನಿಷದ್ಗೀತ ಶ್ರುತಿಭಾಷ್ಯ ಮಾಡಿದ್ಯೋ , ಮಧ್ವರಾಯ
ಸುಶಾಸ್ತ್ರ ತಾತ್ಪರ್ಯ ಪ್ರಕರಣವ ರಚಿಸಿದ್ಯೋ, ಮಧ್ವರಾಯ ||
ಸುಜನರ ಹೃದಯದಿ ಸೇರಿದ್ದ ತಮವನ್ನು ,ಮಧ್ವರಾಯ
ನಿಜ ಜ್ಞಾನ ರವಿಯಾಗಿ ಉದಿಸಿ ನೀ ಹರಿಸಿದ್ಯೋ, ಮಧ್ವರಾಯ||
ವ್ಯಾಸದೇವರಿಗೆ ವಂದಿಸಿ ಬದರಿಯಲಿ, ಮಧ್ವರಾಯ
ಶ್ರೀಶ ಪುರಂದರವಿಠಲದಾಸ ನಮ್ಮ, ಮಧ್ವರಾಯಾ ||
***
ರಾಗ ಸೌರಾಷ್ಟ್ರ. ಆದಿ ತಾಳ (raga tala may differ in audio)
pallavi
nenevene anudina nimma mahimeyanu madhvarAyA sanakAdi muni vrnda sEvita padAbja madhvarAyA
caraNam 1
kamladIm jnAna kaluSidavAgalu madhvarAyA naLinAkSanAjnati iLeyoLa kudiside madhvarAyA
caraNam 2
gOvitta viprage niruta mOkSavanitta madhvarAyA jIvEsharontemba matava bhEdiside madhvarAyA
caraNam 3
sUtrArttangaLanella vEtrugaLige tiLisi madhvarAyA shAstrada tAtparya prakaraNa raciside madhvarAyA
caraNam 4
sujanara hrdayadi sEridda madhvarAyA nija jnAna raviyante kiraNava hraDide madhvarAyA
caraNam 5
vyAsa dEvarigabi vandisi badariyali madhvarAyA shrIsha purandara viTTala dAsanAde madhvarAyA
***
ನೆನೆವೆನು ಅನುದಿನ ನಿಮ್ಮ ಮಹಿಮೆಯನು-ಮಧ್ವರಾಯಾ |ಸನmaraneಕಾದಿ ಮುನಿವೃಂದ ಸೇವಿತ ಪಾದಾಬ್ಜ-ಮಧ್ವರಾಯಾ ಪ
ಕಲಿಮಲದಿ ಙ್ಞÕನ ಕಲುಷಿತವಾಗಲು ಮಧ್ವರಾಯಾ |ನಳಿನಾಕ್ಷನಾಜೆÕಯಿಂದಿಳೆಯೊಳಗುದಿಸಿದೆ-ಮಧ್ವರಾಯಾ 1
ಗೋವಿತ್ತ ವಿಪ್ರಗೆ ನಿರುತ ಮೋಕ್ಷವನಿತ್ತ-ಮಧ್ವರಾಯಾ |ಜೀವೇಶರೊಂದೆಂಬ ಮತವ ಭೇದಿಸಿದೆ-ಮಧ್ವರಾಯಾ 2
ಸೂತ್ರಾರ್ಥಂಗಳನೆಲ್ಲ ವೇತೃಗಳಿಗೆ ತಿಳಿಸಿ-ಮಧ್ವರಾಯಾ |ಶಾಸ್ತ್ರದ ತಾತ್ಪರ್ಯ ಪ್ರಕರಣ ರಚಿಸಿದೆ-ಮಧ್ವರಾಯಾ 3
ಸುಜನರ ಹೃದಯದಿ ಸೇರಿದ್ದ ತಮಸಿಗೆ-ಮಧ್ವರಾಯಾ |ನಿಜ ಙ್ಞÕನ ರವಿಯಂತೆ ಕಿರಣವ ಹರಡಿದೆ-ಮಧ್ವರಾಯಾ 4
ವ್ಯಾಸದೇವರಿಗಭಿವಂದಿಸಿ ಬದರಿಯಲಿ-ಮಧ್ವರಾಯಾ ||ಶ್ರೀಶಪುರಂದರವಿಠಲ ದಾಸನಾದೆ-ಮಧ್ವರಾಯಾ 5
**********