Showing posts with label ವಾಮ ಭಾಗದಿ ಲಕ್ಷ್ಮೀದೇವಿಯುಭೂಮಿ ದೇವಿಯು indiresha. Show all posts
Showing posts with label ವಾಮ ಭಾಗದಿ ಲಕ್ಷ್ಮೀದೇವಿಯುಭೂಮಿ ದೇವಿಯು indiresha. Show all posts

Monday, 2 August 2021

ವಾಮ ಭಾಗದಿ ಲಕ್ಷ್ಮೀದೇವಿಯುಭೂಮಿ ದೇವಿಯು ankita indiresha

ವಾಮ ಭಾಗದಿ ಲಕ್ಷ್ಮೀದೇವಿಯುಭೂಮಿ ದೇವಿಯು ದಕ್ಷಭಾಗದಿಶ್ರೀ ಮನೋಹರನಿಹನು ಮಧ್ಯದಿಪ್ರೇಮದಲಿ ನಮಿಸು 1

ನಮಿಸು ಕೃದ್ದೋಲ್ಕ ವಾಸುದೇವರಸ್ಮರಿಸು ಕೇಶವದ್ವಿತಿ ಮತ್ಪರಸ್ಮರಿಸು ಕೂರ್ಮಾನಂತ ಶಕ್ರರಸುರಿಪ ದಿಶಿಯಲ್ಲೀ 2

ಸ್ಮರಿಸು ಸಹಸ್ರೋಲ್ಕ ಮಾಯರಶಿರಿವರಾವನಿ ಧರನ ವಾರುಣಿಸ್ಮರಹರಾಂಚಿತನು ವಹ್ನಿಯಶರನ ಕೋನದಲಿ 3

ನಮಿಸು ಮಹೋಲ್ಕ ಸಂಕರ್ಷಣನನಮಿಸು ಗೋವಿಂದ ವಿಷ್ಣು ನರಹರಿನಮಿಸು ವಾಮನ ಬ್ರಹ್ಮ ಯಮರನುಕ್ರಮದಿ ದಕ್ಷಿಣದಿ 4

ಸ್ಮರಿಸು ಸಹಸ್ರೋಲ್ಕ ಜಯರನುಸ್ಮರಿಸು ಮಧುಹನ ಪರಷುರಾಮನಸರಸಿಜಾಸನ ಸತಿಯು ನಿಋತಿಯತಿಋತಿ ಕೋಣದಲಿ 5

ವೀರ ಉಲ್ಕ ಪ್ರದ್ಯುಮ್ನ ತ್ರಿವಿಕ್ರಮಸಾರ ರಘುವರ ವೃಷ್ಣಿನಾಥಸ-ಮೀರ ವರುಣರ ಪೂಜಿಸೂವುದುವಾರಿ ದಿಶೆಯಲ್ಲೀ 6

ನುತಿಸು ಸಹಸ್ರೋಲ್ಕ ಕೃತಿಯರನತಿಸು ಶ್ರೀಧರ ಬುದ್ಧಿ ಭಾರತಿಸತತ ಗಮನರ ವಾಯು ಕೋಣದೊಳತಿ ಸುಭಕ್ತಿಯಲಿ 7

ದ್ಯುಲ್ಕ ಅನಿರುದ್ದೇಂದ್ರಿಶೇಯರನಳಿನನಾಭನ ಕಲ್ಕಿ ನಂತರಸಲಿಲ ಮೂರುತಿ ರೋಹಿಣೇಶರಒಲಿಸು ಉತ್ತರದೀ 8

ಸ್ಮರಿಸು ಸಹಸ್ರೋಲ್ಕ ಶಾಂತರಸ್ಮರಿಸು ದಾಮೋದರನ ವಿಶ್ವನಗಿರಿಜೆಯನು ಪಾರ್ವತೀ ಪತಿಯಹರನ ಕೋಣದಲಿ 9

ವಾರಣಾಸನ ಮೊದಲು ನಿಜಪರಿವಾರ ಸಹಿತದಿ ಸರ್ವದಿವಿಜರುಮಾರನಯ್ಯನ ಸುತ್ತಲೂ ಪರಿ-ಚಾರರಾಗಿಹರು 10

ಈಸು ಪೀಠಾವರಣ ತ್ರಿದಿವನಿವಾಸಿಗಳ ಮಧ್ಯದಲಿ ಸಂತತವಾಸುದೇವನ ಪೂಜಕೇಶನಿ-ವಾಸ ಪೊಂದುವರು 11

ಗಿರಿಯೊಳಿರುತಿಹ ವೆಂಕಟೇಶನಸರಸ ಪೀಠಾವರಣ ಪೂಜೆಯಕರಡಿ ಮಗಳಿಗೆ ಜೈಗಿಷವ್ಯನುಅರುಹಿದನು ಮುದದಿ 12

ಗರುಡನಿಗೆ ಶ್ರೀಕೃಷ್ಣ ಪೇಳಿದಹರಿಯ ಪೀಠಾವರಣ ಪೂಜೆಯಸರ್ವ ಜನರಿಗೆ ತಿಳಿಯಲೋಸುಗವಿರಚಿಸಿದೆ ನಾನೂ 13

ಇಂದಿರೇಶನು ಎನ್ನವಾಣಿಲಿನಿಂದು ಮಾಡಿದನೀ ಸುಗ್ರಂಥವಲೆಂದು ಆತನ ಪಾದಕಮಲದ್ವಂದ್ವಕೊಪ್ಪಿಸುವೆ 14

****