Showing posts with label ಶ್ರೀಕೇಶಾಯಾದಿ vijaya vittala ankita suladi ಕಾಶಿ ಬಿಂದುಮಾಧವ ಸುಳಾದಿ SRI KESHAYAADI KASHI BINDUMADHAVA SULADI. Show all posts
Showing posts with label ಶ್ರೀಕೇಶಾಯಾದಿ vijaya vittala ankita suladi ಕಾಶಿ ಬಿಂದುಮಾಧವ ಸುಳಾದಿ SRI KESHAYAADI KASHI BINDUMADHAVA SULADI. Show all posts

Saturday 8 May 2021

ಶ್ರೀಕೇಶಾಯಾದಿ vijaya vittala ankita suladi ಕಾಶಿ ಬಿಂದುಮಾಧವ ಸುಳಾದಿ SRI KESHAYAADI KASHI BINDUMADHAVA SULADI




  Audio by Vidwan Sumukh Moudgalya


 

ಶ್ರೀ ವಿಜಯದಾಸಾರ್ಯ ವಿರಚಿತ  ಕಾಶಿ ಬಿಂದುಮಾಧವ ಸ್ತೋತ್ರ ಸುಳಾದಿ 


 ರಾಗ : ರೇವತಿ 


 ಸ ಬಿಂದುಮಾಧವಃ ಪಾಯಾದ್ವಿಭೋರ್ಯಸ್ಯ ನಿರೀಕ್ಷಣಾತ್ ।

 ಅಪಾರೋsಪಿಹಿ ಸಂಸಾರಸಿಂಧುರ್ಬಿಂದುತ್ವಮಶ್ನುತೇ ॥

(ಸಮರ್ಥನಾದ ಯಾರ ನೋಟದಿಂದ ಸಂಸಾರ ಸಮುದ್ರವು ಪಾರವಿಲ್ಲದ್ದಾದರೂ , ಬಿಂದು ಮಾತ್ರ ಪರಿಮಾಣವನ್ನು ಹೊಂದುವುದೋ , ಆ ಬಿಂದುಮಾಧವನೆಂಬ ಶ್ರೀ ಹರಿಯು ನಮ್ಮನ್ನು ಪಾಲಿಸಲಿ🙏)


 ಧ್ರುವತಾಳ 


ಶ್ರೀ ಕೇಶಾಯಾದಿ ಯಾವದೊಂದಂಗಾ ಪೊತ್ತಾ 

ಲೋಕೈಕಾ ವೈಲಕ್ಷಣ್ಯ ಪೂರ್ಣಾಪೂರ್ಣಾ 

ಸಾಕಾರಾ ಮೂರುತಿ ಪ್ರಾಣೆಂದಿರಾಪತಿ ಅ -

ನೇಕರೂಪ ಕ್ರೀಯಾ ಗುಣಗಣನಂತಾನಂತ 

ಶೋಕವಿನಾಶ ನಾರಸಿಂಹಾದಿ ಕ್ಷೇತ್ರಜ್ಞ 

ಲೋಕೇಶ ಮೊದಲಾದ ತತುಶಬ್ದದಿಂದ 

ಓಂಕಾರಾದಿ ವರ್ಣಾಭಿದೇಯಾ 

ಶ್ರೀ ಕಾಂತಾ ಸಮಸ್ತ ಶಕ್ತಿ ಜ್ಞಾನಾತ್ಮಕ 

ವೈಕುಂಠನಾಯಕ ವೈತರಣಿ ತಾರಕಾ 

ಏಕಾರ್ಣವಾಸ ವಟಪತ್ರ ಶಾಯೀ 

ಏಕಾಂತಿಗಳ ಮನೋರಥವೆ ರಾಕ್ಷಸಾರಾತಿ 

ಗೋಕುಲಾ ಭೂಮಿ ಪಾವನ ಜೀವನಾ 

ವೈಕಾರಿಕ ತೈಜಸ ತಾಮಸ ಕರ್ಮ, ಪುಣ್ಯ 

ಶ್ಲೋಕಾನೆ ನಿನಗೆ ಅರ್ಪಿತವಾಗಲಿ

ನಾಕ ನದಿಯ ಜನಕ ವಿಜಯವಿಠಲ ವಿ -

ವೇಕಬುದ್ಧಿಯ ಕೊಡು ಬಿಂದು ಮಾಧವ ಕಾಶಿ ॥೧॥


 ಮಟ್ಟತಾಳ 


ಕಾಶಿಗೆ ಬಂದೆನಯ್ಯಾ ಕಾಶಿಗೆ ಬಂದೆ ಶತ 

ಕಾಶಿಗೆ ಬಂದೆನಯ್ಯಾ ಕಾಶಿಗೆ ಬಂದರಾಗಾ ಕಾಸಾವಿಸಿಪೋಗದು

ಕಾಶಿನಿಂದಲಿ ದೇಹ ಕಾಸಿದಂತಾಯಿತು 

ಕಾಶಿಜಪತಿ ವಂದ್ಯಾ ವಿಜಯವಿಠಲ ಯೇ -

ಕಾಶಿಯ ಬಿಡಿಸೂ ಕಾಶಿಯ ಪುರ ಧೊರಿಯೆ ॥೨॥


 ತ್ರಿವಿಡಿತಾಳ 


ಆವಾವಾಬಗೆಯಿಂದ ಇದ್ದಾರಾದಾರು

ದೇವಾ ನೀನೆ ಕರುಣಮಾಡಿ ಎನ್ನಾ 

ಕಾವ ಮಾತಲ್ಲಾದೆ ಮತ್ತೊಂದು ಯೋಚನೆ 

ಆವಾವಾ ಜನುಮಕ್ಕೆ ಮಾಡೆನಯ್ಯಾ 

ಪಾವನ ಪಾವನ ನಿನ್ನಾಧ್ಯಾನವೆ ಜಗ-

ತ್ಪಾವನ ನಿನ್ನ ಪಾದೋದಕಕೆ ಉಂಟು 

ಈ ವಿಧವಲ್ಲದೆ ಸಾಧ್ಯಾಸಾಧನವಿಲ್ಲ 

ಕೋವಿದರರಸನೆ ಕೇಶವ ಮೂರ್ತಿ 

ನೋವು ಇಲ್ಲದಂತೆ ಕರತಂದು ನಿನ್ನಂಘ್ರಿ 

ದಾವರೆ ಜಲದಲ್ಲಿ ಮೀಯೀಸಿದೇ 

ಭಾವದಲಿ ಭಕ್ತರು ನೆನೆದದ್ದು ಪೂರೈಸಿ 

ಸಾವಧಾನವಾಗಿ ಕೊಡುವವನೆ 

ಪೂವಿಲ್ಲನಯ್ಯಾ ಶ್ರೀ ವಿಜಯವಿಠಲ ಮಾಧವ 

ಶ್ರೀ ವಾರಣಾಸಿಯ ವಾಸಾ ನಾನಾವೇಷಾ ॥೩॥


 ಅಟ್ಟತಾಳ 


ಅನಂತ ಅಪರಾಧ ಮಾಡಿದ ಕಾಲಕ್ಕೂ 

ನೀನೆಣಿಸುನಲ್ಲಾ ಸತ್ಯಕಾಮನೆಂದು 

ಶ್ರೀ ನಾರಿಬೊಮ್ಮಾ ಮಹೇಂದ್ರಾದ್ಯರು ನಿತ್ಯ 

ಎಣಿಕೆಮಾಳ್ಪರು ಎಲ್ಲೆಲ್ಲಿ ನಿರೀಕ್ಷಿಸಿ 

ಮಾಣಾದೆ ಮತಿಯಿಂದ ತಲೆದೂಗಿ ಅನುಭವ 

ಏನೆಂಬೆ ನಿಮ್ಮಯ ಬಲು ಪ್ರತಾಪಕ್ಕೆ 

ಮಾನವಾಗುಣಿಸಿ ನೆಲೆಗಾಣ ಬಲ್ಲನೆ 

ಮೇಣುಗಿರಿಜೇಶಗೆ ಕಾಶಿ ಪಟ್ಟಣದಲ್ಲಿ 

ನೀನಿಲಿಸಿದೆ ಬ್ರಹ್ಮಹತ್ಯವ ಪೋಗಾಡಿ 

ಆನಂದ ವನವಾಸಾ ವಿಜಯವಿಠಲರೇಯಾ 

ಜಾನ್ಹವಿ ಪಡೆದ ಜಗದ ಮೋಹನ ಸ್ವಾಮೀ ॥೪॥


 ಆದಿತಾಳ 


ನರಕತಾರಕ ನಾರಾಯಣ ನರಕಮಾರಕ ನಾರಾಯಣ 

ನರ ನಾರಾಯಣ ನಾರದವರದ 

ಹರಿ ವಾಸುದೇವ ಪರಮ ಮಂಗಳ ಪರದೈವ 

ನೆರೆನಂಬಿದೆ ನಿನ್ನ ಚರಣ ಶರಣವರಣ 

ಶರಣ ನರಕತಾರಕ ನಾರಾಯಣಾ ಕರುಣಾ 

ಶರಧಿ ತ್ರಿಪುರವೈರಿ ಕರಶರಸರಸಿಜಾಂಡಾಕರಾ 

ವರಣ ಅಸಿ ಸಂಗಮನಿಲಯ 

ನರಕೋದ್ಧಾರಕ ವಿಜಯವಿಠಲ 

ನರಹರಿ ಬಿಂದು ಮಾಧವ ಕಾಶಿ ॥೫॥


 ಜತೆ 


ಅಗ್ನಿಬಿಂದು ವರದಾ ಅನಾದಿಮೂರುತಿ 

ಅಜ್ಞಾನ ಪರಿಹಾರಾ ವಿಜಯವಿಠಲ ಕಾಶಿ ॥೬॥

******