Showing posts with label ಅನಂತಾನಂತಶಯನಾ vijaya vittala ankita suladi ಅಹೋಬಲ ನರಸಿಂಹ ಕ್ಷೇತ್ರ ಸುಳಾದಿ ANANTANANTASHAYANA AHOBAL NARASIMA KSHETRA SULADI. Show all posts
Showing posts with label ಅನಂತಾನಂತಶಯನಾ vijaya vittala ankita suladi ಅಹೋಬಲ ನರಸಿಂಹ ಕ್ಷೇತ್ರ ಸುಳಾದಿ ANANTANANTASHAYANA AHOBAL NARASIMA KSHETRA SULADI. Show all posts

Monday, 18 January 2021

ಅನಂತಾನಂತಶಯನಾ vijaya vittala ankita suladi ಅಹೋಬಲ ನರಸಿಂಹ ಕ್ಷೇತ್ರ ಸುಳಾದಿ ANANTANANTASHAYANA AHOBAL NARASIMA KSHETRA SULADI

Audio by Vidwan Sumukh Moudgalya

ಶ್ರೀ ವಿಜಯದಾಸಾರ್ಯ ವಿರಚಿತ  ಅಹೋಬಲ ನರಸಿಂಹ ಕ್ಷೇತ್ರ ಸುಳಾದಿ 


 ರಾಗ : ಕೇದಾರಗೌಳ 


 ಧ್ರುವತಾಳ 


ಅನಂತಾನಂತಶಯನಾ ಅಂಬುಜದಳ ನಯನ 

ಉನ್ನಂತ ಗುಣನಿಲಯಾ ಪನ್ನಗಗೇಯ

ಘನ್ನ ಕಾರುಣ್ಯಮೂರ್ತಿ ಸತತ ಮಂಗಳ ಕೀರ್ತಿ 

ಚನ್ನ ಪ್ರಸನ್ನರನ್ನ ಶಿರಿ ಸಂಪನ್ನ 

ಚಿನ್ನಾಂಬರ ಚಿನ್ನರೂಪ ಚಿನ್ಮಯ ಕಾಯ 

ಭಿನ್ನ ಜೀವರಪರಿಭಿನ್ನ ವ್ಯಾಪ್ತಾ 

ಪನ್ನಗನಾಗಾತಲ್ಪಾ ನಾಗಭಯ ವಿನಾಶ 

ಜುನ್ನಾ ಚೋರಾ ಚತುರಾ ಚತುರ್ಮೊಗನ್ನಯ್ಯಾ 

ಅಣೋರಣೀ ಅಜರಾ ಅನಾದಿದೇವ ಪಾ-

ವನ್ನಾ ಜೀವನ್ನಾ ದುಷ್ಟ ಜನ ಮರ್ದನಾ 

ಬಣ್ಣಾ ಬಣ್ಣಾದ ಘನ್ನವರ್ನಾ ಸುಪರ್ನ ವಾ-

ಹನ್ನಾ ಭವಾರಣ್ಯಾ ದಾಹನ್ನ ನಿತ್ಯಾ 

ಜೊನ್ನ ಪ್ರಕಾಶ ದಿಕ್ಕರಿಸುವ ತೇಜಾ ಪ್ರ-

ಸನ್ನಾ ಕೇಶವ ಭಂಜನ್ನಾ ಸುನಿರಂಜನ್ನಾ 

ಎನ್ನಂತರಂಗದೊಳಗಿಪ್ಪ ವಿಜಯವಿಠಲಾ 

ಅನಂತಗಿರಿವಾಸಾ ನರಕೇಸರಿವೇಷಾ ॥೧॥


 ಮಟ್ಟತಾಳ 


ಕಲ್ಪಾಯು ಪಡೆದ ಮುನಿ ಮಾರ್ಕಂಡೇಯಾ 

ಸರ್ಪಗಿರಿಯಲ್ಲಿ ಶ್ರೀನಿವಾಸನ ನೋಡಿ 

ತಪ್ಪದೆ ದೇವನ್ನ ವರವ ಸಂಪಾದಿಸೆ 

ಒಪ್ಪದಿಂದಲಿ ಈ ಗಿರಿಯಾ ಕಡೆ ಭಾಗಾ 

ತಪ್ಪಾಲಲ್ಲೀ ಪೋಗಿ ತಪವನುಮಾಡೆಂದು 

ಅಪ್ಪಣೆ ಕೊಡಲಾಗಿ ಶುದ್ಧನ ಒಡಗೂಡಿ 

ಸುಪ್ರೀತಿಯಿಂದ ಭುವನವ ಸಂಚರಿಸೀ 

ಅಪ್ರತಿಯಾಗಿದ್ದ ಸ್ಥಳವನೆ ನೀಕ್ಷಿಸುತ 

ಮುಪ್ಪುರದೊಳಗಿದಕೆ ಎದರುಗಾಣನೆಂದು 

ಅಲ್ಪಮನಸುಮಾಡದೆ ವಾಸವಾದನು ಇಲ್ಲಿ 

ಮುಪ್ಪು ಇಲ್ಲದ ದೇವ ವಿಜಯವಿಠಲನ್ನಾ 

ವರ್ಪಗಳು ಗುಣಿಸಿ ಧ್ಯಾನವ ಐದಿದನೂ ॥೨॥


 ತ್ರಿವಿಡಿತಾಳ 


ಪದಿನಾಲ್ಕು ಸಾವಿರ ವರುಷ ಭಕುತಿಯಿಂದ 

ಒದಗಿ ತಪವಮಾಡಿ ಆಹಾರ ತೊರದೂ 

ಮುದದಿಂದ ಬಂದು ನೇಮವಮಾಡಿಕೊಂಡಿಪ್ಪ 

ಸದಮಲವಾದ ಅಹೋಬಲರಾಯನ 

ಪದದರುಶನ ಮತ್ತೆ ಭವನಾಶಿ ಮಜ್ಜನ 

ಬುಧನು ಬಿಡದೆ ಬಂದು ಗುಹಾದಿಂದ 

ಉದಯಕಾಲಕೆ ಪೋಗಿ ಬಲಗೊಂಡು ಬರುವಾ ಪ್ರಾಂ-

ತ್ಯದಲಿ ಒಂದಾಯಿತು ಕೇಳಿ ಜನರೂ 

ಅದು ಭೂತಾದಿವಸ್ತ ಪ್ರಾಪ್ತವಾಯಿತು 

ಮೊದಲು ಚಾತುರ್ಮಾಸ್ಯ ಏಕಾದಸೀ 

ಅದರ ತರುವಾಯ ಕಳಮಾತ್ರಸಾಧನ 

ಪದವಿಗೆ ಕೇವಲಾ ಶುಚಿಮಾರ್ಗವೋ 

ಇದು ಉಲ್ಲಂಘಿಸಿದರೆ ಪಾಪ ಅಲ್ಲಿಗೆ ಪೋಗಾದೊ 

ಇದ್ದಾರೆ ಎನ್ನಾ ನೇಮ ಭಂಗ 

ಹದುಳ ತೋರದೇ ಮೌನಿ ಉಭಯಸಂಕಟದಿಂದ 

ಪದುಮನಾಭನ ಚರಣನೆನೆಸಿ ಗುಣಿಸೆ 

ಅದೆ ಅದೆ ಸಮಯದಲಿ ದೇವ ನುಡಿದ ತಾನೆ 

ಉದಯವಾಗದ ಮುನ್ನೆ ಅರುಣನ ಗತಿಗೆ 

ನದಿ ಭವನಾಶಿಯಾ ಕರಕೊಂಡು ಪಾರಿಜಾ 

ತದ ವೃಕ್ಷ ಸಮೇತಾ ಬರುವೆನೆಂದೂ 

ಹೃದಯದೊಳಗೆ ತಿಳಿಸಿ ಪೇಳಿದಂತೆ ಬಂದು 

ಉದಭವನಾದನು ಅಹೋಬಲರಾಯಾ 

ಗದಗದನೆ ನಡುಗುತ್ತಾ ಅಂಜಳಿ ಪುಟದಿಂದ 

ತೊದಲು ವಾಕ್ಯಗಳಿಂದ ಹರಿಯ ಸ್ತುತಿಸಿ 

ತ್ರಿದಶಾದಿ ವಂದ್ಯ ನಾರಸಿಂಹನೆ ಪರಮಾ ಸು-

ಹೃದಯನೆ ಅನಂತನಾಮಕ ದೇವನೆ 

ಮದಡಮತಿಗೆ ಒಲಿದು ಉದ್ಧರಿಸಿದೆ ಎಂದು 

ಹದನವರಿತು ಪುಣ್ಯಗಳಿಸಿಕೊಂಡ 

ಮಧುವೈರಿ ವಿಜಯವಿಠಲ ಇಲ್ಲಿಪೊಳೆಯಲು 

ವಿಧಿ ಶಿವಾದ್ಯರು ಬಂದು ವಾಲಗ ಮಾಡಿದರು ॥೩॥


 ಅಟ್ಟತಾಳ 


ಅನುಗ್ರಹ ಮಾಡಿದೆ ಅನಿಮಿತ್ತ ಬಂಧುವೆ 

ಎನಗೊಂದು ವರವ ಪಾಲಿಸುವದು ನೀನಿಲ್ಲಿ 

ಅನುಗಾಲಾ ವಾಸವಾಗಿರಬೇಕು ತೊಲಗಾದೆ 

ವನದಿ ಸಂಭವೆ ಬೊಮ್ಮ ಶಂಭುಸುರರು ಮಿಕ್ಕ 

ಮುನಿ ಮನುಗಳು ತೀರ್ಥಾಭಿಮಾನಿಗಳಾ

ಜನರೆಲ್ಲಾ ಸನ್ನಿಧಿಯಾಗಿ ಇರಬೇಕು 

ಮನುಜನಾವನು ಇಲ್ಲಿಗೆ ಬಂದರವನಿಗೆ 

ಘನ ಪಾಪಾ ಓಡಿಸಿ ಪುಣ್ಯವೆ ತಂದಿತ್ತು 

ಜನುಮಾಜನುಮಾದಲ್ಲಿ ಜ್ಞಾನವೆ ಕೊಟ್ಟು ನಿ-

ನಿನ್ನನೆ ಧೇನಿಸುವಂತೆ ಕೃಪೆಮಾಡು ಎನಲಾಗಿ 

ಮುನಿಗೆ ಒಲಿದು ವರವನು ಇತ್ತನು ಇತ್ತಾ 

ಕನಕಮಯವಾದಾಗಿರಿ ಇದೆ ಇದೆ ಇದೆ 

ವನಧಿ ಬಂಧನ ಕುರು ಜಾಂಗುಲಿ ವಿಶಾಲಾ 

ಮಣಿಕರ್ಣಿಕೆ ಕಾಶಿ ಶ್ರೀರಂಗಕ್ಷೇತ್ರ

ಮಣಿಯಾಗಿಪ್ಪಾದೆಂದು ಅತಿಶಯವಾದಾ ಮಾ-

ತನು ಕೊಟ್ಟಾ ಪರಮಾತ್ಮ 

ದಿನ ಒಂದು ಮೂರೈದು ಏಳೆಂಟು ಒಂಭತ್ತು 

ಇನಿತರ ಮೇಲೆ ವೆಗ್ಗಳವಾಗಿ ಇದ್ದರು 

ಅನಿಮಿಷ ಗಂಗಾತೀರದಲ್ಲಿ ಶತವತ್ಸ

ರನುಸರಿಸಿ ಇದ್ದ ಫಲಕೆ ಮಿಗಲಯ್ಯಾ 

ಎಣಿಕೆ ಮಾಡುವರ್ಯಾರು ಈ ಕ್ಷೇತ್ರದ ಯಾತ್ರಿ 

ಜನುಮದೊಳಗೆ ಒಮ್ಮೆ ಸಾರಿದಾನಂತ 

ಜನನಕೆ ಯಾತ್ರಿ ಮಾಡಿದಂಥ ಫಲವಕ್ಕು 

ಕನಸೀಲಿ ಮನಸೀಲಿ ಚಿಂತಿಸೆ 

ಧನವಂತನಾಗುವಾ ಇಹ ಪರದಲ್ಲಿ ಸೌಖ್ಯ 

ಹನುಮಾ ವಂದಿತ ನಮ್ಮ ವಿಜಯವಿಠಲರೇಯಾ 

ಸನತ್ಕುಮಾರ ನಾರದರಿಗೆ ಒಲಿದ ಕಾಣೋ॥೪॥


 ಆದಿತಾಳ 


ಎಸೆವಾ ತೀರ್ಥಂಗಳುಂಟು ಶೇಷ ಮಾರ್ಕಂಡ ಬ್ರಹ್ಮಾ 

ಬಿಸರುಹನಾಭಾ ಲಕುಮಿ ಹನುಮಾ ರುದ್ರ ರುದ್ರಾಣಿ 

ಋಷಿ ಗೌತುಮಾ ವಿಭಾಂಡಾ ಸ್ಕಾಂದ ಅಂತರಗಂಗೆ 

ಬೆಸಸುವೆ ಭೈರವ ಪಾಪವಿನಾಶನ 

ವಸುಧಿಯೊಳಗಿದ್ದ ಎಲ್ಲಾ ತೀರ್ಥಗಳಕ್ಕು 

ಬೆಸಸೆ ಲೋಕದ ಜನರು ಬಂದು ವಿಧಾನ ತಿಳಿದು 

ಕುಶಲ ಮತಿಯಿಂದ ಸತ್ಕರ್ಮಾಚರಿಸಲು 

ವಶವಾಗಿಪ್ಪಾರು ಸರ್ವದೇವತೆಗಳು 

ವಿಷಯಗಳಲಿ ಬಿದ್ದು ಕೆಟ್ಟುಪೋಗದೆರ 

ಕ್ಕಸಯೋಗ ಮಾಡದಿರಿ ಗತಿಗೆ ಮಾರ್ಗವಾಗದು 

ಅಸುರ ವಿರೋಧಿ ನಮ್ಮ ವಿಜಯವಿಠಲರೇಯಾ 

ನಸುನಗುತ ಗಂಡಿಕಿ ಶಿಲೆಯೊಳಗಿರುತಿಪ್ಪ ॥೫॥


 ಜತೆ 


ಪರಮಾಯು ಸಿದ್ಧಿಪದು ಮಾರ್ಕಂಡ್ಯಕ್ಷೇತ್ರಾ 

ನರಸಿಂಹಾನಂತಾ ವಿಜಯವಿಠಲ ವಾಸಾ ॥೬॥

*******