Showing posts with label ಹೋಗಿ ಬರತೇವ ಸಾಗರನ ಮಗಳೆ ಹೋಗಿ ಬರತೇವ ramesha. Show all posts
Showing posts with label ಹೋಗಿ ಬರತೇವ ಸಾಗರನ ಮಗಳೆ ಹೋಗಿ ಬರತೇವ ramesha. Show all posts

Wednesday, 4 August 2021

ಹೋಗಿ ಬರತೇವ ಸಾಗರನ ಮಗಳೆ ಹೋಗಿ ಬರತೇವ ankita ramesha

 ..

ಹೋಗಿ ಬರತೇವ ಸಾಗರನ ಮಗಳೆ ಹೋಗಿ ಬರತೇವ ಪ.

ರುಕ್ಮಿಣಿದೇವಿ ನಿನ್ನ ದುರ್ಗೆರೂಪವ ಕಂಡು ಅಬ್ಬರಿಸುತಾರೆ ಜನರೆಲ್ಲ ಅಬ್ಬರಿಸುತಾರೆ ಜನರೆಲ್ಲ ಮುಯ್ಯಕ್ಕೆನಿರ್ಭಯದಿಂದ ಬರಬೇಕು ಸಖಿಯೆ 1

ಸೀತೆಗೆ ಹಿಂದಕ್ಕೆ ಪ್ರೀತಿಯ ಬಡಿಸಿದ ಕೋತಿಯ ಹಿಂಡು ಕರೆಸವ್ವಕೋತಿಯ ಹಿಂಡು ಕರೆಸಿ ಕುಣಿಸುತ ಖ್ಯಾತಿಲೆ ಮುಯ್ಯ ತಿರುಗಿಸೆ ಸಖಿಯೆ2

ಮಡದಿ ಜಾಂಬವಂತಿ ಸಡಗರದಿ ಬರುವಾಗ ಒಡಗೂಡಿ ಯಾರು ಬರಬೇಕುಒಡಗೂಡಿ ಯಾರು ಬರಬೇಕು ತವರೂರ ಕರಡಿಯ ಹಿಂಡು ಕರೆಸವ್ವ ಸಖಿಯೆ 3

ರಂಭೆ ಸತ್ಯಭಾವೆ ಸಂಭ್ರಮದಿ ಬರುವಾಗ ಒಂಭತ್ತು ವಾದ್ಯ ನಿನಗೆಲ್ಲೆಒಂಭತ್ತು ವಾದ್ಯ ನಿನಗೆಲ್ಲೆ ಮುಯ್ಯಕ್ಕೆಡೊಂಬರ ಡೊಳ್ಳು ಹೊಯಿಸವ್ವ ಸಖಿಯೆ 4

ಲಕುಮಿ ರಮಣನ ಚಿಕ್ಕ ಮಡದಿ ಭಾವೆ ಅಕ್ಕರದಿಂದ ಬರುವಾಗ ಅಕ್ಕರದಿಂದ ಒಡಗೂಡಿ ಬರುವಾಗ ಬೆಕ್ಕಿನ ಹಿಂಡು ಬರಲೆವ್ವ ಸಖಿಯೆ 5

ಆವ್ವ ರುಕ್ಮಿಣಿ ನಿನಗೆ ದಿವ್ಯವಾಹನ ವೆಲ್ಲಿಸಿಂಹ ಶಾರ್ದೂಲ ಕರೆಸವ್ವಸಿಂಹ ಶಾರ್ದೂಲ ಕರೆಸಿ ಏರಿಕೊಂಡುಬಾವಾನ ಹಾಂಗೆ ಬಾರವ್ವ ಸಖಿಯೆ 6

ಕೋಗಿ¯ ಸ್ವರದಂತೆ ರಾಗದಿ ರಾಮೇಶನ ಪಾಡಿ ಕೊಂಡಾಡಿ ಅರಿತಿಲ್ಲಪಾಡಿ ಕೊಂಡಾಡಿ ಅರಿತಿಲ್ಲ ಒಡಗೂಡಿ ಕಾಗೆ ಕೂಗಾಡಿ ಬರಲೆವ್ವ ಸಖಿಯೆ7

***