ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯೊ ಕಾಯೊ ಕಾಯೊ ಕಾಯೊ ಕೃಪಾನಿಧಿ ಕಾಯೊ ಕೃಪಾಳು ಸದ್ಗುರು ದಯ ನೀ ಪಾಲಿಸಿ ಸೋಹ್ಯಸೊನ್ನೆ ಸೂತ್ರಗುಹ್ಯ ಗೂಢದೋರಿ ಸಾಹ್ಯಮಾಡೊ ಸ್ವಾಮಿ ಸಾಕ್ಷಾತ್ಕಾರ ನೀ ದೋರಿಸಿ ನ್ಯಾಯದಲಿ ಮಿಥ್ಯಾಮಾಯ ಮೊನೆಮುರಿಸಿ ತೋಯಜಾಕ್ಷ ನಿಮ್ಮ ಶ್ರಯ ಸುಖ ಬೀರಿ ಭವ ಭಯ ಹರಿಸೊ ಗುರು ಕರುಣಿಸೊ 1
ನಾನಾರು ಎಂದು ಸಾಖೂನ ತಿಳಿಯದೆ ನಾನಾ ಯೋನಿಮುಖ ಜನಿಸಿ ಬಂದೆÀನಯ್ಯ ಜನುಮ ಜ್ಞಾನಗಮ್ಯವಾದ ಸ್ಥಾನದೋರಿ ನಿಜ ಧ್ಯಾನ ಮೌನದನುಭವ ಸುಖ ನೀಡೊ ನಿಮ್ಮ ನ್ಯೂನ ಪೂರ್ಣ ಎನ್ನ ನೀ ನೋಡದೆ ಸ್ವಾಮಿ ಸ್ವಾÀನುಭವದ ಸುಜ್ಞಾನ ದೀಪಲಿಡೊ ನಮ್ಮ ಮನೋನ್ಮನವಾಗಿ ಘನ ಕೈಗೂಡುವಾ ಸನ್ಮತ ನೋಡಿ ಸುವರ್ಮ 2
ನೋಡದೆ ಗುಣದೋಷ ಮಾಡಿ ಉಪದೇಶ ದೃಢಭಾವದ ಸುಪಥ ಒಡನೆ ಗೂಡಿಸೊ ನೋಡಿ ದೃಷ್ಟಿಲೆನ್ನ ಒಡೆಯ ಸದ್ಗುರು ಪೂರ್ಣ ಓಡಿಹೋಗುವಂತೆ ಭಕ್ತಿ ಜ್ಞಾನ ವೈರಾಗ್ಯವಿಡಿಸೊ ನೀಡಿ ಅಭಯಕರುಣಕವಚವ ತೊಡಿಸೊ ಪಿಡಿದು ಎನ್ನ ಕೈಯಾ ಮೂಢ ಮಹಿಪತಿಯ ಬಿಡದೆ ಕಡೆಗಾಣಿಸೊ 3
***