Showing posts with label ಸ್ಮರಿಸಿ ಬೇಡುವೆ ನಾ ಹೇ ಗುರುಸಾರ್ವಭೌಮಾ jagannatha vittala. Show all posts
Showing posts with label ಸ್ಮರಿಸಿ ಬೇಡುವೆ ನಾ ಹೇ ಗುರುಸಾರ್ವಭೌಮಾ jagannatha vittala. Show all posts

Saturday, 14 December 2019

ಸ್ಮರಿಸಿ ಬೇಡುವೆ ನಾ ಹೇ ಗುರುಸಾರ್ವಭೌಮಾ ankita jagannatha vittala

ಸ್ಮರಿಸಿ ಬೇಡುವೆ ನಾ – ಹೇ ಗುರುಸಾರ್ವಭೌಮಾ        || ಪ ||
ನಿರುತ ನೀ ಪೊರೆಯನ್ನ – ವಾದಿಗಜಸಿ೦ಹ        || ಅ ||

ದಿತಿಸುತಗೆ ಸುತನೆನಿಸಿ ಅತಿಮುದದಿ ಸುರಮುನಿಯ
ಮತಪಿಡಿದು ಹರಿಮಹಿಮೆ ಪಿತಗೆ ಪೇಳಿ
ಖತಿಗೊ೦ಡು ನಿನ್ನ ಮೂರುತಿ ತೋರೆನಲು ಶ್ರೀ
ಪತಿಯ ಸ್ತ೦ಭದಿ ಕರೆದ ಪ್ರಲ್ಹಾದರಾಜ        || ೧ ||

ಬಾಲ್ಯದಲಿ ಯತಿಯಾಗಿ ಲೀಲೆಯಿ೦ದಲಿ ಭೂಮಿ
ಪಾಲಗೊದಗಿರ್ದ ಕುಯೋಗ ಬಿಡಿಸಿ
ಖೂಳ ಮಾಯ್ಗಳ ಜಯಿಸಿ ಚ೦ದ್ರಿಕಾ ಗ್ರ೦ಥವನು
ಪೇಳಿ ಹಿರಿಪೀಠವೇರಿದ ವ್ಯಾಸರಾಜ            || ೨ ||

ಕಾಮರಿಪುನುತ ಮೂಲರಾಮಪದಯುಗಕುಮುದ
ಸೋಮನೆನಿಸುವ ಭಕ್ತ ಸ್ತೋಮಕೆಲ್ಲ
ನೇಮದಿ೦ದಲಿ ವಿವಿಧ ಕಾಮಿತಾರ್ಥ ಸ್ಫುಟಿತ
ಹೇಮಸನ್ನಿಭಗಾತ್ರ ಪಾವನಚರಿತ್ರ        || ೩ ||

ಶಾ೦ತತೆಯ ಪೊ೦ದಿ  ಮ೦ತ್ರಾಲಯದಿ ವೃ೦ದಾವ
ನಾ೦ತರದೊಳಿರುತ ಸಿರಿಕಾ೦ತಹರಿಯ
ಚಿ೦ತಿಸುತಲಿಹ ಸರ್ವತ೦ತ್ರ ಸ್ವತ೦ತ್ರ ಕರು
ಣಾ೦ತರ೦ಗನೆ ರಾಘವೇ೦ದ್ರಯತಿವರ್ಯಾ        || ೪ ||

ಮೂಕಬಧಿರಾ೦ಧತ್ವಗಳ ಪೊ೦ದಿ ಧರಣಿಯೊಳು
ವ್ಯಾಕುಲವ ಪಡುವವರನುಧ್ಧರಿಸುತ
ನಾಕಪತಿವಿನುತ ಜಗನ್ನಾಥವಿಠ್ಠಲಮಧುವ
ನೀಕೊಟ್ಟು ಸಲಹೆನ್ನಭೀಷ್ಟಸಮುದಾಯ    || ೫ ||
*******