ನರಸಿಂಹಾ ನರಸಿಂಹಾ ಕರುಣಾಕರ । ಮ ।
ದ್ದುರಿತ ನಿವಾರಣ ನರಸಿಂಹಾ ।। ಪಲ್ಲವಿ ।।
ಹುಡುಗನ ಮಾತಿಗೆ ವಡಿದು ಕಂಭದಲಿ ।
ಸಿಡಿಲಿನಂತೆ ಘುಡಿ ಘುಡಿಸುತ ಬಂದಾ ।। ಚರಣ ।।
ಕಡು ಬಾಧಿಸುತಿಹ್ಯ ಕ್ರೂರ ದೈತ್ಯನಾ ।
ವಡಲ ಶೀಲಿ ಕರಳ ಮಾಲೆಯ ಹಾಕಿದ ।। ಚರಣ ।।
ಸರಿಸಿಜಭವ ಮುಖ ಸುರರಾಕಾಶದಿ ।
ಹರುಷದಿಂದಲಿ ಪೂ ಮಳೆಯ ಗರೆದರು ।। ಚರಣ ।।
ದಯಾ ಸಾಗರ ನಿನ್ನಯ ಪಾದ ಕಮಲ ।
ದ್ವಯ ಕೆರಗುವೇನೊ ದಯಮಾಡೆ ನನ್ನನು ।। ಚರಣ ।।
ಘನ್ನ ತೇಜೋಮಯ ಘನ್ನ ರೂಪ । ಶ್ರೀ ।
ಘನ್ನ ಅಭಿನವಜನಾರ್ದನವಿಠ್ಠಲ ನರಸಿಂಹಾ ।। ಚರಣ ।।
***
ರಾಗ : ಶ್ರೀರಾಗ ತಾಳ : ಆದಿ (raga tala may differ in audio)