ankita ನರಹರಿವಿಠಲ
ರಾಗ: ಮಾಲಗುಂಜಿ ತಾಳ: ದಾದರಾ
ನಾನೊಂದಿಪೆ ಗುರು ರಾಘವೇಂದ್ರನ
ಆನಂದಮತಾಂಬುಧಿಚಂದ್ರನ
ಗುಣಸಾಂದ್ರನ ನಾನೊಂದಿಪೆ ಪ
ಶಿಷ್ಟಜನಪಾಲಭಿಷ್ಟದಾಯಕ ವರ-
ಕೊಟ್ಟು ಕಾಯುವಂಥ ಶ್ರೇಷ್ಠ ಮುನಿ
ದುಷ್ಟರೋಗಾದಿಗಳ ನಷ್ಟಗೊಳಿಸಿ ಸಿರಿ-
ಕೃಷ್ಣನ ಒಲಿಸಿದ ಧಿಟ್ಟರ ಅಘಕಳೆವನ 1
ಮಂಗಳಚರಿತ ವಿಹಂಗವಾಹನದೂತ
ಸಂಗೀತಪ್ರೀತ ಅನಂಗರಹಿತ
ತುಂಗತೀರವಾಸ ರಂಗನ ನಿಜದಾಸ
ಕಂಗೊಳಿಪನು ವೃಂದಾವನದಿ ಸತತ ಆನಂದಭರಿತ 2
ರಜತ ಕನಕ ರಥದೊಳು ಶ್ರೀರಾಮನ
ಭಜಿಸುತ ಮೆರೆವ ಭೂಸುರಸಮೇತ
ಸುಜನಾಜನಭರಿತ ಭಜಿಪ ಭಕ್ತರದಾತ
ನರಹರಿವಿಠಲ ಸಿರಿಸಹಿತ ಇರುವನು ಸತತ 3
***