..
ಪೂರ್ಣ ಲಕ್ಷ್ಮೀರಮಣ ನಿತ್ಯ ವಿಭವ ಪ
ಪೂರ್ಣ ಸದ್ಗುಣವನಧಿ ಆನಂದಮಯ ಬಾರೊ ಅ.ಪ
ನಿನ್ನಲ್ಲಿ ನಾನಿಹೆನು ನನ್ನಲ್ಲಿ ನೀನಿರುವಿ
ಇನ್ನು ಈ ಸ್ಮøತಿ ನಿತ್ಯ ಇತ್ತು ಪೊರೆಯೊ
ಧನ್ಯ ಮಾನ್ಯರ ಸಂಗ ಸತತ ಪಾಲಿಸು ದೇವ
ಭಿನ್ನ ಸ್ಮøತಿ ದುಸ್ಸಂಗ ಎಂದೆಂದು ಕೊಡದಿರು 1
ಶಿರ ಮನಸು ನಿನ್ನಂಘ್ರಿ ನಿನ್ನ ವರ ಪದ ಪದ್ಮ
ನಿರುತ ಪೊಂದಿಹ ಪದವಿ ಪಾಲಿಸೆನಗೆ
ಮರುತ ಮಂದಿರ ಮಹಾ ಕರುಣಾರ್ಣವನೆ ಶೌರಿ
ಗಿರಿಜೇಶಸಖ ಯನ್ನ ಹೃತ್ಕಂಜಮನೆ ಮಾಡು 2
ನಿನ್ನ ಗರ್ಭದಿ ಇರುವ ನಿರ್ಭೀತಿ ಸುಖ ನೀಡು
ಮನ್ನದಲಿ ನೀ ಕೂಡು ಜಯೇಶವಿಠಲ
ಧನ್ಯ ಭಕ್ತರು ಮಾಳ್ಪ ಭಕ್ತಿ ವಿಧಿ ಪೂಜೆಗಳ
ಎನ್ನಲ್ಲಿ ತೋರಯ್ಯ ಹಿರಿಯರ ಪುಣ್ಯವನಿತ್ತು 3
***