ಪುರಂದರದಾಸರು
ರಾಗ ಪೂರ್ವಿ ಝಂಪೆ ತಾಳ
ಏಕಾರತಿಯ ನೋಡುವ ಬನ್ನಿ ||ಪ| ನಮ್ಮ
ಲೋಕನಾಥನ ಸಿರಿ ಪಾದಕ್ಕೆ ಬೆಳಗುವ ||ಅ.ಪ||
ಹರುಷದಿಂದ ಏಕಾರತಿಯ ಬೆಳಗಲು
ನರಕದಿಂದುದ್ಧಾರ ಮಾಡುವನು
ಪರಮ ಭಕುತಿಯಿಂದ ನರರನು
ಹರಿ ತನ್ನ ಉದರದೊಳಿರಿಸುವನು
ತುಪ್ಪದೊಳ್ಬೆರೆಸಿದ ಮೂರು ಬತ್ತಿಯನಿಟ್ಟು
ಒಪ್ಪುವ ದೀಪಕೆ ದೀಪ ಹಚ್ಚಿ
ತಪ್ಪದೆ ಸಕಲ ಪಾಪಗಳ ಸಂಹರಿಸುವ
ಅಪ್ಪ ವಿಟ್ಟಲನ ಪಾದಕ್ಕೆ ಬೆಳಗುವ
ಅನ್ಯ ಚಿಂತೆಯ ಮಾಡದನ್ಯರ ಭಜಿಸದೆ
ಅನ್ಯ ದೇವರ ಸ್ಮರಿಸದಲೆ
ಅನನ್ಯನಾಗಿ ಶ್ರೀ ಪುರಂದರ ವಿಟ್ಟಲನ್ನ
ಘನ್ನ ನಾಮಂಗಳ ಧ್ಯಾನಿಸುತ್ತಲಿನ್ನು
***
ರಾಗ ಪೂರ್ವಿ ಝಂಪೆ ತಾಳ
ಏಕಾರತಿಯ ನೋಡುವ ಬನ್ನಿ ||ಪ| ನಮ್ಮ
ಲೋಕನಾಥನ ಸಿರಿ ಪಾದಕ್ಕೆ ಬೆಳಗುವ ||ಅ.ಪ||
ಹರುಷದಿಂದ ಏಕಾರತಿಯ ಬೆಳಗಲು
ನರಕದಿಂದುದ್ಧಾರ ಮಾಡುವನು
ಪರಮ ಭಕುತಿಯಿಂದ ನರರನು
ಹರಿ ತನ್ನ ಉದರದೊಳಿರಿಸುವನು
ತುಪ್ಪದೊಳ್ಬೆರೆಸಿದ ಮೂರು ಬತ್ತಿಯನಿಟ್ಟು
ಒಪ್ಪುವ ದೀಪಕೆ ದೀಪ ಹಚ್ಚಿ
ತಪ್ಪದೆ ಸಕಲ ಪಾಪಗಳ ಸಂಹರಿಸುವ
ಅಪ್ಪ ವಿಟ್ಟಲನ ಪಾದಕ್ಕೆ ಬೆಳಗುವ
ಅನ್ಯ ಚಿಂತೆಯ ಮಾಡದನ್ಯರ ಭಜಿಸದೆ
ಅನ್ಯ ದೇವರ ಸ್ಮರಿಸದಲೆ
ಅನನ್ಯನಾಗಿ ಶ್ರೀ ಪುರಂದರ ವಿಟ್ಟಲನ್ನ
ಘನ್ನ ನಾಮಂಗಳ ಧ್ಯಾನಿಸುತ್ತಲಿನ್ನು
***
pallavi
EkAratiya nODuva banni
anupallavi
namma lOkanAthana siri pAdakke beLaguva
caraNam 1
haruSadinda EkAratiya beLagalu narakadinduddhAra mADuvanu
parama bhakutiyinda nararanu hari tanna udaradoLirisuvanu
caraNam 2
tuppadoLLaresida mUru battiyaniTTu oppuva dIpage dIpa hacci
tappade sakala pApagaLa samharisuva appa viTTalana pAdakke beLaguva
caraNam 3
anya cinteya mADadanyara bhajisade anya dEvara smarisadale
ananyanAgi shrI purandara viTTalanna ghanna nAmangaLa dhyAnisuttalinnu
***
ಏಕಾರತಿಯನೆತ್ತುವ ಬನ್ನಿ ನಮ್ಮ
ಲೋಕನಾಥನಸಿರಿಪಾದವ ಬೆಳಗುವ ಪ.
ತುಪ್ಪದೊಳ್ಬೆರಸಿದ ಮೂರು ಬತ್ತಿಯನಿಟ್ಟುಒಪ್ಪುವ ದೀಪಕ್ಕೆ ದೀಪಹಚ್ಚಿ ||ತಪ್ಪದೆ ಸಕಲ ಪಾಪಂಗಳ ಹರಿಸುವಅಪ್ಪ ವಿಠಲನ ಪದಾಬ್ಜವ ಬೆಳಗುವ 1
ಹರುಷದಿ ಏಕಾರತಿ ಬೆಳಗಿದ ಫಲನರಕದಿಂದುದ್ಧಾರ ಮಾಡುವುದು ||ಪರಮ ಭಕುತಿಯಿಂದ ಬೆಳಗುವ ನರರನುಹರಿತನ್ನ ಹೃದಯದಿ ಧರಿಸುವನಯ್ಯ2
ಅನ್ಯ ಚಿಂತೆ ಮಾಡದೆ ಅನ್ಯರ ಭಜಿಸದೆ ಮತ್ತನ್ಯ ದೇವರನು ಸ್ಮರಿಸದೆ ಅ ||ನನ್ಯವಾಗಿ ಶ್ರೀ ಪುರಂದರವಿಠಲನಪುಣ್ಯನಾಮಗಳ ಧ್ಯಾನಿಸುತ 3
******