Showing posts with label ಎಂಥ ಸೂಕ್ಷ್ಮವ ನೋಡಿರಿವನ ನಮ್ಮ ಕಾಂತೆ ದ್ರೌಪತಿದೇವಿಗೆ ವರಹೀನ ramesha. Show all posts
Showing posts with label ಎಂಥ ಸೂಕ್ಷ್ಮವ ನೋಡಿರಿವನ ನಮ್ಮ ಕಾಂತೆ ದ್ರೌಪತಿದೇವಿಗೆ ವರಹೀನ ramesha. Show all posts

Wednesday, 4 August 2021

ಎಂಥ ಸೂಕ್ಷ್ಮವ ನೋಡಿರಿವನ ನಮ್ಮ ಕಾಂತೆ ದ್ರೌಪತಿದೇವಿಗೆ ವರಹೀನ ankita ramesha

..

ಎಂಥ ಸೂಕ್ಷ್ಮವ ನೋಡಿರಿವನ ನಮ್ಮ ಕಾಂತೆ ದ್ರೌಪತಿದೇವಿಗೆ ವರಹೀನ ಪ.


ಸಣ್ಣ ಕೂಸಿದ್ದಾಗ ಇವನು ಸೂರ್ಯಗೆ ಹಣ್ಣೆಂದುಹಾರಿದ ಗಗನಕ್ಕೆ ತಾನು ಉಡ್ಡೀನ ಗೈದುನೀರಧಿಯ ದಾಟಿದನುಇವನ ಅಂಗದ ಕೋಮಲ ಬಣ್ಣ ವರ್ಣಿಸಲೇನು 1

ಗಂಧಮಾದನ ಗಿರಿ ತಂದು ನೋಡಿ ಗಿರಿ ನಿಂದಲ್ಲೆ ಹಿಂದಕ್ಕೆ ಒಗೆದ ಈಡ್ಯಾಡಿಒಂದೊಂದು ಬೆಡಗವ ನೋಡಿನಮ್ಮ ಇಂದಿರೇಶನು ನಕ್ಕ ಕೌತುಕ ಮಾಡಿ 2

ಹುಟ್ಟಿದಾಗ ಭೀಮ ಒಂದಿಷ್ಟು ಎತ್ತಿಪಟ್ಟನೆ ಬಿದ್ದು ಕೌತುಕ ಮಾಡಿದನೆಷ್ಟುಬೆಟ್ಟಗಳ ಒಡೆದು ಹಿಟ್ಟೆಟ್ಟುಇವನ ಅಂಗದ ಕೋಮಲ ವರ್ಣಿಸಲೆಷ್ಟು3

ಖಂಡಗನ್ನವು ಗ್ರಾಸವಂತೆ ಅದು ಉಂಡು ಸಾಲದೆ ಭಿಕ್ಷೆ ಬೇಡಿದನಂತೆ ಕಂಡು ತಾನರಿಯಳು ಕಾಂತೆ ಇಂಥ ದಿಂಡ ಪುರುಷನ ಬೆರೆದಳು ಕಾಂತೆ4

ಘನ್ನಗರಳ ಕುಡಿದನಂತೆ ಅದು ತನ್ನ ದೇಹವ ತಪಿಸುತಲಿದ್ದವರಂತೆಸನ್ಯಾಸ ಇವಗ್ಯಾಕೆ ಕಾಂತೆನಮ್ಮ ಚೆನ್ನ ರಾಮೇಶ ನೋಡಿನಕ್ಕನಂತೆ 5

****