Showing posts with label ಇಂದಿರೆ ಮುಕುಂದ ಹೃನ್ಮಂದಿರೆ ಇಂದಿರೆ ಲೋಕವಿಖ್ಯಾತೆ gopalakrishna vittala. Show all posts
Showing posts with label ಇಂದಿರೆ ಮುಕುಂದ ಹೃನ್ಮಂದಿರೆ ಇಂದಿರೆ ಲೋಕವಿಖ್ಯಾತೆ gopalakrishna vittala. Show all posts

Sunday, 1 August 2021

ಇಂದಿರೆ ಮುಕುಂದ ಹೃನ್ಮಂದಿರೆ ಇಂದಿರೆ ಲೋಕವಿಖ್ಯಾತೆ ankita gopalakrishna vittala

ಇಂದಿರೆ ಮುಕುಂದ ಹೃನ್ಮಂದಿರೆ ಪ.


ಇಂದಿರೆ ಲೋಕವಿಖ್ಯಾತೆ | ಶ್ರೀ-

ನಂದನ ಕಂದನೊಳು ಪ್ರೀತೆ | ಆಹ

ಬಂದೆನೆ ಭವದೊಳು ನಿಂದೆನೆ ನಿನ ಪದ

ದ್ವಂದ ಸನ್ನಿಧಿಯಲಿ ಇಂದಿರೇಶನ ತೋರೆ ಅ.ಪ.


ತ್ರಿಗುಣಾಭಿಮಾನಿಯೆ ದೇವಿ | ನಿನ್ನ

ಜಗದೊಳು ನುತಿಪರ ಕಾಯ್ವಿ | ನಿತ್ಯ

ನಗಧರನನು ಸೇವಿಸುವಿ | ಲಯ

ಜಗ ಸೃಷ್ಟಿ ಸ್ಥಿತಿಯಲ್ಲಿ ದೇವಿ | ಆಹ

ಬಗೆ ಬಗೆ ರೂಪದಿ ಸುಗುಣವಂತೆಯಾಗಿ

ನಿಗಮಾದಿಗಳಿಂದ ನಗಧರನನು ಸ್ತುತಿಪೆ 1

ಸಕಲಾಭರಣ ರೂಪದಿಂದ | ಹರಿಯ

ಅಕಳಂಕ ಭಕ್ತಿಗಳಿಂದ | ಪಂಚ

ಪ್ರಕೃತ್ಯಾದಿ ರೂಪಗಳಿಂದ | ನಾನಾ

ಸಕಲ ಸಾಮಗ್ರಿಗಳಿಂದ | ಆಹಾ

ಮುಕುತಿ ನಾಲ್ಕರಲ್ಲಿ ಭಕುತಿಯಿಂ ಸೇವಿಸುತ

ಮುಕುತರಿಂದೋಲಗ ಅಕಳಂಕದಿಂ ಕೊಂಬೆ 2

ಪಾದದಿ ಪಿಲ್ಯೆ ಪಾಡಗವೊ | ಮೋದ

ವಾದ ನೆರೆಗೆ ವೈಭವವೂ | ಗಾಂಭೀ-

ರ್ಯದ ವಡ್ಯಾಣ ನಡುವು | ಮೇಲೆ ಭಾ-

ರದ ಕುಚದ್ವಯ ಬಾಹು | ಆಹ

ಶ್ರೀದನ ಪೆಗಲೊಳು ಮೋದದಿಂದೆಸೆವ ಕೈ

ಆದರದಲಿ ನಿನ್ನ ಪಾದಸೇವೆಯ ನೀಡೆ 3

ಕರದಲ್ಲಿ ಕಡಗ ಕಂಕಣ | ಬೆರಳ

ವರ ವಜ್ರದುಂಗುರಾ ಭರಣ | ನಾಗ-

ಮುರಿಗೆ ಸರಿಗೆ ಕಂಠಾಭರಣ | ಬಲ

ಕರದಲ್ಲಿ ಪದ್ಮ ಭಕ್ತರನ | ಆಹ

ವರದೃಷ್ಟಿಯಿಂದಲಿ ನಿರುತ ಈಕ್ಷಿಸುತ

ಪರಿಪರಿ ಬಗೆಯಿಂದ ಪೊರೆವೊ ಸುಂದರಕಾಯೆ4

ಗೋಪಾಲಕೃಷ್ಣವಿಠ್ಠಲನÀ | ನಿಜ

ವ್ಯಾಪಾರ ಕೊಡೆ ಎನಗೆ ಮನನ | ಪೂರ್ಣ

ರೂಪಳೆ ಮುಖದ ಚಲುವಿನ | ನಿನ್ನ

ರೂಪವ ತೋರಿಸೆ ಮುನ್ನ | ಆಹ

ಈ ಪಾಮರ ಮನದ ತಾಪ ಹರಿಸಿ ಲಕುಮಿ

ಶ್ರೀಪತಿ ಪದದಲ್ಲಿ ಕಾಪಾಡು ನಿತ್ಯದಿ 5

****

ಗೋಪಾಲ ಕೃಷ್ಣ ವಿಠ್ಠಲ ಅಂಕಿತದ ಅಂಬಾಬಾಯಿ ಅವರ ರಚನೆ 

ಇಂದಿರೆ ಮುಕುಂದ ಹೃನ್ಮಂದಿರೆ 

ಪ.

ಇಂದಿರೆ ಲೋಕವಿಖ್ಯಾತೆ | ಶ್ರೀ-

ನಂದನ ಕಂದನೊಳು ಪ್ರೀತೆ | ಆಹ

ಬಂದೆನೆ ಭವದೊಳು ನಿಂದೆನೆ ನಿನ ಪದ

ದ್ವಂದ ಸನ್ನಿಧಿಯಲಿ ಇಂದಿರೇಶನ ತೋರೆ 

ಅ.ಪ.

ತ್ರಿಗುಣಾಭಿಮಾನಿಯೆ ದೇವಿ | ನಿನ್ನ

ಜಗದೊಳು ನುತಿಪರ ಕಾಯ್ವಿ | ನಿತ್ಯ

ನಗಧರನನು ಸೇವಿಸುವಿ | ಲಯ

ಜಗ ಸೃಷ್ಟಿ ಸ್ಥಿತಿಯಲ್ಲಿ ದೇವಿ | ಆಹ

ಬಗೆ ಬಗೆ ರೂಪದಿ ಸುಗುಣವಂತೆಯಾಗಿ

ನಿಗಮಾದಿಗಳಿಂದ ನಗಧರನನು ಸ್ತುತಿಪೆ 

1

ಸಕಲಾಭರಣ ರೂಪದಿಂದ | ಹರಿಯ

ಅಕಳಂಕ ಭಕ್ತಿಗಳಿಂದ | ಪಂಚ

ಪ್ರಕೃತ್ಯಾದಿ ರೂಪಗಳಿಂದ | ನಾನಾ

ಸಕಲ ಸಾಮಗ್ರಿಗಳಿಂದ | ಆಹಾ

ಮುಕುತಿ ನಾಲ್ಕರಲ್ಲಿ ಭಕುತಿಯಿಂ ಸೇವಿಸುತ

ಮುಕುತರಿಂದೋಲಗ ಅಕಳಂಕದಿಂ ಕೊಂಬೆ 

2

ಪಾದದಿ ಪಿಲ್ಯೆ ಪಾಡಗವೊ | ಮೋದ

ವಾದ ನೆರೆಗೆ ವೈಭವವೂ | ಗಾಂಭೀ-

ರ್ಯದ ವಡ್ಯಾಣ ನಡುವು | ಮೇಲೆ ಭಾ-

ರದ ಕುಚದ್ವಯ ಬಾಹು | ಆಹ

ಶ್ರೀದನ ಪೆಗಲೊಳು ಮೋದದಿಂದೆಸೆವ ಕೈ

ಆದರದಲಿ ನಿನ್ನ ಪಾದಸೇವೆಯ ನೀಡೆ 

3

ಕರದಲ್ಲಿ ಕಡಗ ಕಂಕಣ | ಬೆರಳ

ವರ ವಜ್ರದುಂಗುರಾ ಭರಣ | ನಾಗ-

ಮುರಿಗೆ ಸರಿಗೆ ಕಂಠಾಭರಣ | ಬಲ

ಕರದಲ್ಲಿ ಪದ್ಮ ಭಕ್ತರನ | ಆಹ

ವರದೃಷ್ಟಿಯಿಂದಲಿ ನಿರುತ ಈಕ್ಷಿಸುತ

ಪರಿಪರಿ ಬಗೆಯಿಂದ ಪೊರೆವೊ ಸುಂದರಕಾಯೆ

4

ಗೋಪಾಲಕೃಷ್ಣವಿಠ್ಠಲನÀ | ನಿಜ

ವ್ಯಾಪಾರ ಕೊಡೆ ಎನಗೆ ಮನನ | ಪೂರ್ಣ

ರೂಪಳೆ ಮುಖದ ಚಲುವಿನ | ನಿನ್ನ

ರೂಪವ ತೋರಿಸೆ ಮುನ್ನ | ಆಹ

ಈ ಪಾಮರ ಮನದ ತಾಪ ಹರಿಸಿ ಲಕುಮಿ

ಶ್ರೀಪತಿ ಪದದಲ್ಲಿ ಕಾಪಾಡು ನಿತ್ಯದಿ 

5

***