ಕಾಖಂಡಕಿ ಶ್ರೀ ಮಹಿಪತಿರಾಯರು
ನೆಲೆಯು ನೋಡಿ ಪ
ಕರ್ಮಕ ಮಂದದಿ ಸಿಲುಕಲಿ ಬ್ಯಾಡಿ ವರ್ಮನರುವ್ಹ ಗುರುಯೋಗ ಧರ್ಮವ ಮಾಡಿ ನಿರ್ಮನದಲಿ ನಿಜಘನ ಬೆರೆದಾಡಿ ನಿರ್ಮಳ ನಿಶ್ಚಳ ನಿರ್ಗುಣ ಆತ್ಮನ ಕೂಡಿ 1
ಅನುದಿನ ಅನುಭವಾಮೃತವನು ಸೂರ್ಯಾಡಿ ತನುಮನಧನ ಶ್ರೀಗುರುವಿನರ್ಪಣೆ ಮಾಡಿ ಅನುಭವದಲಿ ಆತ್ಮದ ನೆಲೆನಿಭ ನೋಡಿ ಘನಬ್ರಹ್ಮಾನಂದದ ಸುಖದಲಿ ಲೋಲ್ಯಾಡಿ2
ಮಹಾಮಹಿಮನ ಸುಸೇವೆಯ ಮಾಡಿ ಮಹಿಪತಿ ಒಡಿಯನ ಶ್ರೀಪಾದವ ನೋಡಿ ಇಹಪರ ಸಾಯೋಜ್ಯ ಸದ್ಗತಿ ಮುಕ್ತಿಯ ಕೂಡಿ 3
****