Showing posts with label ಮಧ್ವರಾಯರಿಗೆ ನಮೋ ನಮೋ ಮಾಯವಾದಿಗಳ ಮತವ ಸೋಲಿಸಿ vijayaramachandra vittala. Show all posts
Showing posts with label ಮಧ್ವರಾಯರಿಗೆ ನಮೋ ನಮೋ ಮಾಯವಾದಿಗಳ ಮತವ ಸೋಲಿಸಿ vijayaramachandra vittala. Show all posts

Friday 6 August 2021

ಮಧ್ವರಾಯರಿಗೆ ನಮೋ ನಮೋ ಮಾಯವಾದಿಗಳ ಮತವ ಸೋಲಿಸಿ ankita vijayaramachandra vittala

 ..

Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane 


ಮಧ್ವರಾಯರಿಗೆ ನಮೋ ನಮೋ ಪ


ಮಾಯವಾದಿಗಳ ಮತವ ಸೋಲಿಸಿ

ಸುಯತಿಗಳಿಗೆ ಸದ್ಗತಿ ಮಾರ್ಗವ ತೋರಿದ ಅ.ಪ


ದೈತ್ಯ ರಾವಣಗೆ ಹಲವು ಭೀತಿ ತೋರಿಸಿ

ಮಾತೆ ಜಾನಕಿಯಿಂದ ಖ್ಯಾತಿ ಪಡೆದ ಗುರು 1


ಮಂದ ಜರಾಸಂಧನಂಗವ ಸೀಳಿ

ತಂದ ಕಪ್ಪವನ್ನು ಬಂದು ಧರ್ಮಗಿತ್ತ 2


ಕುಜನಾದಿಗಳ ನಿಜವಚನದಿ ಸೋಲಿಸಿ

ವಿಜಯ ರಾಮಚಂದ್ರವಿಠಲ ಸರ್ವೋತ್ತಮನೆನಸಿದ 3

***