Showing posts with label ಪ್ರಾಣನಾಥನೇ ನಿನ್ನ ತುತಿಯ ಮಾಡಲು vasudeva vittala. Show all posts
Showing posts with label ಪ್ರಾಣನಾಥನೇ ನಿನ್ನ ತುತಿಯ ಮಾಡಲು vasudeva vittala. Show all posts

Saturday, 1 May 2021

ಪ್ರಾಣನಾಥನೇ ನಿನ್ನ ತುತಿಯ ಮಾಡಲು ankita vasudeva vittala

 vyasatatwajna teertha's ankita vasudeva vittala

ಶ್ರೀ ವಾಯುದೇವರ ಮುಖಾಂತರ ಮೋಕ್ಷಪ್ರದನಾದ ಶ್ರೀ ವಾಸುದೇವನ ಒಲಿಮೆಯಿಂದಲೇ " ವಾಸುದೇವವಿಠಲ " ಎಂಬ ಅಂಕಿತವು ಪ್ರಾಪ್ತವಾಯಿತು.

ರಾಗ : ಕಾಂಬೋಧಿ ತಾಳ : ಝ೦ಪೆ


ಪ್ರಾಣನಾಥನೇ ನಿನ್ನ 

ತುತಿಯ ಮಾಡಲು । ಇನ್ನು ।

ತ್ರಾಣ ಎನಗುಂಟೆ 

ಗುರುವೇ ।। ಪಲ್ಲವಿ ।।


ದಾನಿ ಸಿರಿಪತಿಯ ಭಕುತರ 

ಶಿಖಾಮಣಿಯೇ ಗುಣಶ್ರೇಣಿ ।

ಎಣೆಗಾಣೆ ಶ್ರುತಿಧೀ 

ಸ್ಮೃತಿಧೀ ।। ಆ. ಪ ।।


ನಿಖಿಲ ಜೀವರಿಗೆ 

ಅಭಿಮಾನಿ ಪುರುಷ ನೀ ।

ಸಕಲ ಮಹದಾಭಿಮಾನೀ ।

ಸುಖ ರೂಪ ಪುರುಷನಿಗೆ 

ವಾಯು ಅಗ್ನಿ ಆದಿತ್ಯ ।

ತ್ವಕು ರೂಪ ಪುತ್ರನಾದಿ 

ಮೋದಿ ।। ಚರಣ ।।


ಕಮಠ ರೂಪದಿ 

ಲೋಕಗಳಿಗೆ ಆಧಾರನು ।

ಸಮನು ಆಖಣಾಸ್ಮನೇ ।

ಸಮಯ ಬಿಡಧಾಗೆ 

ಹೃದಯದಲಿ ಎಚ್ಛೆತ್ತಿರುವೆ ।

ಸುಮನಸರರಸನು ಪೂರವೇ 

ಬೆರೆವೇ ।। ಚರಣ ।।


ವಾಸುದೇವವಿಠಲನ್ನ ಸಂತತವು ।

ಶ್ವಾಸ ಮಂತ್ರದಿ ಸೇವನ ।

ಲೇಸಾಗಿ ಮಾಡುವ 

ಜೀವರೊಳು ನಿನೇವೇ ।

ದಾಸನ್ನ ಪೊರೆಯೋ 

ಧೀರಾ ವೀರಾ ।। ಚರಣ ।।

***

ಎಂದು ಶ್ರೀ ಮುಖ್ಯಪ್ರಾಣದೇವರ ಸ್ತೋತ್ರ ಮಾಡಿದ್ದು ಅಲ್ಲದೆ " ವಾಸುದೇವವಿಠಲ " ಎಂಬ ಅಂಕಿತದಲ್ಲಿ " 84 ಪದ - 05 ಪದ್ಯ - 15 ಸುಳಾದಿ " ಗಳನ್ನು ರಚಿಸಿ ಶ್ರೀ ಹರಿದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ!!

****