Showing posts with label ಸ್ನಾನವ ಮಾಡಿರೊ ಜ್ಞಾನ ತೀರ್ಥದಲ್ಲಿ ಮಾನವರೆಲ್ಲ neleyadikeshava SNAANAVA MAADIRO JNAANA TEERTHADALLI MAANAVARELLA. Show all posts
Showing posts with label ಸ್ನಾನವ ಮಾಡಿರೊ ಜ್ಞಾನ ತೀರ್ಥದಲ್ಲಿ ಮಾನವರೆಲ್ಲ neleyadikeshava SNAANAVA MAADIRO JNAANA TEERTHADALLI MAANAVARELLA. Show all posts

Thursday, 2 December 2021

ಸ್ನಾನವ ಮಾಡಿರೊ ಜ್ಞಾನ ತೀರ್ಥದಲ್ಲಿ ಮಾನವರೆಲ್ಲ ankita neleyadikeshava SNAANAVA MAADIRO JNAANA TEERTHADALLI MAANAVARELLA

check same pallavi song in purandara vittla ankita

ಸ್ನಾನವ ಮಾಡಿರೊ ಜ್ಞಾನ ತೀರ್ಥದಲ್ಲಿಮಾನವರೆಲ್ಲ ಮೌನದೊಳಗೆ ನಿಂದು ಪ

ತನ್ನ ತಾನರಿತುಕೊಂಬುದೆ ಒಂದು ಸ್ನಾನಅನ್ಯಾಯ ಮಾಡದಿರುವುದೊಂದು ಸ್ನಾನಅನ್ನದಾನವ ಮಾಡುವುದೊಂದು ಸ್ನಾನ - ಹರಿನಿನ್ನ ಧ್ಯಾನವೆ ನಿತ್ಯ ಗಂಗಾ ಸ್ನಾನ 1

ಪರಸತಿಯ ಭ್ರಮಿಸದಿದ್ದರೆ ಒಂದು ಸ್ನಾನಪರನಿಂದೆಯ ಮಾಡದಿದ್ದರೊಂದು ಸ್ನಾನಪರೋಪಕಾರ ಮಾಡುವುದೊಂದು ಸ್ನಾನಪರತತ್ತ್ವವನರಿತುಕೊಂಬುದೆ ಒಂದು ಸ್ನಾನ2

ಸಾಧು ಸಜ್ಜನರ ಸಂಗವೆ ಒಂದು ಸ್ನಾನಭೇದಾಭೇದವಳಿದಡೆ ಒಂದು ಸ್ನಾನಆದಿಮೂರುತಿ ಕಾಗಿನೆಲೆಯಾದಿಕೇಶವನಪಾದ ಧ್ಯಾನವೆ ನಿತ್ಯ ಗಂಗಾ ಸ್ನಾನ 3

***