Showing posts with label ಖ್ಯಾತಿಯಿಂದ ಪುರುಹೂತ ಸಹಿತ ಸುರ purandara vittala. Show all posts
Showing posts with label ಖ್ಯಾತಿಯಿಂದ ಪುರುಹೂತ ಸಹಿತ ಸುರ purandara vittala. Show all posts

Wednesday 4 December 2019

ಖ್ಯಾತಿಯಿಂದ ಪುರುಹೂತ ಸಹಿತ ಸುರ purandara vittala

ಪುರಂದರದಾಸರು
check this
ಖ್ಯಾತಿಯಿಂದ ಪುರುಹೂತ ಸಹಿತ ಸುರ |ವ್ರಾತವು ನಿನ್ನನು ಒತ್ತಿ ಓಲೈಸಲು ||ಭೂತಳದೊಳು ಸಂಪ್ರೀತಿಗೆ ಸಿಲುಕಿ ನೀ |ಪಾರ್ಥನ ರಥಕೆ ಸೂತನಾದ ಮೇಲೆ 2

ಪರಮಪುರುಷ ಪರಬೊಮ್ಮ ನೀನೆನುತಲಿ |ನಿರುತದಿ ಶ್ರೂತಿಯು ಕೊಂಡಾಡುತಿರೆ ||ವರಪಾಂಡವರರ ಮನೆಯೊಳುಊಳಿಗ|ಕರೆಕರೆದಲ್ಲಿಗೆ ಪೋದಪೋದ ಮೇಲೆ 3

ಧುರದಲಿ ಪಣೆಯನೊಡೆದ ಭೀಷ್ಮನ ಸಂ- |ಹರಿಪೆನೆನುತ ಚಕ್ರವ ಪಿಡಿಯೆ ||ಹರಿನಿನ್ನ ಕರುಣದ ಜೋಡು ತೊಟ್ಟಿರಲವ- |ನಿರವ ಕಾಣುತ ಸುಮ್ಮನೆ ತಿರುಗಿದ ಮೇಲೆ 4

ತರಳನು ಕರೆಯಲು ಭರದಿ ಕಂಬದಿ ಬಂದು |ನರಮೃಗರೂಪ ಭಕ್ತರ ತೆತ್ತಿಗನೆ ||ವರದ ಪುರಂದರವಿಠಲರಾಯ ನಿನ |ಸ್ಮರಿಪರ ಮನದಲಿ ಸೆರೆಯು ಸಿಕ್ಕಿದ ಮೇಲೆ 5
******