Showing posts with label ಸುವ್ವಿ ಕೈಟಭಹಾರಿ ಸುವ್ವಿ ಚಾಣೂರದಾರಿ prasannavenkata SUVVI KAITABHAHAARI SUVVI CHAANOORADAARI. Show all posts
Showing posts with label ಸುವ್ವಿ ಕೈಟಭಹಾರಿ ಸುವ್ವಿ ಚಾಣೂರದಾರಿ prasannavenkata SUVVI KAITABHAHAARI SUVVI CHAANOORADAARI. Show all posts

Wednesday, 8 December 2021

ಸುವ್ವಿ ಕೈಟಭಹಾರಿ ಸುವ್ವಿ ಚಾಣೂರದಾರಿ ankita prasannavenkata SUVVI KAITABHAHAARI SUVVI CHAANOORADAARI



by ಪ್ರಸನ್ನವೆಂಕಟದಾಸರು
ಸುವ್ವಿ ಕೈಟಭಹಾರಿ ಸುವ್ವಿ ಚಾಣೂರದಾರಿ
ಸುವ್ವಿಮಲ್ಲಮುಷ್ಟಿಕರವೈರಿಶ್ರೀ ಕೃಷ್ಣನ್ನಸುವ್ವೆಂದು ಪಾಡಿ ರಕ್ಷಿಪ ಸುವ್ವಿ ಪ.

ವಿಶ್ವಬೀಜವ ಪೊತ್ತ ಗಿರಿ ಪೊತ್ತಧರೆಪೊತ್ತಶಿಶು ಕೃಷ್ಣಾಜಿನ ಪರಶು ಧನು ಪೊತ್ತಶಿಶು ಕೃಷ್ಣಾಜಿನ ಪರಶುಧನು ಪೊತ್ತಗವ ಪೊತ್ತ ದಿಗ್ವಸನ ಇಟ್ಟಿಯ ಪೊತ್ತ 1

ಶ್ರುತಿಗೆದ್ದವನ ಗೆದ್ದಾಮೃತ ಗೆದ್ದಸತಿಗೆದ್ದದಿತಿಜಬಲಿಕ್ಷತ್ರಿಯರಾಕ್ಷಸರ ಗೆದ್ದದಿತಿಜಬಲಿಕ್ಷತ್ರಿಯ ರಾಕ್ಷಸರ ಗೆದ್ದ ಅಲರ ಗೆದ್ದಪತಿವ್ರತೆ ಅಧರ್ಮಿಗಳ ಗೆದ್ದ 2

ಎವೆ ಇಲ್ಲ ಮೃದು ಇಲ್ಲ ಜವದೊಳೆಡಬಲವಿಲ್ಲಕುವರೇಂದ್ರ ವಿಪ್ರಮಾರ್ಗೆಡರಿಲ್ಲಕುವರೇಂದ್ರ ವಿಪ್ರಮಾರ್ಗೆಡರಿಲ್ಲ ಕೃಷ್ಣ ಪ್ರಸನ್ವೆಂಕಟಯೋಗಿಕೃಪೆಗೆ ಕಡೆಯಿಲ್ಲ3
***