ಹರೇ ವೆಂಕಟ ಶೈಲವಲ್ಲಭ ಸ್ಮರಿಸುವೆ ನಾನಿನ್ನ l
ಕರುಣಾಪೂರ್ಣವರಪ್ರದ ಚರಿತಾ ಪರಿಪಾಲಿಸು ಎನ್ನಾ ll ಪ ll
ಪತಿತಪಾವನಾನತಜನ ಅತಿಹಿತ ದಿತಿಜಮಥನ ರಂಗಾ l
ವಿತತಾಚ್ಯುತ ಆಶ್ರಿತ ಸುರತರುವೆ ಸತತ ಕರುಣಪಾಂಗಾ ll 1 ll
ದೋಷದೂರ ಪರಾಶರಾರ್ಚಿತ ಕ್ಲೇಶನಾಶದೇವಾ l
ವಾಸುದೇವ ಸರ್ವೇಶ ಸಾಧುಜನಪೋಷ ಸುಪ್ರಭಾವಾ ll 2 ll
ಅಜಭವನುತ ಪದ ದ್ವಿಜರಾಜಗಮನ ಭಜಿಪರ ಭಯಹಾರಿ l
ತ್ರಿಜಗ ರಕ್ಷಕಾ ಶ್ರೀಪತಿವಿಟ್ಠಲ ನಿಜಜನರುಪಕಾರೀ ll 3 ll
***