Tuesday, 13 April 2021

ಹರೇ ವೆಂಕಟ ಶೈಲವಲ್ಲಭ ಸ್ಮರಿಸುವೆ ankita sripati vittala

 ಹರೇ ವೆಂಕಟ ಶೈಲವಲ್ಲಭ ಸ್ಮರಿಸುವೆ ನಾನಿನ್ನ l

ಕರುಣಾಪೂರ್ಣವರಪ್ರದ ಚರಿತಾ ಪರಿಪಾಲಿಸು ಎನ್ನಾ ll ಪ ll


ಪತಿತಪಾವನಾನತಜನ ಅತಿಹಿತ ದಿತಿಜಮಥನ ರಂಗಾ l

ವಿತತಾಚ್ಯುತ ಆಶ್ರಿತ ಸುರತರುವೆ ಸತತ ಕರುಣಪಾಂಗಾ ll 1 ll


ದೋಷದೂರ ಪರಾಶರಾರ್ಚಿತ ಕ್ಲೇಶನಾಶದೇವಾ l

ವಾಸುದೇವ ಸರ್ವೇಶ ಸಾಧುಜನಪೋಷ ಸುಪ್ರಭಾವಾ ll 2 ll


ಅಜಭವನುತ ಪದ ದ್ವಿಜರಾಜಗಮನ ಭಜಿಪರ ಭಯಹಾರಿ l

ತ್ರಿಜಗ ರಕ್ಷಕಾ ಶ್ರೀಪತಿವಿಟ್ಠಲ ನಿಜಜನರುಪಕಾರೀ ll 3 ll

***


No comments:

Post a Comment