Tuesday, 13 April 2021

ನಿನ್ನ ಕರುಣಕೆಯೆಣೆ ಕಾಣೆನಾ ವಿಟ್ಠಲರಾಯ ankita govinda vittala

ನಿನ್ನ ಕರುಣಕೆಯೆಣೆ ಕಾಣೆನಾ l ವಿಟ್ಠಲರಾಯ 

ಮನ್ನುಜನ್ನ ರೂಪ ಧರಿಪನಾ 

ಅನ್ನ ವಸನವಿತ್ತು ಪಿತಗೆ l ಚನ್ನ ಸೇವೆ ಮಾಳ್ಪದೇವೆ

ಘನ್ನ ಸಾಧ್ಯ ಸಾಧನವೆಂದು l ಮನ್ನಣೆಯ ತೋರ್ದೆ ಜಗಕೆ ll ಅ ಪ ll

ಪಂಥ ಜನರ ಸಂದಣೀಯಲಿ l ಮೆರೆಯುತ್ತಿದ್ದ

ಪಂಢರಪುರದ ಸುಪ್ರದೇಶದಿ 

ಪುಂಡರೀಕ ನಯನ ಭಕ್ತ l. ಬಂಡುಣೀಯ ಮನವ ನೋಡೆ 

ಅಂಡಾ ನಂತಕೀಶ ಮನುಜ l ದಿಂಡು ಧರಿಸಿ ಬಂದು ನಿಂತ ll 1 ll

ಇಂದು ಭಾಗ ಸರಿತು ತೀರದಿ l ಪುಂಡಲೀಕ

ತಂದೆ ಪಾದಸೇವೆ ಭರದಲಿ l

ಬಂದ ಮನುಜ ವೇಷ ಹರಿಗೆ l ನಿಂದಿರೆಂದು ಪ್ರಾರ್ಥಿಸುತ್ತ

ಅಂದ ಅನ್ಯ ಪೀಠವಿರದೆ l ಒಂದು ಇಟ್ಟಗಿ ಪೀಠವಿತ್ತ ll 2 ll

ಇಷ್ಟ ದೈವ ಇಟ್ಟಗಿ ಪೀಠದೀ l ನಿಂತು ಆಗ

ಶಿಷ್ಟರಿಂದ ವಿಠೋಬ ನಾಮದೀ l

ವಿಟ್ಠಲ ವಿಟ್ಠಲ ವಿಠೋಬ ಎಂದು l ನಿಷ್ಟರಿಂದ ಸ್ತುತಿಸಿ ನಿಂದು

ಶ್ರೇಷ್ಠ ಜನರ ಭವದ ಸಿಂಧು l. ಸುಷ್ಠಉ ಒತ್ತಿಪ ದಯಾಸಿಂಧು ll 3 ll

ಶಾಸ್ತ್ರ ಬಹಳ ಶೃತನು ಎನುತಲೂ l

ಶುದ್ಧಮೇಧ ಶಕ್ತಿ ಬಹಳ ಯುತನು ಎನುತಲೂ l

ಯುಕ್ತಿಗಾಗ್ಯ ವಲಿವನಲ್ಲ l ಮುಕ್ತಿದಾತ ಲಕ್ಷ್ಮೀನಲ್ಲ

ಭಕ್ತಿ ಮುಡುಪು ಯಿತ್ತು ತುತಿಪ l ಭಕ್ತ ಜನರ ಬಿಡದೆ ಪಾಲಿಪೆ ll 4 ll

ಭಾವ ದ್ರವ್ಯ ಕ್ರಿಯವು ಎಂಬುದಾ l  ಮಹತು ಎನಿಪ 

ಈ ವಿಧ ದ್ವೈತತ್ರಯಗಳಾ l

ಭಾವದಲ್ಲಿ ಚರಿಸುವಂಥ l. ಭಾವವಿತ್ತು ಸಲಹೊ ಗುರು

ಗೋವಿಂದವಿಟ್ಠಲ ಭಕ್ತಿಪಂಥ l  ದೇವನೆಂದು ಮೆರೆವ ವಿಟ್ಠಲ ll 5 ll

***

No comments:

Post a Comment