Showing posts with label ಕಂತು ಜನಕ ಶ್ರೀಕಾಂತನ ಸ್ತುತಿಸಲ ನಂತನಿಗಸದಳವೈ shyamasundara. Show all posts
Showing posts with label ಕಂತು ಜನಕ ಶ್ರೀಕಾಂತನ ಸ್ತುತಿಸಲ ನಂತನಿಗಸದಳವೈ shyamasundara. Show all posts

Wednesday, 1 September 2021

ಕಂತು ಜನಕ ಶ್ರೀಕಾಂತನ ಸ್ತುತಿಸಲ ನಂತನಿಗಸದಳವೈ ankita shyamasundara

 ..

ಕಂತು ಜನಕ ಶ್ರೀಕಾಂತನ ಸ್ತುತಿಸಲ

ನಂತನಿಗಸದಳವೈ ಪ


ದಂತಿಚರ್ಮಧರಾಧ್ಯರು ಈತನ

ಅಂತುಗಾಣದಲೆ ಚಿಂತಿಪರೈ ಅ.ಪ


ಮಾವನ ಮಥಿನಿದ ಮಾವನಿಗೊಲಿದ

ಮಹರಾಯನವನು |

ಮಾವನ ಮಗನ ಮೋಹದ ಮಗಳಿಗೆ

ಮಾವನೆನಿಸಿದವನು

ಮಾವನ ತಮ್ಮಗೆ ತನ್ನಯ ಭಕುತನ

ಮಹಿಮೆ ತೋರಿಸಿದನು ||

ಮಾವನ ತನಯರ ಪರಿ ಪರಿ ಪೊರೆದನು ಉ

ಮಾವಲ್ಲಭನುತ ನಗಧರನಿವನು 1


ಸತಿಯ ಪಿತನ ಪೆತ್ತನ ಮಾತೆಗೆ

ಪತಿಯಾದವ ನಿವನು |

ಸತಿಯಳ ಪಿಡಿದೊಯ್ದಾತನ ಭ್ರಾತನ

ಸುತನ ಪಾಲಿಸಿದನು

ಸತಿಯ ಪಡೆದವಳ ಸುತನ ಮರ್ದಿಸಿ

ಸತಿಯರ ಕೂಡಿದನು |

ಸತಿಗೆ ಕೊಟ್ಟ ವರ ಹಿತದಿ ನೀಡಲು

ಸತಿಯನ್ನಗಲಿದ ಶತಕ್ರತು ವಂದ್ಯನು 2


ಕಾಲುರಹಿತ ಕೈಕಾಲು ಮುದುರುವ

ಕೋಲರೂಪಿ ಇವನು

ಕಾಲನಂತೆ ಘನ ಕೋಪಿಯಾಗಿ ನದಿ

ಕಾಲಲಿ ಪಡೆದವನು

ಕಾಲಕ್ಷತ್ರಿಯರ ತಾ

ಬಾಲೆಯ ಸಲಹಿದನು

ಕಾಳಿವೈರಿ ಶ್ರೀ ಶಾಮಸುಂದರ

ಕಾಲಕಾಲ ನಖ ಸಖ ಕಲಿ ಭಂಜನನು 3

***