ರಾಗ: [ಘೋರಕ್ ಕಲ್ಯಾಣಿ] ತಾಳ: [ಆದಿ]
ಚೆಲುವ ರಾಯರ ನೋಡುವ ಬನ್ನಿ
ಸುಲಭದಿ ವರ ಕೊಡುವ ಪ
ವರ ಪ್ರಹ್ಲಾದ ರಾಜರೆ ಇವರು
ಹರಿಯ ಕಂಭದಿ ತೋರ್ದವರು ನಿಜದಿ
ಹರಿಮತ ಸ್ಥಾಪಿಸಿದವರು
ಪರಿಪರಿ ಕಷ್ಟವ ಸಹಿಸುತ ಪಿತನಿಗೆ
ಪರಮ ಸಂಪದದ ವರ ಬೇಡಿದರು 1
ಮರಳಿ ಶ್ರೀವ್ಯಾಸರಾಜರಾಗುತಲಿ
ಭರದಿಂದಲಿ ಬಂದ ಭೂಪಾಲನಿಗೆ
ಸರುಪದ ವ್ಯಾಧಿಯ ನೀಗುತಲಿ
ಹರಿ ಗುರು ಮಧ್ವರ ಕರುಣೆಯ ಪಡೆಯುತ
ವರ ನ್ಯಾಯಾಮೃತ ಚಂದ್ರಿಕೆ ರಚಿಸಿದ 2
ತುಂಗಾತೀರದಿ ವಾಸವ ಮಾಡಿ
ಭಂಗಗೊಳಿಸುತ(?) ಸುಜನರ ಬೇಡಿಕೆ ನೀಡಿ
ಮಂಗಳ ಕೊಡುವ ಗ್ರಂಥವ ಮಾಡಿ
ಕಂಗಳಿಂದ ಹರಿ ನೋಡಿದ ಮಹಿಮರು
ತುಂಗ ಮಹಿಮ ಗುರುಶ್ಯಾಮಸುಂದರನ ದಾಸರು 3
****