Showing posts with label ಭೀಮರಾಯನ ನಂಬಿ ಭೀಮಸೇನನ hayavadana BHEEMARAAYANA NAMBI BHEEMASENANA. Show all posts
Showing posts with label ಭೀಮರಾಯನ ನಂಬಿ ಭೀಮಸೇನನ hayavadana BHEEMARAAYANA NAMBI BHEEMASENANA. Show all posts

Saturday, 11 December 2021

ಭೀಮರಾಯನ ನಂಬಿ ಭೀಮಸೇನನ ankita hayavadana BHEEMARAAYANA NAMBI BHEEMASENANA



ಭೀಮರಾಯನ ನಂಬಿ ಭೀಮಸೇನನ
ಭೀಮಭವವಾರಿಧಿಯ ಬೇಗದಾಟುವರೆ ನಮ್ಮ ||pa||

ಬಕ ಮೊದಲಾದ ಹಿಡಿಂಬಕ ದುರ್ಜನರ ಕೊಂದು
ಸುಖಪಡಿಸಿದನಂದು ದ್ವಿಜಕುಲಜರಾಗ ಕೂಡ||1||

ಜರಾಸಂಧನ ಕೂಡೆ ವರ ಯುದ್ಧವನ್ನೆ ಮಾಡಿಸರಕು 
ಮಾಡದೆ ಕೊಂದ ಧಾರುಣಿಯೊಳಗೆ ನಿಂದ ||2||

ಅಸುರ ಕೀಚಕನೆಂಬುವ ಸತಿ ಕೃಷ್ಣೆಯಬಾಧಿಸೆ 
ಘಾಸಿಮಾಡಲು ವಂದ್ಯರ ಹೇಸದೆ ಮೋಸದಿ ಕೊಂದ||3||

ಕಡುತೃಷೆಗೆ ದುಶ್ಶಾಸನನೊಡಲ ಬಗಿದು 
ರಕ್ತಕುಡಿದಂತೆ ತೋರ್ದ ನಮ್ಮೊಡೆಯ ದ್ರೌಪದಿಪ್ರಿಯ ||4||

ಭೀಮ ತನ್ನ ಮರೆಹೊಕ್ಕ ಸುಜನರ ಕಾವಸ್ವಾಮಿ 
ಶ್ರೀಹಯವದನ ರಾಮನಾಣೆ ಸತ್ಯವಿದು ||5||
****