ankita janakiramana
ರಾಗ: ಬಿಲಹರಿ ತಾಳ: ಆದಿ
ಸಾರ್ಥಕವಾಯಿತು ಈ ನರಜನ್ಮ ಸಾರ್ಥಕವಾಯಿತು ಪ
ಸಾರ್ಥಕವಾಯಿತು ಸದ್ಗತಿ ಪಡೆಯಿತು
ಆರ್ಥಿಯಿಂದಲಿ ನಮ್ಮ ಗುರುಗಳ ಕಂಡು ಅ ಪ
ಪಾದಗಳು ನಿಮ್ಮ ಯಾತ್ರೆಯ ಮಾಡಿತು
ಉದ್ಧರಿಸು ಎಂದು ಕರಗಳು ಮುಗಿಯಿತು
ಮೋದದಿಂ ಕಂಗಳು ದರುಶನ ಪಡೆಯಿತು
ಮಧ್ವನಾಮವನ್ನು ನಾಲಿಗೆ ಜಪಿಸಿತು 1
ಎನ್ನ ಕಿವಿಗಳೆರಡು ನಿಮ್ಮ ಚರಿತೆಯ ಕೇಳಿತು
ಎನ್ನ ಮನಸು ನಿಮ್ಮಲ್ಲಿ ಸ್ಥಿರವಾಗಿ ನೆಲೆಸಿತು
ಎನ್ನ ದೇಹವು ನಿಮ್ಮ ಸೇವೆಯ ಮಾಡಿತು
ಎನ್ನ ಪೂರ್ವಾರ್ಜಿತ ಕರ್ಮ(ಪಾಪ) ತೊಲಗಿತು ಇಂದು 2
ಕರುಣಿಗಳರಸನೆ ಕರಗಳೆರಡು ಮುಗಿದು
ಶಿರಬಾಗಿ ನಮಿಸುವೆ ಪೊರೆಯುವ ಧೊರೆಯೆಂದು
ಮಾರಪಿತ ಶ್ರೀಜಾನಕಿರಮಣನ
ತೋರಿದ ಗುರು ಶ್ರೀ ರಾಘವೇಂದ್ರರ ಕಂಡು 3
****