ಆಡಿನ ಮರಿಯೆತ್ತಂಬುಧಿಯೊಳಾಡುವ ಕರಿಯೆತ್ತ
ಬೇಡಿ ತಿಂಬ ಬಿನುಗು ಮಾನವ
ಮಾಡದಿರಚ್ಯುತ ನಾನೆಂಬ ಮನವ ||ಪ||
ಯಾಡಮೂಢನೊಬ್ಬ ಎಲ್ಲಾ ಜಗದೊಳು
ಗೂಢನಾಗಿ ನೋಡುತಿಹ ಸುಖಿಯೊಬ್ಬ ಗಡ
ನಾಡರಿಯೆ ದುಃಖಿಯೊಬ್ಬ ಸುಖದಲ್ಲಿ ಲೋ-
ಲಾಡುತಿಹ ನಿರನಿಷ್ಟನೊಬ್ಬ ಗಡ ||೧||
ಕಡಲ ಕಡೆದು ಸುಧೆಯ ನೋಡಿ ತ-
ನ್ನೊಡಲ ದಣಿಯನುಂಡವನೊಬ್ಬ ಹೆ-
ಣ್ಣುಡಿಗೆಯನುಟ್ಟು ಅಸುರರ ಬಾಯ
ಹೊಡೆದು ಬಡಿಸಿದವನೊಬ್ಬ ಗಡ ||೨||
ಆಡುತಲಬ್ಧಿಯೊಳಡಗಿದದ್ರಿಯ
ಕೋಡುಗಲ್ಲನೆತ್ತಿ ಹೂಡಲು ಬಲ್ಲೆಯ
ಓಡುತಲೊಬ್ಬನೊರಗಿದ್ದನ ಕಣ್ಗೊಳೊಡದು-
ಮೂಡಿದಗ್ನಿಯಿಂದ ಸುಡುವೆಯ ||೩||
ಮಡದಿಯಿಲ್ಲದೆ ಮಂದ ನೀನೊಬ್ಬನೆ
ಮಾಡುವೆಯ ಲೆಕ್ಕವಿಲ್ಲದೆ ಮಕ್ಕಳ
ಕೂಡಿದನ ಬಹಳ ಕೋಟಿಧನಂಗಳ
ಕೂಡಿರ್ದಗೆ ಕೊಟ್ಟು ನೋಡಿ ಸುಖಿಪೆಯ ||೪||
ದೃಢವಾಗಿ ನಿನ್ನುಂಗುಟ ನಖದಿಂ-
ದೊಡಲನಾದರು ಒಡೆಯಲಾಪೆಯ
ಮೃಡಪ್ರಿಯ ಹಯವದನನಂತೆ
ಮೂಢ ಜಾತಿಯಾಗಿ ವೇದ ಓದುವೆಯ ||೫||
***
aaDina mariyettaMbudhiyoLaaDuva kariyetta
bEDi tiMba binugu maanava
maaDadirachyuta naaneMba manava ||pa||
yaaDamUDhanobba ellaa jagadoLu
gUDhanaagi nODutiha sukhiyobba gaDa
naaDariye duHkhiyobba sukhadalli lO-
laaDutiha niraniShTanobba gaDa ||1||
kaDala kaDedu sudheya nODi ta-
nnoDala daNiyanuMDavanobba he-
NNuDigeyanuTTu asurara baaya
hoDedu baDisidavanobba gaDa ||2||
aaDutalabdhiyoLaDagidadriya
kODugallanetti hUDalu balleya
ODutalobbanoragiddana kaNgoLoDadu-
mUDidagniyiMda suDuveya ||3||
maDadiyillade maMda nInobbane
maaDuveya lekkavillade makkaLa
kUDidana bahaLa kOTidhanaMgaLa
kUDirdage koTTu nODi sukhipeya ||4||
dRuDhavaagi ninnuMguTa nakhadiM-
doDalanaadaru oDeyalaapeya
mRuDapriya hayavadananaMte
mUDha jaatiyaagi vEda Oduveya ||5||
***
ಆಡಿನ ಮರಿಯೆತ್ತಂಬುಧಿಯೊಳಾಡುವ ಕರಿಯೆತ್ತ
ಬೇಡಿ ತಿಂಬ ಬಿನಗು ಮಾನವ ಮಾಡದಿರಚ್ಚುತ ನಾನೆಂಬ ಮನವ ಪ.
ಯಾಡಮೂಢನೊಬ್ಬ ಎಲ್ಲಾ ಜಗದೊಳು
ಗೂಢನಾಗಿ ನೋಡುತಿಹ ಸುಖಿಯೊಬ್ಬ ಗಡ
ನಾಡರಿಯೆ ದುಃಖಿಯೊಬ್ಬ ಸುಖದಲ್ಲಿ ಲೋ-
ಲಾಡುತಿಹ ನಿರನಿಷ್ಟನೊಬ್ಬ ಗಡ1
ಕಡಲ ಕಡೆದು ಸುಧೆಯ ನೋಡಿ ತ-
ನ್ನೊಡಲ ಧಣಿಯಉಂಡವನೊಬ್ಬ ಹೆ-
ಣ್ಣುಡಿಗೆಯನ್ನುಟ್ಟು ಅಸುರರ ಬಾಯ
ಹೊಡೆದು ಬಡಿಸಿದವನೊಬ್ಬ ಗಡ 2
ಆಡುತಲಬ್ಧಿಯೊಳಡಗಿದದ್ರಿಯ
ಕೋಡುಗಲ್ಲನೆತ್ತಿ ಹೂಡಲು ಬಲ್ಲೆಯ
ಓಡುತಲೊಬ್ಬನೊರಗಿದ್ದನ ಕಣ್ಣೊಳೊಡದು
ಮೂಡಿದÀಗ್ನಿಯಿಂದ ಸುಡುವೆಯ3
ಮಡದಿಯಿಲ್ಲದೆ ಮಂದ ನೀನೊಬ್ಬನೆ
ಮಾಡುವೆಯ ಲೆಕ್ಕವಿಲ್ಲದೆ ಮಕ್ಕಳ
ಕೂಡಿದನ ಬಹಳ ಕೋಟಿಧನಂಗಳ
ಕೂಡಿರ್ದಗೆ ಕೊಟ್ಟು ನೋಡಿ ಸುಖಿಪೆಯ 4
ದೃಢವಾಗಿ ನಿನ್ನುಂಗುಟ ನಖದಿಂ
ದೊಡಲನಾದರು ಒಡೆಯಲಾಪೆಯ
ಮೃಡಪ್ರಿಯ ಹಯವದನನಂತೆ
ಮೂಢಜಾತಿಯಾಗಿ ವೇದ ಓದುವೆಯ 5
***