ಕರೆಯೆ ಯಶೋಧಾ ಕೃಷ್ಣನ ಕರೆಯೇ
ನರಹರಿಯೆ ನಂದ ಗೋಪನ ಮರಿಯೆ ಮಾತಿಲಿ ಮಹಾ
ದೊರೆಯೇ ಈವನ ಗುಣ-
ಅರಿಯಲು ನೊಡಲಾಷ್ಚರ್ಯ ವಾಗೋಧು ನಿ-
ಮ್ಮರಮನೆಗೀತನ
ಬಾಲ ಗೋಪಾಲ ಒಳ್ಳೆ ಲೇಲೆಯಾಡುವ ನೋಡೇ
ದೊಡ್ಡ ವಿಶಾಲ ಉದರಕೆ ಬೆಣ್ಣೆ
ಪಾಲು ಕುಡಿದು ನಮ್ಮಾಲಯದೊಳು ಬಂದು
ಕಾಲಂಧಿಗೆ ಧ್ವನಿ ಆಲಿಸಿ ಕೃಷ್ಣನ
ಕಾಂತರಿದ್ದಂಥ ಏಕಾಂತ ಸ್ಥಳಕೆ ಬಂದು ನಿಂತರಿಬ್ಬರೊಳಗೆ
ಭೃಂತರ ತಿಳಿಯದೆ ಭ್ರಾಂತಳದೆ
ಎನ್ನ ಕಾಂತನೋ ಇವ ಶ್ರೀ ಕಾಂತನೋ ತಿಳಿಯದೆ
ನಂದ ನಂದನ ನಿನ್ನ ಕಂದ ಮಾಡುವುದು
ಬಾಯಿಂದ ಹೇಳಿದರೆ ಎನ್ನ
ಬಂಧುಗಳು ಭೀಮೇಶ ಕೃಷ್ಣಗೆ
ಎನ್ನ ಹೊಂದಿಸಿ ಬಿಡುವರು ಸಂದೇಹವಿಲ್ಲದೆ
***
ಕರೆಯೆ ಯಶೋದ ಕೃಷ್ಣನ ಕರೆಯೆ ಪ
ನರಹರಿಯೆ ನಂದಗೋಪನ ಮರೆಯೆ ಮಾತಲಿ ಮಹಾ
ದೊರೆಯೆ ಇವನ ಗುಣ-
ವರಿಯೆವು ನೋಡಲಾಶ್ಚರ್ಯವಾಗೋದು ನಿ-
ನ್ನರಮನೆಗೀತನ ಕರೆಯೆ 1
ನೋಡೆ ಈತಗೆ ಇನ್ಯಾರೀಡೇ ಕೋಪವ
ಮಾಡಬ್ಯಾಡೆ ಮಾತಿಗೆ ಮಾತ-
ನಾಡಿಂದಿರಾಪತಿ ಗಾಡಿಕಾರನೆಂದಾಡಿಕೊಂಬೆವೆ ನಮ್ಮ
ಕಾಡುವೋದುಚಿತವೆ 2
ಬಾಲಗೋಪಾಲ ಕೃಷ್ಣ ಲೀಲೆಮಾಡುವೊ ದೊಡ್ಡಿ ್ವ
ಶಾಲ ಉದರಕ್ಕೆ ಬೆಣ್ಣೆ
ಪಾಲುಕುಡಿದು ನಮ್ಮಾಲಯದೊಳು ಬಂದು
ಕಾಲಂದಿಗೆ ಧ್ವನಿ ಆಲಿಸಿ ಕೃಷ್ಣನ 3
ರೂಪನೋಡಿದರೆ ಸಣ್ಣ ಪೋರನೆನಿಸುವ
ಅಪಾರಮಹಿಮ ಕೃಷ್ಣನ
ವ್ಯಾಪಾರವ ನಾನಾಪರಿಯಿಂದಲಿ ಗೋಪನ ಮುಂದ್ಹೇ-
ಳೀಪುರ ಬಿಡುವೆವೆ 4
ತುರುವ ಕಾಯುತ ಭಾಳಾತುರ ವಾರಿಜಾಕ್ಷ ನಮ್ಮ
ತುರುವ ಪಿಡಿದು ನಿಂತ
ತುರುವ ಭಾರಕೆ ಸೀರೆ ಜರಿದು ಬೀಳುತಲೆ
ಸರಿಜನರೊಳು ಮಾನ ತೊರೆದಂತಾಯಿತು 5
ಕಾಂತರಿದ್ದಂಥ ಏಕಾಂತದೊಳಗೆ ಬಂದು
ನಿಂತರಿಬ್ಬರೊಳಗ-
ಭೃಂತರ ತಿಳಿಯದೆ ಭ್ರಾಂತಳಾದೆ ಎನ್ನ
ಕಾಂತನೋ ಇವ ಶ್ರೀಕಾಂತನೊ ತಿಳಿಯದು 6
ನಂದನಂದನ ನಿನ್ನ ಕಂದ ಮಾಡುವೋದು ಬಾ-
ಯಿಂದ ಹೇಳಿದರೆನ್ನ
ಬಂಧು ಜನರು ಭೀಮೇಶಕೃಷ್ಣಗೆ -
ನ್ನೊ ್ಹಂದಿಸಿಬಿಡುವೋರು ಸಂದೇಹವಿಲ್ಲದೆ 7
****