by ಹನುಮೇಶ ವಿಠಲ
ರಾಗ : ಬೇಹಾಗ್ ತಾಳ : ಅಟ್ಟ
ಕೇಳು ಮೊರೆ ಶಾಂತ
ತಾಳು ರಂಗ ನಿನ್ನೊಳು ನಾನಿರುವೆ ಕೃಷ್ಣಾ ।।ಪ॥
ನಾಳೆಯೆಂದರೆ ತಾಳೋದಾಗೋದು
ಬಾಳ್ವೆನೆಂದರಿಂದಿಲ್ಲ
ಆಳೋ ಅರಸನೇ ।।ಅ.ಪ॥
ಗಾಣ ಎಳೆಯುವ
ಕ್ವಾಣನಾದೆನೋ
ಕಾಣವೋ ನಯನ ತ್ರಾಣ ಕಡಿಯಿತು
ಗೋಣ ನಿನಗೇನಾ ಕಾಣಿಕೆಯನಿತ್ತೆ ವೇಣುಗೋಪಾಲ ।।೧।।
ತಾಯಿಯ ಮತಿ ಬೇರೆ
ಮಾಯಾ ಮಗನಿಗೆ ನಾಯನಾಗಿರುವೆ
ಗಾಯದ ಮೇಲೆ ನೋಯಿಸುವರಯ್ಯಾ
ಮಾಯಾ ಬಿಡಿಸಿ ಕಾಯೋ ನರಹರಿ ।।೨।।
ಬೇಡುವರು ಧನ ಕಾಡಿ ಎನ್ನನ್ನು
ನೋಡೊ ಫಣಿಶಯನಾ ರೂಢಿಯೋಳು ಕುಣಿಸಾಡುತಿಹರಯ್ಯಾ
ನಾಡಿಗೊಡಯ್ಯಾ
ಕೈಜೋಡಿಸೆನಯ್ಯ ।।೩।।
***********